ಆಗಸ್ಟ್ 7: ಮಂಗಳೂರು ಚುಸಾಪದಿಂದ ಸಾಹಿತ್ಯೋಪನ್ಯಾಸ- ಸಂವಾದ

Upayuktha
0 minute read
0

 



ಮಂಗಳೂರು: ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಉಪನ್ಯಾಸ ಸರಣಿಯ ಮೂರನೇ  ಉಪನ್ಯಾಸ ಕಾರ್ಯಕ್ರಮವನ್ನು ಆಗಸ್ಟ್ 7, ಶನಿವಾರ ರಾತ್ರಿ 8 ಗಂಟೆಗೆ ಆಯೋಜಿಸಲಾಗಿದೆ.


ಹಿರಿಯ ಪತ್ರಕರ್ತ, ಬಹುಭಾಷಾ ಕಾದಂಬರಿಕಾರ, ಚಿಂತಕ ಬಿ.ಎಂ.ಮಾಣಿಯಾಟ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ 'ಪತ್ರಿಕೆಗಳಲ್ಲಿ ಚುಟುಕು ಸಾಹಿತ್ಯ' ಎಂಬ ವಿಷಯದಲ್ಲಿ ಸಾಹಿತ್ಯ ಉಪನ್ಯಾಸ ನೀಡಲಿದ್ದಾರೆ. ಉಪನ್ಯಾಸದ ಬಳಿಕ ಸಂವಾದ ನಡೆಯಲಿದೆ.


ಮಂಗಳೂರು ತಾಲೂಕು ಚುಸಾಪದ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಆಶಯ ಭಾಷಣ ಮಾಡುವರು. ಪ್ರಬುದ್ಧ ಚುಟುಕು ರಚನಕಾರ ಕವಿ ಬದ್ರುದ್ದೀನ್ ಕೂಳೂರು ಹಾಗೂ ಪತ್ರಕರ್ತೆ, ಜನಪ್ರಿಯ ನಿರೂಪಕಿ ಡಾ.ಪ್ರಿಯಾ ಹರೀಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.


ಆಸಕ್ತರು ಗೂಗಲ್ ಮೀಟಿನ  https://meet.google.com/wwt-kjjg-vkr ಬಳಸಿ ಭಾಗವಹಿಸಬಹುದು ಎಂದು ಮಂಗಳೂರು ಚುಸಾಪ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
To Top