"ಉ.ಕರ್ನಾಟಕದಲ್ಲೂ ಬರಲಿ, ಬಾಕಾಹು ಆಧಾರಿತ ತಿಂಡಿತಿನಸು ವೈವಿಧ್ಯ"

Upayuktha
0


ಉ.ಕರ್ನಾಟಕದಲ್ಲೂ ಬರಲಿ, ಬಾಕಾಹು ಆಧಾರಿತ ತಿಂಡಿತಿನಸು ವೈವಿಧ್ಯ

- ಡಾ. ರವಿ. ವೈ., ವಿಜ್ಞಾನಿ, ಗೃಹ ವಿಜ್ಞಾನ, ಶಿರಸಿ ಕೇವೀಕೆ


"ಬಾಕಾಹು ಸಂಬಂಧಿತ ಕಾರ್ಯಕ್ರಮಗಳಲ್ಲಿ ಇಲ್ಲಿನ, ಅಂದರೆ, ಉತ್ತರ ಕನ್ನಡದ ಮಹಿಳೆಯರ ಪಾಲುಗಾರಿಕೆ ಮತ್ತವರು ಬಾಕಾಹು ಉತ್ಪನ್ನ ತಯಾರಿಸಲು ತೋರುತ್ತಿರುವ ಉತ್ಸಾಹ ಬಲು ಆಶ್ಚರ್ಯಕರ."


ಹೀಗೆ ಹೇಳುವ ಡಾ. ರವಿ ವೈ. ಶಿರಸಿ ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನ ವಿಜ್ಞಾನಿ. "ದಕ್ಷಿಣ ಕರ್ನಾಟಕದ ಮಹಿಳೆಯರು ಈ ವರೆಗೆ ಈ ಭಾಗದ ವೈವಿಧ್ಯಮಯ ತಿಂಡಿತಿನಸು ತಯಾರಿಸಿದಂತೆಯೇ ಉತ್ತರ ಕರ್ನಾಟಕದ ಆಹಾರ ವೈವಿಧ್ಯವನ್ನೂ ಬಾಕಾಹುವಿನಿಂದ ಮಾಡಬಹುದು. ಈ ನಿಟ್ಟಿನ ಪ್ರಯತ್ನಗಳು ಆಗಬೇಕು" ಎನ್ನುತ್ತಾರೆ ರವಿ.


"ಬಾಕಾಹುವಿನಲ್ಲಿ ಅಧಿಕ ಪೋಷಕಾಂಶಗಳಿವೆ. ದಿನನಿತ್ಯದ ಗೋಧಿ, ಅಕ್ಕಿ ಅಥವಾ ಮೈದಾದ ತಯಾರಿಕೆಗಳಲ್ಲಿ ಅವುಗಳ ಜತೆ ಅಥವಾ ಬರೇ ಬಾಕಾಹು ಬಳಸಿ ತಿಂಡಿತಿನಸು ತಯಾರಿಸಬಹುದು. ಇದು ಆರೋಗ್ಯ ಉಳಿಸಲು ಅನುಕೂಲಕರ. ಮಕ್ಕಳಿಗೆ ಬಾಕಾಹು ಆಧಾರಿತ ತಯಾರಿಗಳನ್ನು ತಿನ್ನಿಸುವುದರ ಮೂಲಕ ಪೋಷಕಾಂಶದ ಕೊರತೆ ಮತ್ತು ಅಪೌಷ್ಟಿಕತೆ ನಿವಾರಿಸಲು ಸಾಧ್ಯ" ಎಂದೂ ರವಿ ಅಭಿಪ್ರಾಯಪಡುತ್ತಾರೆ.


-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top