ಜೇನುಕುಟುಂಬಗಳನ್ನು ಹೆಚ್ಚಿಸಿಕೊಳ್ಳಲು ಸಕಾಲ

Upayuktha
0

ಮಳೆಗಾಲದಲ್ಲಿ ಸರಿಯಾದ ರೀತಿಯಲ್ಲಿ ಆಹಾರವನ್ನು ಕೊಟ್ಟು ಚೆನ್ನಾಗಿ ನಿರ್ವಹಣೆ ಮಾಡಿದ ಜೇನುಕುಟುಂಬಗಳು ಈಗ ಪಾಲು ಮಾಡಲು ಸಿದ್ಧವಾಗಿರುತ್ತವೆ.


ಸಾಕಷ್ಟು ಮೊಟ್ಟೆ ಮರಿಗಳಿರುವ ಎರಿಗಳಿದ್ದರೆ, ಗಂಡು ನೊಣಗಳು ಇದ್ದರೆ ಆ ಕುಟುಂಬವನ್ನು ಈ ಸಮಯದಲ್ಲಿ ಪಾಲು ಮಾಡಬಹುದು. ಗಂಡು ನೊಣಗಳು ಪರಿಸರದ ಬೇರೆ ಕುಟುಂಬದಲ್ಲಿ ಇದ್ದರೂ ಸಾಕು.ಆದರೆ ಮರಿ ನೊಣಗಳು ಸಾಕಷ್ಟು ಇರಬೇಕು. ಮಳೆ ಇಲ್ಲದ ವಾತಾವರಣವೂ ಅವಶ್ಯಕ.


ಪಾಲು ಮಾಡಿದ ಅನಂತರ ರಾಣಿ ಇರುವ ಕುಟುಂಬವನ್ನು ಕನಿಷ್ಠ ಅರ್ಧ ಕಿಲೋಮೀಟರ್ ದೂರದಲ್ಲಿ ಇಟ್ಟು  ವಾರಕ್ಕೊಮ್ಮೆ ಆಹಾರವನ್ನು ಕೊಟ್ಟು ಹೊಸ ಎರಿ ಕಟ್ಟಲು ಅನುಕೂಲ ಮಾಡಿಕೊಟ್ಟರೆ ಬೇಗನೇ ಅಭಿವೃದ್ಧಿ ಹೊಂದಿ ಕೆಲವೇ ದಿನಗಳಲ್ಲಿ ಮತ್ತೆ ಪಾಲು ಮಾಡಲು ಸಿದ್ಧವಾಗುತ್ತದೆ.


ಡಿಸೆಂಬರ್ ತನಕ ಒಂದು ಜೇನು ಕುಟುಂಬವನ್ನು ನಾಲ್ಕೈದು ಸಲ ಪಾಲು ಮಾಡಿ ಕುಟುಂಬಗಳನ್ನು ಹೆಚ್ಚಿಸಿಕೊಳ್ಳಬಹುದು. ಅಥವಾ ಆಸಕ್ತ ರೈತರಿಗೆ ವಿಕ್ರಯಣ ಮಾಡಬಹುದು.


ಪಾಲು ಮಾಡಿದ ಅನಂತರ ರಾಣಿ ಇಲ್ಲದ ಕುಟುಂಬಕ್ಕೆ ಹೆಚ್ಚಿನ ಗಮನ ಹರಿಸಬೇಕು.ಈ ಕುಟುಂಬಕ್ಕೆ ರಾಣಿ ಆದ ನಂತರ ಆಹಾರವನ್ನು ಕೊಟ್ಟರೆ ಸಾಕು. ಆದರೆ ಪಾಲು ಮಾಡುವ ಮೊದಲೇ ಸಾಕಷ್ಟು ಪ್ರಮಾಣದಲ್ಲಿ ಆಹಾರವನ್ನು ಕೊಟ್ಟಿರಬೇಕು.ಹೊಸ ರಾಣಿ ಆದ ಕೂಡಲೇ ಇದರಲ್ಲಿ ಎರಿ ಕಟ್ಟಲು ಪ್ರಾರಂಭಿಸುತ್ತವೆ.


ಪಾಲು ಮಾಡಿ ಹದಿನಾಲ್ಕು ಹದಿನೈದು ದಿನಗಳಲ್ಲಿ ರಾಣಿ ಇಲ್ಲದ ಕುಟುಂಬಕ್ಕೆ ಬೇರೆ ಕುಟುಂಬದಿಂದ ಜೇನ್ನೊಣಗಳನ್ನು ಅದೇ ಕುಟುಂಬಕ್ಕೆ ಬಿಟ್ಟು ನೊಣಗಳಿಲ್ಲದ, ಸಾಕಷ್ಟು ಲಾರ್ವಾಗಳಿರುವ ಒಂದು ಎರಿಯನ್ನು ಕೊಡಬೇಕು. ಒಂದೊಮ್ಮೆ ಮೇಟ್ ಗೆ ಹೋದ ರಾಣಿ ಅಕಸ್ಮಾತ್ ಸತ್ತರೆ ಆಗ ಈ ಲಾರ್ವಾಗಳಿಂದ ರಾಣಿ ಕೋಶವನ್ನು ತಯಾರಿಸುತ್ತವೆ. ಹಾಗೂ ಮೊಟ್ಟೆ ಮರಿ ಇರುವ ಎರಿ ಇರುವಾಗ ಫಕ್ಕನೆ ಕುಟುಂಬ ಪರಾರಿ ಆಗದು.


ಖಾಲಿ ಪೆಟ್ಟಿಗೆ ಅಥವಾ ಮಣ್ಣಿನ ಮಡಕೆಗಳಿಗೆ ಜೇನುಮಯಣವನ್ನು ಸವರಿ, ಇರುವೆ ಬಾರದ ತಂಪಾದ ಸ್ಥಳದಲ್ಲಿ ಇಟ್ಟರೆ ಕೆಲವೊಮ್ಮೆ ತಾನಾಗಿಯೇ ಜೇನು ಕುಟುಂಬ ಬಂದು ನೆಲೆಸುತ್ತದೆ. ಮತ್ತೆ ಅಗತ್ಯವಿದ್ದರೆ ಅದನ್ನು ಜೇನು ಪೆಟ್ಟಿಗೆಗೆ ತುಂಬಿಸಿಕೊಂಡು ಜೇನು ಕುಟುಂಬಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದು.


ಸಲಹೆಗಳಿಗೆ ಸ್ವಾಗತ 


-ಶಿರಂಕಲ್ಲು ಕೃಷ್ಣ ಭಟ್

7975159138.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top