|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿವೇಕಾನಂದ ಕಾಲೇಜಿನಲ್ಲಿ ವೃತ್ತಿಪರ ಕೌಶಲ್ಯಾಭಿವೃದ್ಧಿ- ವರ್ಚುವಲ್ ಕಾರ್ಯಾಗಾರ

ವಿವೇಕಾನಂದ ಕಾಲೇಜಿನಲ್ಲಿ ವೃತ್ತಿಪರ ಕೌಶಲ್ಯಾಭಿವೃದ್ಧಿ- ವರ್ಚುವಲ್ ಕಾರ್ಯಾಗಾರ



ಪುತ್ತೂರು: ವಿವೇಕಾನಂದ ಕಾಲೇಜು ಪುತ್ತೂರು, ವ್ಯವಹಾರ ಆಡಳಿತ ವಿಭಾಗ, ಉದ್ಯೋಗ ಹಾಗೂ ತರಬೇತಿ ಘಟಕ ಹಾಗೂ ಐಕ್ಯೂಎಸಿ ಇದರ ಸಹಯೋಗದಲ್ಲಿ, ವ್ಯವಹಾರ ಆಡಳಿತ ವಿಭಾಗದ ವಿದ್ಯಾರ್ಥಿಗಳಿಗಾಗಿ ಪ್ರೊಫೆಷನಲ್ ಸ್ಕಿಲ್ ಡೆವಲಪ್ಮೆಂಟ್ ವಿಷಯದ ಬಗ್ಗೆ ವರ್ಚುವಲ್ ಕಾರ್ಯಾಗಾರವನ್ನು ಆ.29 ರಂದು ಆಯೋಜಿಸಲಾಗಿತ್ತು. ಕಾಲೇಜಿನ ವ್ಯವಹಾರ ನಿರ್ವಹಣಾ ವಿಭಾಗದ ಹಿರಿಯ ವಿದ್ಯಾರ್ಥಿ ಪ್ರಸ್ತುತ ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ, ಅರೋಮ ಡಿಸೆಬಿಲಿಟಿ ಸಪೋರ್ಟ್ ಸಂಸ್ಥೆಯಲ್ಲಿ ಅಲ್ಲೋಕೇಷನ್ ಆಫೀಸರ್ ಕಾರ್ಯ ನಿರ್ವಹಿಸುತ್ತಿರುವ ಉದಯಕುಮಾರ್, ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

  Upayuktha


ಸರಕಾರಿ ಶಾಲೆ, ಕನ್ನಡ ಮಾಧ್ಯಮದ ಕಲಿಕೆ ಎಂದಿಗೂ ಯಶಸ್ಸಿಗೆ ನ್ಯೂನತೆ ಅಲ್ಲ. ಶ್ರಮ ಹಾಗೂ ಹಾಗೂ ಗುರಿ ವ್ಯಕ್ತಿಯನ್ನು ಉನ್ನತಿಗೆ ತೆಗೆದುಕೊಂಡು ಹೋಗುತ್ತದೆ. ಜೀವನದಲ್ಲಿ ಭವಿಷ್ಯದ ಬಗ್ಗೆ ಗುರಿ ಹಾಗೂ ದಾರಿ ಸರಿಯಾಗಿದ್ದರೆ ಯಶಸ್ಸನ್ನು ಸಾಧಿಸಬಹುದು. "ನಾವು ವೇಗವಾಗಿ ಹೋಗಲು ಬಯಸಿದರೆ ಒಬ್ಬಂಟಿಯಾಗಿ ಹೋಗಬೇಕು, ಆದರೆ ಬಹಳಷ್ಟು ದೂರ ಸಾಗಲು ಬಯಸಿದರೆ ಜನರೊಂದಿಗೆ ಹೋಗಬೇಕು. ಜನರೊಂದಿಗೆ ಬೆರೆಯುವ ಮೂಲಕ ನಾವು ನಮ್ಮ ಜ್ಞಾನ ಹಾಗೂ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಬಹುದು. ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ ಎಲ್ಲರಿಗೂ ಒಂದು ಮಿತಿ ಇರುತ್ತದೆ. ಶಿಕ್ಷಣವು ನಮ್ಮ ಮೊದಲ ಹಾಗೂ ಉತ್ತಮ ಆದ್ಯತೆಯಾಗಿರಬೇಕು ಎಂದು ಹೇಳಿದರು.


ಹಾಗೆಯೇ ನಾವು ಆರ್ಥಿಕವಾಗಿ ಸ್ವತಂತ್ರರಾಗುವ ವರೆಗೂ ನಾವು ಎಂದಿಗೂ ಸ್ವಾತಂತ್ರ ರಲ್ಲ. ನನಗೆ ಸರಿಯಾದ ಆಕಾಶ ಸಿಗುತ್ತಿಲ್ಲವೆಂದು ಆದರೆ ನಮ್ಮಲ್ಲಿ ಜ್ಞಾನ ಹಾಗೂ ಕೌಶಲ್ಯಗಳ ಕೊರತೆ ಇದೆ ಎಂದು ಅರ್ಥ, ಸಮಯದ ಮಹತ್ವವನ್ನು ತಿಳಿದುಕೊಳ್ಳುವುದು ಯಶಸ್ಸಿಗೆ ಬಹುಮುಖ್ಯವಾದುದು ಎಂದು ಹೇಳಿದರು.


ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ಶ್ರೀಮತಿ ರೇಖಾ ಸ್ವಾಗತಿಸಿ, ಉಪನ್ಯಾಸಕ ಗೌತಮ್ ಪೈ ಕಾರ್ಯಕ್ರಮ ನಿರೂಪಿಸಿದರು. ವ್ಯವಹಾರ ಆಡಳಿತ ವಿಭಾಗದ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


0 تعليقات

إرسال تعليق

Post a Comment (0)

أحدث أقدم