ಮಂಗಳೂರು: ಕಳೆದ ಏಪ್ರಿಲ್‌ನಲ್ಲಿ ಕೊವಿಡ್-19 ಕಾರಣದಿಂದ ನಿಂತು, ಸೋಮವಾರದಿಂದ ಮುಂದುವರಿದಿರುವ ಪದವಿ ಮತ್ತು ಸ್ನಾತಕೋತ್ತರ ಸೆಮಿಸ್ಟರ್ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ದೊರೆತಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಅಡಿಯಲ್ಲಿ ಮೊದಲ ದಿನ ಮುಂಜಾನೆ 43 ವಿಷಯಗಳಿಗೆ ನಡೆದ ಪರೀಕ್ಷೆಗೆ 23,179 ವಿದ್ಯಾರ್ಥಿಗಳಲ್ಲಿ 21,886 ಮಂದಿ ಹಾಜರಿದ್ದರು. 1,293 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಮಧ್ಯಾಹ್ನ 20 ವಿಷಯಗಳಿಗೆ ನಡೆದ ಪರೀಕ್ಷೆಗೆ 17,193 ವಿದ್ಯಾರ್ಥಿಗಳಲ್ಲಿ 16,691 ಮಂದಿ ಹಾಜರಾಗಿದ್ದರೆ, 502 ವಿದ್ಯಾರ್ಥಿಗಳು ಗೈರಾಗಿದ್ದಾರೆ, ಎಂದು ಮಂಗಳೂರು ವಿವಿ ಮೂಲಗಳು ತಿಳಿಸಿವೆ.
ಈಗಾಗಲೇ ವಿಶ್ವವಿದ್ಯಾನಿಲಯ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ವಿಶೇಷ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದೆ. ಜೊತೆಗೆ ಇತ್ತೀಚೆಗೆ ಕೊವಿಡ್‌ನಿಂದ ಬಾಧಿತರಾಗಿದ್ದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೋಣೆಯ ವ್ಯವಸ್ಥೆಯೊಂದಿಗೆ, ಸರ್ಕಾರದ ನಿಯಮಾವಳಿಗೆ ಅನುಗುಣವಾಗಿ ಪರೀಕ್ಷೆ ನಡೆದಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ