ಎಲ್ಲಿರುವೆ ತಂದೆ ಬಾರೊ ಹೇ ಮಾರುತಿ|ಪ.|
ಎಲ್ಲೆಲ್ಲಿ ನೋಡಿದರೂ ಅಲ್ಲಿ ನಿನ್ನ ಕೀರುತಿ
ಅಲ್ಲಲ್ಲಿ ನೀನಿರುತಿ ಹೇ ಮಾರುತಿ|| ಅ.ಪ.||
ಅಂದು ರಘುನಂದನಗೆ ವಂದಿಸುತ ಇಂದಿರೆಯ|
ಕಂಡು ಕೊಂಡಾಡಿದೆಯಲ್ಲೊ ಸೇ ಮಾರುತಿ||
ರಂಗನ ಅರ್ಧಾಂಗಿಗೆ ನೀ ಉಂಗುರವನಿತ್ತು ವನ-|
ಭಂಗವನು ಗೈದೆಯಲ್ಲೊ ಹೇ ಮಾರುತಿ||
ರಕ್ಕಸರ ಸೊಕ್ಕು ಮುರಿದಿಕ್ಕಿ ಲಂಕೆಗೆ ಉರಿ|
ಸೊಕ್ಕಿ ಓಡಾಡಿದೆಯಲ್ಲೊ ಹೇ ಮಾರುತಿ||
ಶೇಷಗಿರಿ ವಾಸಗೆ ನೀ ದಾಸನೆಂದು ನಂಬಿದ ಈ|
ದಾಸಗೆ ದಯs ಮಾಡೋ ಹೇ ಮಾರುತಿ||
-ವಿಶ್ವ
(U S Vishweshwara Bhat)
ಚಿತ್ರ: ವಿದ್ಯಾರ್ಥಿವಾಹಿನೀ- ಹವ್ಯಕ ಮಹಾಮಂಡಲ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ