|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜಗದ್ವಂದ್ಯ ಶ್ರೀಕೃಷ್ಣ- ದುಷ್ಟ ಶಿಕ್ಷಣ, ಶಿಷ್ಟ ರಕ್ಷಣದ ಪುಣ್ಯಾವತಾರ

ಜಗದ್ವಂದ್ಯ ಶ್ರೀಕೃಷ್ಣ- ದುಷ್ಟ ಶಿಕ್ಷಣ, ಶಿಷ್ಟ ರಕ್ಷಣದ ಪುಣ್ಯಾವತಾರ

 



ನಾ ಎಷ್ಟು ಹೇಳಿದರೂ ಸಾಲದು ಕೃಷ್ಣನ ಲೀಲೆಗಳ ಕುರಿತು. 

ಪ್ರತಿ ಮನೆಯಲ್ಲೂ ಪ್ರತಿ ನಿತ್ಯ ನೆನೆಯುವಂತಹ ಕೃಷ್ಣ ನಾಮ ಈ ನಾಮವೇ ಮಧುರ. ಪುಟ್ಟ ಪುಟ್ಟ ಹೆಜ್ಜೆಯನ್ನು ಹಾಕಿ ಬೆಣ್ಣೆಯನ್ನು ಬಿಂದಿಗೆಯಲ್ಲಿಟ್ಟು ಎಲ್ಲರೂ ಪುಟ್ಟ ಕೃಷ್ಣನನ್ನು ಬರಮಾಡಿಕೊಳ್ಳುತ್ತಾರೆ. ದೇವಕಿ ಮಾತೆಯ ಅಷ್ಟಮ ಗರ್ಭವಾಗಿ ಕೃಷ್ಣನು ಜನಿಸುತ್ತಾನೆ. ಕೃಷ್ಣನ ಹುಟ್ಟಿಗೂ ಮುಂಚೆ ಏಳು ಶಿಶುಗಳನ್ನು ಕಂಸನು ಕೊಲ್ಲುತ್ತಾನೆ.  ಎಂಟನೇ ಶಿಶುವಾಗಿ ಕೃಷ್ಣನು ಕಾರಾಗೃಹದಲ್ಲಿ ಹುಟ್ಟಿದ. ಹುಟ್ಟುತ್ತಲೇ ಚಮತ್ಕಾರ ಮಾಡುತ್ತಾ ಬಂದ ಅನೇಕಾನೇಕ ಕತೆಗಳು ಇವೆ. ದುಷ್ಟ ಶಿಕ್ಷಣ, ಶಿಷ್ಟ ರಕ್ಷಣ ಕೃಷ್ಣನ ಅವತಾರದ ಸಾರ. 


ವಿಷ್ಣು ಹಿಂದಿನ ಅವತಾರಗಳಲ್ಲಿ ಬಿಳಿ, ಕೆಂಪು ಮತ್ತು ಹಳದಿ ಬಣ್ಣದಲ್ಲಿ ಕಾಣಿಸಿಕೊಂಡಿದ್ದು, ಈ ಬಾರಿ ಕೃಷ್ಣವರ್ಣನಾಗಿದ್ದಾನೆ. ಹೀಗಾಗಿ “ಕೃಷ್ಣಾ” ಎಂದು ನಾಮಕರಣ ಮಾಡಿದರು. ಗರ್ಗ ಮುನಿಗಳಿಗೆ ವಿಷ್ಣುವೇ ಈ ಮಗು ಎಂದು ತಿಳಿದಿತ್ತು. ಅವರು ಬಲರಾಮ, ಕೃಷ್ಣ ಎಂದು ಇಬ್ಬರಿಗೂ ನಾಮಕರಣ ಮಾಡಿದರು.


ಇದೀಗ ಭಗವಾನ್ ಶ್ರೀಕೃಷ್ಣ ಎಲ್ಲರ ಅಚ್ಚುಮೆಚ್ಚಿನ ದೇವರಾಗಿದ್ದಾನೆ. ಆದರೆ ಶ್ರೀಕೃಷ್ಣ ಕೃಷ್ಣಪಕ್ಷದಲ್ಲಿ ಜನಿಸಿದ್ದರಿಂದ ಶ್ರೀಕೃಷ್ಣ ಎಂದು ಹೆಸರು ಬಂತು ಎಂದು ಹೇಳಲಾಗುತ್ತದೆ. ಶ್ರೀ ಎಂದರೆ ಲಕ್ಷ್ಮೀ ಆದ್ದರಿಂದ ಶ್ರೀಕೃಷ್ಣ.  


ಸರ್ವ ದುಃಖ ನಿವಾರಕ ಮಂತ್ರ


ಹರೇ ರಾಮ ಹರೇ ರಾಮ ರಾಮ ಹರೇ ಹರೇ 

ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ. 


ಆಡಿಸಿದಳು ಯಶೋಧೆ ಜಗದೋದ್ದಾರನ. ಎಂಬ ದಾಸರಗೀತೆ ಕೇಳಿದರೆ ತಾಯಿಯ ಪ್ರೀತಿ ಪಡೆಯಲು ಮತ್ತು ಜಗಕೆ ತನ್ನ ಮುದ್ದು ಚೇಷ್ಟೆಗಳ ತೋರಲು ಭೂಮಿಯ ಮೇಲೆ ಜನಿಸಿ ಅಂದಿನಿಂದ ಇಂದಿನವರೆಗೂ ಎಲ್ಲರ ರಕ್ಷಕನಾಗಿರುವನು ನಮ್ಮ ಚೆಲುವ ಕೃಷ್ಣನು. 


ಕೃಷ್ಣನ ಬಾಲ್ಯದ ಘಟನೆಗಳು ಅತ್ಯಂತ ಸ್ವಾರಸ್ಯಕರ ಎಷ್ಟು ಕೇಳಿದರೂ ಇನ್ನೂ ಕೇಳಬೇಕೆನ್ನುವಷ್ಟು ಸಂತೋಷವನ್ನು ನೀಡುತ್ತವೆ. ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ ಎಲ್ಲಾ ಹುಡುಗರು ಸೇರಿ ನನ್ನ ಬಾಯಿಗೆ ಬೆಣ್ಣೆ ಮೆತ್ತಿದರಮ್ಮ ಎಂಬ ಹಾಡಿನ ಮೂಲಕ ಕೃಷ್ಣನ ತುಂಟತನದ ಅರಿವು ನಮಗಾಗುತ್ತದೆ.


ತಾಯಿ ಯಶೋಧೆಯೊಂದಿಗಿನ ತುಂಟಾಟ ಬೆಣ್ಣೆ ಕದಿಯುವುದು ಮಡಿಕೆ ಒಡೆಯುವುದು ಗೋಪಿಕೆಯರ ಸೀರೆ ಕದೆಯುವುದು ಗೆಳೆಯರೊಂದಿಗೆ ಆಟೋಟ ರಾಧೆಯೊಂದಿಗಿನ ಪ್ರೀತಿ ತಾಯಿಗೆ ಬಯಲಿ ಜಗವ ತೋರಿದ ಕೃಷ್ಣ ಗೋಕುಲದ ನಂದನ, ಕೃಷ್ಣನ ಕೊಳಲಿಗೆ ಗೋವುಗಳು ಗೋಪಿಕೆಯರ ಗೋಕುಲ ವಾಸಿಗಳು ಎಲ್ಲರೂ ಮೈ ಮರೆತು ಹೋಗುತ್ತಿದರಂತೆ. ಮುಂದೆ ಮಥುರಾಗೆ ಹೋದ ಕೃಷ್ಣನ ಲೀಲೆಗಳು ಎಣಿಸಲಾಗದಷ್ಟು ಇವೆ. ಇಂದಿಗೂ ಕೃಷ್ಣನ ಬೃಂದಾವನ ಮಥುರಾದಲ್ಲಿ ಕೃಷ್ಣನ ನೆನಪಿನ ಕುರುಹುಗಳಿವೆ. ಅಲ್ಲದೇ ಅರಬ್ಬೀ ಸಮುದ್ರದಲ್ಲಿ ಮುಳುಗಿದ ಕೃಷ್ಣನ ಸ್ವರ್ಣನಗರಿ ದ್ವಾರಕೆಯ ಬಗ್ಗೆ ಕೂಡ ಅನೇಕ ಪುರಾವೆಗಳು ದೊರೆತಿವೆ ಮತ್ತು ಸಂಶೋಧಕರು ಅದನ್ನು ಪುರಾತತ್ವ ಇಲಾಖೆಗೆ ತೋರಿದ್ದಾರೆ. ಮಥುರಾ, ಬೃಂದಾವನ, ಕುರುಕ್ಷೇತ್ರ, ಪುರಿ, ಗುರುವಾಯೂರ್, ದ್ವಾರಕಾ, ಉಡುಪಿ ಇವೆಲ್ಲವೂ ಪ್ರಸಿದ್ಧ ಕೃಷ್ಣನನ ಹೆಸರಿನಲ್ಲಿನ ಪುಣ್ಯ ಕ್ಷೇತ್ರಗಳು.  


ದಾಸಾನು ದಾಸರೆಲ್ಲರು ಶ್ರೀಕೃಷ್ಣನಿಗೆ ಶರಣಾಗಿ ಕೋಟಿ ಕೋಟಿ ಹಾಡುಗಳು ನಾಮಗಳನ್ನು ಶ್ರೀಕೃಷ್ಣನಿಗೆ ಸಮರ್ಪಿಸಿದ್ದಾರೆ.


ಕೃಷ್ಣನ ಬಾಲ್ಯವನ್ನು ಕೃಷ್ಣನ ಕುರಿತು ನಮ್ಮ ಪುರಂದರದಾಸರು ಕನಕದಾಸರು ಸಹಸ್ರಾರು ಗೀತೆಗಳನ್ನು ರಚಿಸಿದ್ದಾರೆ, ಪುರಂದರ ದಾಸರ ಕಣ್ಣಮುಂದೆ ಕೃಷ್ಣನು ಪ್ರತ್ಯಕ್ಷವಾದಂತೆ,  ಕೃಷ್ಣನು ದಾಸರಿಗೆ ತನ್ನ ತುಂಟ ಚೇಷ್ಟೆಗಳನ್ನು ಅವನ ಲೀಲೆಗಳನ್ನು ಕಣ್ಣ ಮುಂದೆ ಕಂಡಂತೆ ಆಗುತ್ತಿತ್ತು. ಅದರಿಂದ ಕೃಷ್ಣನ ಮೇಲೆ ಹಲವಾರು ಗೀತೆಗಳನ್ನು ರಚಿಸಿದರು. ಮೀರಾಬಾಯಿಯು ಕೃಷ್ಣನೇ ತನ್ನ ಪತಿ ಮತ್ತು ದೈವೆಂದು ಭಾವಿಸಿ ಕೃಷ್ಣನನ ಮೇಲಿನ ಪ್ರೀತಿ ಮತ್ತು ಭಕ್ತಿಯನ್ನು ತಂಬ ಹಾಡುಗಳ ಮೂಲಕ ವ್ಯಕ್ತ ಪಡಿಸಿದಳು. 


ಮನುಷ್ಯನು ಹೇಗೆ ಬದುಕಬೆಂಬ ಸತ್ಯವನ್ನು ಜಗಕೆ ತೋರಲು ಒಂದು ದೊಡ್ಡ ಉದಾಹರಣೆಯೇ ಕೃಷ್ಣನ ಜನ್ಮದ ಸಿದ್ದಾಂತ. ಧರ್ಮ ಮತ್ತು ಕರ್ಮಗಳ ನಡುವಿನ ಜೀವನವನ್ನು ತನ್ನ ಕೃಷ್ಣಾವತಾರದಲ್ಲಿ ತೋರಿದನು ತಾನೆ ದೈವ ತಾನೇ ಶಕ್ತಿ ಆದರೂ ತನ್ನ ಆತ್ಮದ ಕರ್ಮದ ಫಲವನ್ನು ಹೇಗೆ ಒಬ್ಬ ವ್ಯಕ್ತಿ ಹೇಗೆ ಅನುಭವಿಸಬೇಕು ಮತ್ತು ಹೇಗೆ ಜೀವನವನ್ನು ನಡೆಸಬೇಕೆಂಬ ಸಂದೇಶ ನೀಡಿದ್ದು ಈ ಕೃಷ್ಣಾವತಾರ.  


ಕೃಷ್ಣನು ದ್ವಾಪರಯುಗದಲ್ಲಿ ಜನಿಸಿ ಕಲಿಯುಗದಲ್ಲಿ ಜೀವನ ಮರಣ ಆತ್ಮದ ಪ್ರಯಾಣ ಮಾನವ ಜೀವನದ ಸಾರವೆಲ್ಲವನ್ನು ತನ್ನ ಗೀತಾಭೋದನೆಯಿಂದ ತಿಳಿಸಿದ್ದಾನೆ, ಭಗವದ್ಗೀತೆ ಒಂದು ಓದಿದರೆ ಸಾಕು ಜೀವನಲ್ಲಿ ಎಲ್ಲಾ ಸಮಸ್ಯೆಗಳಿಗೆ ಮತ್ತು ಪ್ರಶ್ನೆಗಳಿಗೆ ಉತ್ತರ ದೊರೆಯುವುದು.


ಧರ್ಮ ಕರ್ಮ, ಜೀವನ ಮರಣ, ಪಾಪ ಪುಣ್ಯ, ಇಷ್ಟ ಕಷ್ಟ, ಸ್ವಧರ್ಮ ಜನಪರ ಧರ್ಮ, ಮೋಕ್ಷ ಸ್ವರ್ಗ ನರಕಗಳ ದಾರಿ, ರಾಜ ನೀತಿ, ನೀತಿ ಅನೀತಿ, ಪ್ರೀತಿ, ಪ್ರೇಮ, ಸಂಬಂಧ, ಯೌವನ, ವೃದಾಪ್ಯ ಹೇಗೆ ಎಲ್ಲಾದರ ಬಗ್ಗೆ ಸಂಪೂರ್ಣ ಜ್ಞಾನ ಕಲಿಯುಗದ ಅಂತ್ಯದವರೆಗೂ ಮಾನವನ ಜೀವನಕ್ಕೆ ಬೇಕಾಗುವ ಎಲ್ಲಾ ಉತ್ತರಗಳನ್ನು ಗೀತೆಯಿಂದ ಮಾನವ ಕುಲಕ್ಕೆ ಒಂದು ದೊಡ್ಡ ವರವನ್ನು ಶ್ರೀಕೃಷ್ಣನು ನೀಡಿದ್ದಾನೆ. ಮನುಕುಲದ ರಕ್ಷಕ ದೇವನು ನಮ್ಮ ಶ್ರೀ ಕೃಷ್ಣನು.


ಧರ್ಮ ಮತ್ತು ಕರ್ಮಗಳ ಕುರಿತು ನೀಡಿದ ಮಾನವ ಕುಲಕ್ಕೆ ದೊಡ್ಡ ವರ ನಾವು ಅವುಗಳ ಸರವನ್ನು ತಿಳಿಯದೆ ಆಧುನಿಕತೆಯ ಅಂಚಿನಲ್ಲಿ ನಮ್ಮ ನಿಜವಾದ ಜ್ಞಾನದಿಂದ ದೂರವಾಗುತ್ತಿದ್ದೇವೆ. ಈ ಸಂದರ್ಭದಲ್ಲಿ ನನ್ನ ಒಂದು ಆಸೆ ಏನೆಂದರೆ ಪಶ್ಚಿಮ ರಾಷ್ಟ್ರಗಳು ಗೀತಾಧ್ಯಯನ ಮಾಡುವಾಗ ನಾವು ಅದಕ್ಕೆ ಕೊಡಬೇಕಾದಷ್ಟು ಮಹತ್ವವನ್ನು ನೀಡುತ್ತಿಲ್ಲ. ಎಲ್ಲಾ ಶಾಲೆಗಳಲ್ಲಿ ಒಂದು ಪಾಠದಂತೆ ನಮ್ಮ ಗೀತಾ ಬೋಧನೆ ಮಾಡಬೇಕು.  


ಗೀತೆಯಲ್ಲಿ ಶ್ರೀಕೃಷ್ಣನು ಕರಮ್ ಕರಿಯಿ ಸೋ ಕರ್ ಫಲ್ ಕೆ ಆಶಾಮತ್ ಕರ್ ಎಂದು ತಿಳಿಸುತ್ತಾನೆ. ನಿನ್ನ ಕರ್ಮವನ್ನು ಅಂದರೆ ಕೆಲಸವನ್ನು ನೀನು ಮಾಡು ಫಲಾನುಫಲಗಳ ಆಸೆಯನ್ನು ಇಡಬೇಡ ನಮ್ಮ ಕರ್ಮಗಳಿಗೆ ತಕ್ಕ ಫಲ ದೊರೆತೇ ದೊರೆಯುತ್ತೆ ಇದುವೇ ಕರ್ಮ ಸಿದ್ದಂತ, ಸ್ವರ್ಗ ನರಕಗಳು ಬೇರಿಲ್ಲ ಎಲ್ಲವನ್ನು ನಮ್ಮ ನಮ್ಮ ಕರ್ಮಾನುಸಾರದಂತೆ ಇಲ್ಲಿಯೇ ಕಾಣಬೇಕು.


ಮಾಸಿದ ಬಟ್ಟೆಯ ಬಿಟ್ಟು ಬೇರೆ ಧರಿಸಿದ ಹಾಗೆ ದೇಹವು ಸ್ಥಿರವಲ್ಲ ವಸ್ತ್ರದಂತೆ ಆತ್ಮ ದೇಹವನ್ನು ಬದಲಿಸುತ್ತದೆ ಆದರೆ ನಮ್ಮ ಕರ್ಮ ಫಲಗಳು ಆತ್ಮದ ಜೊತೆಯೇ ಇರುತ್ತದೆ. ಕೃಷ್ಣನ ಕುರಿತು ಹೇಳುತ್ತಾ ಹೋದರೆ ತಷ್ಟು ಪುಟಗಳಿದ್ದರೂ ಸಾಲದಾದಾವು.


ಯಾವಾಗ ಅಧರ್ಮ ತಲೆ ಎತ್ತುವುದೇ ಧರ್ಮ ಸ್ಥಾಪನೆಗಾಗಿ ವಿಷ್ಣುವು ಹುಟ್ಟಿ ಬರುವುದಾಗಿ ಹೇಳಿದ್ದಾನೆ. ಅಂತಹ ದಶಾವತಾರಗಳಲ್ಲಿ ಅತ್ಯಂತ ಪ್ರಮುಖ ರಾಮ ಮತ್ತು ಕೃಷ್ಣಾವತಾರಗಳು. ದೇವರು ತಾನೇ ಭೂಮಿಯಮೇಲೆ ಮನುಷ್ಯನಾಗಿ ಬಾಳಿದ ಅವತಾರಗಳು ಇವು.


ಪುಟ್ಟ ಹೆಜ್ಜೆಯನಿಟ್ಟು ಕೃಷ್ಣನು ಮತ್ತೆ ಮತ್ತೆ ಬಂದು ದಿಟ್ಟನಾಗಿ ಜಗದ ಕಷ್ಟಗಳನ್ನು ನಿವಾರಿಸಲಿ ಎಂದು ಬೇಡುತ್ತೇನೆ.

ಜೈ ಶ್ರೀಕೃಷ್ಣ..... 


-ಹೇಮಾ ವೆಂಕಟೇಶ್ ಹಂದ್ರಾಳ

ಬಾಗಲಕೋಟೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم