"ಸುಕೇಳಿಗಿಂತ ಸುಲಭ ಬಾಕಾಹು ತಯಾರಿ"

Upayuktha
0

 



ಶಿವಮೊಗ್ಗ ಸರಹದ್ದಿನಲ್ಲಿ 'ಮನೆಮಟ್ಟದ ಬಾಳೆಕಾಯಿ ಹುಡಿ’ ತಯಾರಿಯ ಮೊದಲ ಯತ್ನ


"ನಾವು ಬಾಕಾಹು ಮಾಡಬೇಕೆಂದು ನಿರ್ಧರಿಸಿ ವಾರ 2- 3 ಆಗಿಹೋಗಿದೆ; ತುಂಬ ತಡ ಆಗಿಬಿಟ್ಟಿತು" ಎಂದು ಬೇಸರಿಸುತ್ತಾರೆ ಶಿವಮೊಗ್ಗದ ಸಹಾಯಕ ತೋಟಗಾರಿಕಾ ಅಧಿಕಾರಿ ಆರೋಗ್ಯ ಮೇರಿ ಸುಪ್ರೀತಾ. ಆದರೆ ಈಗ ಇವರ ಬಾಕಾಹು ಸಿದ್ಧವಾಗಿದೆ. ವಾರಾಂತ್ಯದಲ್ಲಿ ಇದರಿಂದ ಹೊಸಹೊಸ ಪಾಕಗಳನ್ನೂ ತಯಾರು ಮಾಡಲಿದ್ದಾರೆ.


ಈ ಕುಟುಂಬಕ್ಕೆ ಸಾಗರದಲ್ಲಿ ತೋಟ ಇದೆ. ಕೊಯಂಬತ್ತೂರಿನಿಂದ ತರಿಸಿದ ಎಲೆಕ್ಟ್ರಿಕ್ ಡ್ರೈಯರ್ ಬಳಸಿ ಮೊದಲ ಸುತ್ತಿನ ಬಾಳೆಕಾಯಿ ಹುಡಿ ಮಾಡಿದ್ದಾರೆ. ಮಿಟ್ಲಿ (ಏಲಕ್ಕಿ / ಕದಳಿ) ಬಾಳೆಯ ಬಳಕೆ. "ಒಣ ಬಾಳೆಹಣ್ಣು- ಸುಕೇಳಿ ಮಾಡಲು ಬೇಕಾಗುವಷ್ಟು ಸಮಯವೂ ಬೇಡ ಇದು ಒಣಗಲು" ಎನ್ನುತ್ತಾರೆ ಸಿಜೋ.

ಸುಪ್ರೀತಾ-  87222 23905 (6- 8 PM)


-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು


Key Words: Banana flour, Banana Powder, Bakahu, Shivamogga, ಬಾಕಾಹು, ಬಾಳೆಕಾಯಿ ಹುಡಿ, ಬಾಕಾಹು ಆಂದೋಲನ, ಶಿವಮೊಗ್ಗ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top