ಸವಿರುಚಿ: ಬಾಕಾಹು ಖಾಖ್ರಾ

Upayuktha
0

ಶಿರಸಿ 'ಕದಂಬ’ ಬಾಕಾಹು ಪಾಕ ಸ್ಪರ್ಧೆಯ ಖಾರ ತಿಂಡಿ ವಿಭಾಗದಲ್ಲಿ ಮೂರನೆಯ ಬಹುಮಾನ ವಿಜೇತ ತಯಾರಿ



ಪಾಕ: ಜಗದೀಶ ವಿ ಹೆಗಡೆ ಬಾಳೆಹದ್ದ, ಯಲ್ಲಾಪುರ


ಸಾಮಗ್ರಿ: 1 ಕಪ್ ಬಾಕಾಹು, ಅರ್ಧ ಕಪ್ ಗೋಧಿ ಹಿಟ್ಟು, 2 ಚಮಚ ಕಡ್ಲೆ ಹಿಟ್ಟು, 1.5 ಚಮಚ ಅರಿಸಿನ ಹಿಟ್ಟು, 1 ಚಮಚ ಜೀರಿಗೆ ಹುಡಿ, 3 ಚಮಚ ಕಾರದ ಪುಡಿ, 3 ಚಮಚ ಕಸೂರಿ ಮೇಥಿ, (ಕಸೂರಿ ಮೇಥಿ ಒಣಗಿಸಿದ ಮೆಂತೆಸೊಪ್ಪು), 1 ಲೋಟ ಹಾಲು ಮತ್ತು ರುಚಿಗೆ ತಕ್ಕಷ್ಟು ಉಪ್ಪು.


ವಿಧಾನ: ಇವನ್ನೆಲ್ಲ ಕಲಸಿ ರೊಟ್ಟಿಯಂತೆ ತೆಳುವಾಗಿ ಲಟ್ಟಿಸಿ ಕಾವಲಿ ಮೇಲೆ ಹಾಕಿ.  ಖಾಖ್ರಾ ದ ಮೇಲೆ ಚೆನ್ನಾಗಿ ಕೊಬ್ಬರಿ ಎಣ್ಣೆ ಹಾಕಿ. ಖಾಕ್ರಾ ಕಾವಲಿ ಮೇಲೆ ಸುಡುತ್ತಿರುವಾಗ ದಪ್ಪ ಬಟ್ಟೆಯಿಂದ ಅದರ ಮೇಲೆ ಒತ್ತುತ್ತಿರಬೇಕು. ನಸುಗೆಂಪು ಬಣ್ಣಕ್ಕೆ ಬಂದರೆ ಅದು ರೆಡಿ.


ಇದನ್ನು ಒಂದು ತಿಂಗಳ ತನಕ ಒಣ ಪಾತ್ರದಲ್ಲಿ ಸಂಗ್ರಹಿಸಿ ಬಳಸಬಹುದು. ಎಲ್ಲರಿಗೂ ಇಷ್ಟವಾಗುವ ತಿಂಡಿ.


(ಕೃಜ್ಞತೆಗಳು: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)


Key Words: Banana Flour, Banana Powder, Banana Flour recipes, Bakahu, ಬಾಕಾಹು, ಬಾಳೆಕಾಯಿ ಹುಡಿ, 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top