ಸವಿರುಚಿ: ಬಾಕಾಹು ಬಾಳೆಹಣ್ಣಿನ ಬ್ರೆಡ್

Upayuktha
0

ಮೈದಾ ಬಳಸಲೇ ಇಲ್ಲ. ನಿಜಕ್ಕೂ ತುಂಬ ರುಚಿಕರ.


ಪಾಕ: ವಿಶ್ರುತ ರಾಜೇಶ್ ಕಡಬ, 85500 56925


ಸಾಮಗ್ರಿಗಳು: ಬಾಕಾಹು ಒಂದು ಕಪ್, ತುಂಬಾ ಹಣ್ಣಾದ ಕ್ಯಾವೆಂಡಿಷ್ ಬಾಳೆಹಣ್ಣು 3- 4, ಬ್ರೌನ್ ಶುಗರ್ / ಬೆಲ್ಲ- ಮುಕ್ಕಾಲು ಕಪ್, ಬೆಣ್ಣೆ ನೂರು ಗ್ರಾಮ್, ಒಂದು ಟೀ ಸ್ಪೂನ್ ಬೇಕಿಂಗ್ ಸೋಡಾ, ಅರ್ಧ ಟೀ ಸ್ಪೂನ್ ದಾಲ್ಚಿನ್ನಿ ಹುಡಿ, ಚಿಟಿಕೆ ಉಪ್ಪು, ಒಂದು ಟೀ ಸ್ಪೂನ್ ವೆನಿಲ್ಲಾ ಎಸೆನ್ಸ್, ಎರಡು ಮೊಟ್ಟೆ (ಮೊಟ್ಟೆಗೆ ಬದಲು ಮಿಲ್ಕ್ ಮೈಡ್ ಅಥವಾ ಮೊಸರು ಬಳಸಬಹುದು).


* ಬೆಣ್ಣೆ, ಬ್ರೌನ್ ಶುಗರ್, ಮೊಟ್ಟೆ, ವೆನಿಲ್ಲಾ ಎಸೆನ್ಸುಗಳನ್ನು ಬೀಟ್ ಮಾಡಿಕೊಳ್ಳಿ.

* ಬೀಟ್ ಮಾಡಿದ ಮಿಶ್ರಣಕ್ಕೆ ಹಿಚುಕಿದ ಬಾಳೆಹಣ್ಣನ್ನು ಸೇರಿಸಿ.

* ಈ ಪಾಕಕ್ಕೆ ಬಾಕಾಹು, ಸೋಡಾ, ದಾಲ್ಚಿನ್ನಿ ಹುಡಿ, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ.

* ಪಾಕವನ್ನು ಅಚ್ಚಿಗೆ ಸುರಿದು ಸ್ಟವ್ ಅಥವಾ ಓವೆನಿನಲ್ಲಿ ಸಣ್ಣ ಉರಿಯಲ್ಲಿ ಬೇಕ್ ಮಾಡಿ.


-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು


Key Words: Bakahu, Banana Flour, Banana Powder, Banana Bread, Recipe, ಬಾಕಾಹು, ಬಾಳೆಕಾಯಿ ಹುಡಿ, ಬಾಕಾಹು ಬಾಳೆಹಣ್ಣಿನ ಬ್ರೆಡ್, ಸವಿರುಚಿ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top