ಪರಿಚಯ: ಯಕ್ಷ ಚಿರ ಕನ್ಯೆ ಪಂಜು ಪೂಜಾರಿ ಬಗ್ವಾಡಿ

Upayuktha
0


ಗಂಡಾಗಿ ಹುಟ್ಟಿ ಹೆಣ್ಣಿನ ಹಾವಭಾವ, ನಡೆ ನಡೆದುಕೊಳ್ಳುವುದು, ಅಭಿನಯಿಸುವುದು ಸಣ್ಣ ವಿಚಾರವಲ್ಲ. ಆದರೆ ಎಂಥವರನ್ನೂ, ಗಂಡಾಗಿ ಹುಟ್ಟಿ ಹೆಣ್ಣಿನ ರೂಪದಲ್ಲಿ ಆಕರ್ಷಿಸಬಲ್ಲ ತಾಕತ್ತಿರುವುದು ಯಕ್ಷಗಾನ ಕಲಾವಿದರಿಗೆ ಮಾತ್ರ. ಈ ಲೇಖನದಲ್ಲಿ ನಾವು ಪರಿಚಯಿಸುತ್ತಿರುವ ಕಲಾವಿದ ಶ್ರೀಯುತ ಪಂಜು ಪೂಜಾರಿ ಬಗ್ವಾಡಿ.


ಶ್ರೀಮತಿ ತುಂಗಾ ಪೂಜಾರ್ತಿ ಹಾಗೂ ಶೀನ ಪೂಜಾರಿ ಇವರ ಮಗನಾಗಿ ದಿನಾಂಕ 24.04.1983ರಂದು ಇವರ ಜನನ. ಏಳನೇ ತರಗತಿವರೆಗೆ ಇವರ ವಿದ್ಯಾಭ್ಯಾಸ. ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ ಇವರ ತಂದೆ ಶೀನ ಪೂಜಾರಿಯವರು. ವಿಶ್ವೇಶ್ವರ ಸೋಮಯಾಜಿ ಇವರ ಯಕ್ಷಗಾನದ ಗುರುಗಳು. ಮೇಳದ ತಿರುಗಾಟಕ್ಕೆ ಕರೆದು ಕೊಂಡು ಬಂದಿದ್ದು ಸಲ್ಕೋಡ್ ರವೀಂದ್ರ ಪೂಜಾರಿ ಎಂದು ಪೂಜಾರಿ ಅವರು ಹೇಳುತ್ತಾರೆ.


ಸಾಲಿಗ್ರಾಮ ಮೇಳದಲ್ಲಿ ಗೆಜ್ಜೆಕಟ್ಟಿ ನಂತರ ಬಗ್ವಾಡಿ, ಹಾಲಾಡಿ, ಸಿಗಂದೂರು ಮೇಳದಲ್ಲಿ ತಿರುಗಾಟ ಮಾಡಿ ಪ್ರಸ್ತುತ ಕಮಲಶಿಲೆ ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ.


ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-

ಪ್ರಸಂಗ ಯಾವುದೇ ಇರಲಿ, ನನ್ನ ಪಾತ್ರದ ಪದ್ಯ ಬರೆದುಕೊಂಡು ಅದಕ್ಕೆ ಸರಿಯಾದ ಅರ್ಥದ ಬಗ್ಗೆ ಯೋಚನೆ ಮಾಡೋದು ಹಾಗೂ ನನ್ನ ಪಾತ್ರದ ಬಗ್ಗೆ ತಯಾರಾಗುವುದಕ್ಕೆ ಕಾರಣ ಮೋಹನದಾಸ್ ಶೆಣೈ ಆರ್ಗೋಡು ಎಂದು ಪೂಜಾರಿ ಅವರು ಹೇಳುತ್ತಾರೆ.


ದಮಯಂತಿ, ಯಕ್ಷ ಲೋಕ ವಿಜಯ, ಪಾಪಣ್ಣ ವಿಜಯ, ರಾವಣ ವಧೆ, ದಕ್ಷ ಯಜ್ಞ ಇವರ ನೆಚ್ಚಿನ ಪ್ರಸಂಗಗಳು.


ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-

ಯಕ್ಷಗಾನಕ್ಕೆ ದಿನದಿಂದ ದಿನಕ್ಕೆ ಅಭಿಮಾನಿಗಳು ಹೆಚ್ಚುತ್ತಿದ್ದಾರೆ.ಎಷ್ಟೋ ಕಲಾವಿದರಿಗೆ ಆರ್ಥಿಕವಾಗಿ ಆಧಾರವಾಗಿದ್ದು ಅಭಿಮಾನಿಗಳು. ಕಲಾವಿದರಿಗೆ ದೇವರು ಕೊಟ್ಟ ವರ ಅಂದ್ರೆ ಅಭಿಮಾನಿಗಳು ಎಂದು ಪಂಜು ಪೂಜಾರಿ ಬಗ್ವಾಡಿ ಅವರು ಹೇಳುತ್ತಾರೆ.


ಶ್ರೀ ಮಹಿಷ ಮರ್ದಿನಿ ಯುವಕ ಮಂಡಳಿ (ರಿ) ಬಗ್ವಾಡಿ, ಮಲೆನಾಡು ಸಿರಿ ಚಾರಿಟೇಬಲ್ ಟ್ರಸ್ಟ್, ಶ್ರೀ ರಾಮ್ ಫ್ರೆಂಡ್ಸ್ ಜಪ್ತಿ ಹಾಗೂ ಇನ್ನು ಅನೇಕ ಸಂಘ ಸಂಸ್ಥೆಗಳು ಇವರ ಪ್ರತಿಭೆಯನ್ನು ನೋಡಿ ಇವರಿಗೆ ಸನ್ಮಾನ ಹಾಗೂ ಪುರಸ್ಕಾರ ನೀಡಿ ಗೌರವಿಸಿದ್ದಾರೆ.


03.05.2013 ರಂದು ಜ್ಯೋತಿ ಅವರನ್ನು ವಿವಾಹವಾದ ಪಂಜು ಪೂಜಾರಿ ಬಗ್ವಾಡಿ ಅವರು ಇಬ್ಬರು ಮಕ್ಕಳಾದ ರವಿ ಕುಮಾರ್ ಹಾಗೂ ಕೌಶಿಕೆ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


Photo Click: Praveen Perdoor, Deepak Poojary, Sharath Bhat Begar


- ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

+91 8971275651


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top