ಭರತ ಭೂಮಿ ಪುಣ್ಯ ಭೂಮಿ
ನಮ್ಮ ದೇಶ ಭಾರತ.
ನಿರತ ನಿನ್ನ ನೆನೆವೆ ಮಾತೆ
ದೇಶಭಕ್ತಿ ಸಾರುತ.
ವೀರಧೀರ ರಾಜರೆಲ್ಲ
ಪ್ರಾಣವನ್ನೆ ತೆತ್ತರು.
ದಾಸ್ಯದಿಂದ ಮುಕ್ತಿ ಬಯಸಿ
ಹರಿಸಿ ತಮ್ಮನೆತ್ತರು.
ವೀರನಾರಿ ವನಿತೆಯರು
ಹೋರಾಟವ ಮಾಡುತ
ಶೌರ್ಯವನ್ನು ಮೆರೆದರು
ದೇಶಸೇವೆ ಗೈದರು.
ಗಾಂಧೀ,ತಿಲಕ,ಸುಭಾಶ್ ರಂತ
ದೇಶಭಕ್ತ ನಾಯಕರು
ಒಗ್ಗೂಡಿಸಿ ಜನರನ್ನು
ಚಳವಳಿಗಳ ನಡೆಸಿದರು.
ಹೋರಾಟಗಳ ಫಲವಿದು
ಸ್ವಾತಂತ್ರ್ಯವು ದೊರಕಿದೆ.
ಕೆಂಪು ಕೋಟೆಯಲ್ಲಿಂದು
ತ್ರಿವರ್ಣ ದ್ವಜವು ಹಾರಿದೆ.
ಆಂಗ್ಲರನ್ನು ತೊಲಗಿಸಿ
ವರ್ಷ ಎಪ್ಪತ್ತೈದು ಸಂದಿದೆ.
ಕೀರ್ತಿ ಪತಾಕೆಯ ಹಾರಿಸಿ
ದೇಶವ ಬೆಳಗಬೇಕಿದೆ.
-ಗಾಯತ್ರಿ ಪಳ್ಳತ್ತಡ್ಕ