ಸವಿರುಚಿ: ಬಾಕಾಹು- ಬಾಳೆಹೂ ಪತ್ರೊಡೆ

Upayuktha
0




ಬಾಕಾಹು- ಬಾಳೆಹೂ ಪತ್ರೊಡೆ

ಪಾಕ: ಪ್ರಸನ್ನ ಪ್ರಸಾದ್, ಪೇತ್ರಿ


ಸಾಮಗ್ರಿ: ಬಾಕಾಹು-1 ಲೋಟ, ಬಾಳೆಹೂ- 1 ಲೋಟ, ಬೆಳ್ತಿಗೆ ಅಕ್ಕಿ-1 ಲೋಟ, ಉದ್ದಿನ ಬೇಳೆ-1 ಚಮಚ, ಕಡ್ಲೆ ಬೇಳೆ- 1 ಚಮಚ, ಕೊತ್ತಂಬರಿ- 1 ಚಮಚ, ಒಣಮೆಣಸು-5, ಹುಣಸೆಹಣ್ಣು- ಸ್ವಲ್ಪ, ಬೆಲ್ಲ, ಉಪ್ಪು ಬೇಕಷ್ಟು.


ವಿಧಾನ: ಉದ್ದಿನ ಬೇಳೆ, ಕಡ್ಲೆ ಬೇಳೆ, ಕೊತ್ತಂಬರಿ, ಒಣಮೆಣಸು ಇವಿಷ್ಟನ್ನು ಕೆಂಪಗಾಗುವಷ್ಟು ಹುರಿದುಕೊಂಡು, ತಣಿಯಲು ಬಿಡಿ.


ಹುಳಿ ಮಜ್ಜಿಗೆಯ ನೀರಿನಲ್ಲಿ ಸಣ್ಣದಾಗಿ ಹೆಚ್ಚಿಟ್ಟ ಬಾಳೆಹೂವನ್ನು (ಕುಂಡಿಗೆಯನ್ನು) 5 ನಿಮಿಷ ಮುಳುಗಿಸಿಡಬೇಕು.


ನೆನೆಸಿದ ಅಕ್ಕಿ ಮತ್ತು ಮಸಾಲೆಯನ್ನು, ಬೇಕಿದ್ದರೆ ಸ್ವಲ್ಪ ತೆಂಗಿನ ತುರಿಯನ್ನು, ಉಪ್ಪು, ಬೆಲ್ಲ, ಹುಣಸೆಹಣ್ಣು ಹಾಕಿ ತರಿತರಿಯಾಗಿ ರುಬ್ಬಿ ತೆಗೆಯಬೇಕು. ನಂತರ ಬಾಕಾಹುವನ್ನು ಹಾಕಿ ಚೆನ್ನಾಗಿ ತಿರುವಿ 10 ನಿಮಿಷ ಹಾಗೆ ಬಿಟ್ಟು, ಬಾಡಿಸಿದ ಬಾಳೆ ಎಲೆಯಲ್ಲಿ ಮಡಚಿ ಅರ್ಧ ಗಂಟೆ ಉಗಿಯಲ್ಲಿ ಬೇಯಿಸಬೇಕು. ಬಿಸಿ ಬಿಸಿಯಾಗಿ ತುಪ್ಪ ಹಾಕಿ ಹಾಗೇ ತಿನ್ನಬಹುದು. ಅಥವಾ ಪುಡಿ ಮಾಡಿ ಒಗ್ಗರಣೆ ಕೊಟ್ಟು, ಕಾಯಿ, ಬೆಲ್ಲ ಹಾಕಿಯೂ ತಿನ್ನಬಹುದು.


ಬಾಳೆಹೂ, ಬಾಕಾಹು, ಬಾಳೆಎಲೆ ಎಲ್ಲವೂ ಪೌಷ್ಟಿಕ, ಆರೋಗ್ಯಕ್ಕೆ ಪೂರಕ.


(ಕೃತಜ್ಞತೆಗಳು: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
To Top