ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರ ಬಿ.ವೈ ರಾಘವೇಂದ್ರ ಅವರು ಇಂದು ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರು ಶುಭಾಶಯ ಕೋರಿದ್ದಾರೆ.
ಇಂದು ಬೆಳಗ್ಗೆ ಶಿಕಾರಿಪುರಕ್ಕೆ ತೆರಳಿ ಸಂಸದರನ್ನು ಭೇಟಿ ಮಾಡಿದ ಶಾಸಕರು ಶುಭಾಶಯ ಕೋರಿದ್ದಲ್ಲದೆ, ಬೈಂದೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸಂಸದರು ತೋರಿರುವ ಕಾಳಜಿಯನ್ನು ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದರು.
ಶಾಸಕರು ಈ ಬಗ್ಗೆ ಮಾಧ್ಯಮಕ್ಕೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ, 'ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ನೀವು ಬೈಂದೂರು ಕ್ಷೇತ್ರದ ಬಗ್ಗೆ ತೋರಿದ ವಾತ್ಸಲ್ಯದಿಂದಾಗಿ ಹಿಂದುಳಿದ ಕ್ಷೇತ್ರವೊಂದು ಅಭಿವೃದ್ಧಿಯತ್ತ ದಾಪುಗಾಲು ಇಡುವಂತಾಗಿದೆ.
ನಾನು ಚುನಾವಣೆಯ ಸಂದರ್ಭದಲ್ಲಿ ಹೇಳಿದಂತೆ ಸಮಸ್ತ ಬೈಂದೂರಿಗೆ ಕುಡಿಯುವ ನೀರನ್ನು ಪೂರೈಸುವ ಮಾತನ್ನು ಈಡೇರಿಸುವಲ್ಲಿ ನಿಮ್ಮ ಸಹಕಾರವೇ ಮುಖ್ಯವಾದುದು. ಹೀಗೆ ಬೈಂದೂರಿನಲ್ಲಿ ಅನೇಕ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸುತ್ತಿದ್ದೀರಿ.
ತಂದೆಯಂತೆ; ಛಲ, ನೈಜ ಜನಪರ ಕಾಳಜಿ, ಹೋರಾಟದ ಗುಣ, ಸದಾ ಹೊಸ ಯೋಜನೆಗಳ ಫೈಲು ಹಿಡಿದು ಓಡಾಡುವ ಶ್ರದ್ಧೆ, ನಮ್ಮನ್ಮೆಲ್ಲ ನೀವು ಗೌರವಿಸುವ ರೀತಿ, ಹೀಗೆ ಬಹಳ ಉತ್ತುಂಗದ ಗುಣ ನಿಮ್ಮದು. ಆ ಗುಣ ನಿಮ್ನನ್ನು ಇನ್ನಷ್ಟು ಎತ್ತರಕ್ಕೆ ಏರಿಸಲಿದೆ. ಎಲ್ಲಾ ಕಾರ್ಯಗಳಿಗೂ ತಾಯಿ ಮೂಕಾಂಬಿಕೆಯ ಅನುಗ್ರಹವಿರಲಿ. ಎಲ್ಲವೂ ಒಳ್ಳೆಯದೇ ಆಗಲಿ ನಿಮಗೆ. ಸಹೋದರರು, ಶಿವಮೊಗ್ಗ ಸಂಸದರಾದ ಮಾನ್ಯ ಬಿ.ವೈ. ರಾಘವೇಂದ್ರ ಅವರಿಗೆ ಶುಭಾಶಯಗಳು ಎಂದು ಶಾಸಕರು ತಿಳಿಸಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ