ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ರೋಟರಿ ಕ್ಲಬ್ ವತಿಯಿಂದ ಗಣಕಯಂತ್ರಗಳ ಹಸ್ತಾಂತರ

Upayuktha
0



ಪುಂಜಾಲಕಟ್ಟೆ: ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ (ಆ.3) ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಕ್ಲಬ್ ಮಡಂತ್ಯಾರು, ರೋಟರಿ ಕ್ಲಬ್ ಡೌನ್ ಟೌನ್ ಮಂಗಳೂರು, ರೋಟರಿ ಕ್ಲಬ್ ಸೀಸೈಡ್ ಮಂಗಳೂರು, ರೋಟರಿ ಕ್ಲಬ್ ಮಿಡ್ ಟೌನ್ ಮಂಗಳೂರು ಇವರ ವತಿಯಿಂದ ಗಣಕ ಯಂತ್ರಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು.


ರೋಟರಿ ಕ್ಲಬ್ ಗಳ ಎಲ್ಲಾ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಗಣಪತಿ ಭಟ್ ಕುಳಮರ್ವ ಅವರು ಗಣಕ ಯಂತ್ರಗಳನ್ನು ಸ್ವೀಕರಿಸಿದರು.


ಬೋಧಕ‌ ಸಿಬ್ಬಂದಿ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು. IQAC ಸಂಯೋಜಕರಾದ ಪ್ರೊ. ರವಿಶಂಕರ್ ಅವರು ಸ್ವಾಗತಿಸಿ ವಂದಿಸಿದರು. ರೋಟರಾಕ್ಟ್ ಘಟಕದ‌ ಸಂಯೋಜಕರಾದ ಡಾ. ವಿಶಾಲ್‌ಪಿಂಟೊ ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top