ಸಿರಿಧಾನ್ಯದ ಸಭೆಯಲ್ಲಿ ಪುಟಿದೆದ್ದ ಬಾಕಾಹುವಿನ ಆಸಕ್ತಿ

Upayuktha
0


ಇಂದು ದಾವಣಗೆರೆ ತಾಲೂಕಿನ ಆಲೂರಿನಲ್ಲಿ 'ಸಿರಿಧಾನ್ಯಗಳ ಮಹತ್ವ’ದ ಬಗ್ಗೆ ಮಾಹಿತಿ ಸಭೆ. ಎಸ್ಕೆಡಿಆರ್ಡೀಪಿ ಮತ್ತು ದಾವಣಗೆರೆ ಕೇವೀಕೆ ಸಂಯುಕ್ತವಾಗಿ ಈ ಸಭೆ ಏರ್ಪಡಿಸಿದ್ದುವು. ಕೇವೀಕೆಯ ತೋಟಗಾರಿಕಾ ತಜ್ಞ ಡಾ. ಬಸವನಗೌಡ ಮಾತು ನಿಲ್ಲಿಸುವ ಮೊದಲು ಸಭಿಕರೊಬ್ಬರಿಂದ 'ಅದೇನು ಆ ಬಾಕಾಹು, ಅದರ ಬಗ್ಗೆ ತಿಳಿಸಿ’ ಎಂಬ ವಿನಂತಿ. ಬಸವನಗೌಡರ ಕೇವೀಕೆ ಈ ಬಗ್ಗೆ ನಾಲ್ಕು ದಿನಗಳ ಹಿಂದೆ ವೆಬಿನಾರ್ ಏರ್ಪಡಿಸಿತ್ತು. ಅವರು ಬಾಕಾಹು (ಬಾಳೆಕಾಯಿ ಹಿಟ್ಟು) ತಯಾರಿ, ಅದರ ಉಪಯೋಗದ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟರು.


"ಆದಷ್ಟು ಬೇಗ ಬಂದು ನಮಗೆ ಒಂದು ತರಬೇತಿ ಕೊಡಿ" ಎಂಬ ವಿನಂತಿ ಬಂತು ರೈತರಿಂದ. "ಅಲ್ಲಿನ ಮಂದಿ ತುಂಬಾ ಕ್ರಿಯಾಶೀಲರಿದ್ದಾರೆ. ಎರಡು - ತಪ್ಪಿದರೆ ಮೂರು ವಾರದೊಳಗೆ ಬಂದು ತರಬೇತಿ ಕೊಡುತ್ತೇವೆ ಎಂದು ಪ್ರಾಮಿಸ್ ಮಾಡಿ ಬಂದಿದ್ದೀವಿ" ಎನ್ನುತ್ತಾರೆ ಡಾ. ಬಸವನಗೌಡ.



ಪುತ್ತೂರಿನ ಯುವ ಉದ್ಯಮಿ, ಸಾವಯವ ಉತ್ಪನ್ನಗಳ ಮಳಿಗೆ ನಡೆಸುತ್ತಿರುವ ಸುಹಾಸ್ ಮರಿಕೆ ಅವರು ಇಂದಿನಿಂದ 'ಬಾಕಾಹು' ವಿನಿಂದ ತಯಾರಿಸಿದ ಕುಕೀಸ್‌ಗಳ ಮಾರಾಟ ಆರಂಭಿಸುತ್ತಿದ್ದಾರೆ.


-ಮಾಹಿತಿ: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು


Key Words: Banana Flour, Banana Powder, Bakahu, Davanagere, KVK, SKDRDP, ಬಾಕಾಹು, ಬಾಳೆ ಕಾಯಿ ಹುಡಿ, ಬಾಕಾಹು ಆಂದೋಲನ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top