||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 'ಬಾಳೆ ಜಿಲ್ಲೆ' ಗೂ ಬಾಹು ಚಾಚಿದ 'ಬಾಕಾಹು'

'ಬಾಳೆ ಜಿಲ್ಲೆ' ಗೂ ಬಾಹು ಚಾಚಿದ 'ಬಾಕಾಹು'"ಎಲ್ಲ ಬಾಳೆ ಬೆಳೆಗಾರರಿಗೂ ಗಟ್ಟಿ ಸ್ವರದಲ್ಲಿ ಹೇಳುವಷ್ಟಿದೆ ಬಾಕಾಹುವಿನ ಗುಣ" ಎನ್ನುತ್ತಾರೆ ಬಹುಶಃ ಜಿಲ್ಲೆಯಲ್ಲೇ ಮೊದಲು ’ಮನೆ ಮಟ್ಟದ ಬಾಕಾಹು ತಯಾರಿಸಿದ’ ಕೃಷಿಕ ಧರ್ಮಪ್ರಕಾಶ್.


ಫೋನ್: 97313 16141 (ಅಪರಾಹ್ನ 3.30- 5) 


"ನಮ್ಮ ಮೊದಲ ಪ್ರಯೋಗ ಪೂರ್ತಿ ಬಾಕಾಹುವಿನ ದೋಸೆ. ರಾಗಿ, ಗೋಧಿ ಮೊದಲಾದ ದೋಸೆಗಳಿಂದ ಇದು ರುಚಿಕರ" ಎನ್ನುತ್ತಾರೆ 44ರ ಹರೆಯದ ಕೃಷಿಕ ಧರ್ಮಪ್ರಕಾಶ್.


ಧರ್ಮಪ್ರಕಾಶ್ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನವರು. ಇವರಿಗೆ ನಾಲ್ಕೆಕ್ರೆ ಬಾಳೆ ಕೃಷಿ ಇದೆ. ಬೆಳೆದದ್ದು ಪಚ್ಚ ಬಾಳೆ. ತಿಂಗಳುಗಳ ಹಿಂದೆ ಲಾಕ್ ಡೌನ್ ಕಾಲದಲ್ಲಿ ಎರಡು ತಿಂಗಳು ಬೆಳೆಸಿದ ಬಾಳೆಕಾಯಿಯನ್ನು ದನಗಳಿಗೆ ಉಣಿಸಿದ ಕಹಿ ಮನದಲ್ಲಿದೆ.


ಫೇಸ್ ಬುಕ್ಕಿನಲ್ಲಿ ಬಾಕಾಹು ವಿಚಾರ ಓದಿ ಆಸಕ್ತರಾದ ಇವರು ಬಿಸಿಲಲ್ಲೇ ಒಣಗಿಸಿ ಹಿಟ್ಟು ಮಾಡಿಕೊಂಡರು. ಇಂದು ಅದರ ಮೊದಲ ಅಡುಗೆ ಪ್ರಯೋಗ. ಹೊಸ ಕೃಷಿಕಪರ ವಿದ್ಯೆ ಸಿಕ್ಕಿದ ಸಂತಸ ಅವರಲ್ಲಿ ಹತ್ತಾರು ಯೋಚನೆ ಮೂಡಿಸಿದೆ.


ಒಂದೆರಡು ಕ್ವಿಂಟಾಲ್ ಬಾಳೆಕಾಯಿ ತಂದು ಆಚೀಚೆ ಮನೆಯವರಲ್ಲಿ ಸೇರಿಸಿ ಎರಡನೆಯ ಸುತ್ತು ತಯಾರಿಸಬೇಕು ಅನಿಸುತ್ತಿದೆ. ಮನೆಯಲ್ಲೇ ಇದರ ಪ್ರಾಥಮಿಕ ಸಂಸ್ಕರಣೆ ಮಾಡಲು ಜಾಗ ಇದೆ. "ಈ ವರೆಗೆ ಫೇಸ್ ಬುಕ್ಕಿನಲ್ಲಿ ಬಂದ ಕೆಲವು ತಿಂಡಿ ಆದರೂ ಮಾಡಿ ನೋಡಬೇಕು. ನಾವೇ ಬೆಳೆದ ಬಾಳೆಕಾಯಿ ಸೇರಿಕೊಂಡ ತಿಂಡಿ ತಿನ್ನೋ ಸುಖಾನೇ ಬೇರೆ" ಎನ್ನುತ್ತಿದ್ದಾರೆ.


ಕೇಂದ್ರ ಸರಕಾರದ ಇತ್ತೀಚೆಗಿನ ಓಡೀಓಪಿ (ವನ್ ಡಿಸ್ಟ್ರಿಕ್ಟ್, ವನ್ ಪ್ರಾಡಕ್ಟ್) ಯೋಜನೆಯನ್ವಯ ಬಾಳೆ ಉತ್ಪನ್ನಗಳಿಗಾಗಿ ಆಯ್ದದ್ದು ಇದೇ ಮೈಸೂರು ಜಿಲ್ಲೆಯನ್ನು. ಇಲ್ಲಿ 20,000 ಹೆಕ್ಟಾರಿನಲ್ಲಿ ಬಾಳೆ ಕೃಷಿಯಿದೆ. ಇದು ರಾಜ್ಯದಲ್ಲೇ ಗರಿಷ್ಠ.


"ಉಳಿದ ಬಾಳೆ ಬೆಳೆಗಾರರಿಗೆ ಗಟ್ಟಿ ಸ್ವರದಲ್ಲಿ ಹೇಳುವಷ್ಟು ಸುಲಭ ಬಾಕಾಹು ತಯಾರಿ. ಇದರ  ಮೊದಲ ತಿಂಡಿಯೇ ಮನ ಗೆದ್ದಿದೆ" ಇನ್ನೂ ನೂರಾರು ಮಂದಿಗೆ ಹೇಳಬೇಕು ಇದನ್ನ" ಎನ್ನುತ್ತಾ ಕಾಯುತ್ತಿದ್ದಾರೆ ಧರ್ಮಪ್ರಕಾಶ್.


ಮೈಸೂರು, ಚಾಮರಾಜನಗರದಲ್ಲಿ ಯಾವುದೇ ಶುಭ ಅಥವಾ ಇನ್ನಿತರ ಕಾರ್ಯಗಳಲ್ಲಿ ಬಾಳೆಕಾಯಿ, ಕಡ್ಲೆ ಇತ್ಯಾದಿ ಸೇರಿಸಿ ಗಟ್ಟಿಯಾಗಿ ಮಾಡುವ ’ಬಾಳೆ ಹುಳಿ’ ತುಂಬ ಫೇಮಸ್. ಬಾಳೆ ಹುಳಿಗೆ ತಾಜಾ ಬಾಳೆಕಾಯಿಗೆ ಬದಲು ಬಾಕಾಹು ಮಾಡುವಾಗ ತಯಾರಿಸುವಂತಹ ಬಾಳೆಕಾಯಿ ತುಂಡು ಒಣಗಿಸಿಟ್ಟು ಬಳಸಬಹುದೇ ಹೇಗೆ ಎಂಬ ಯೋಚನೆಯೂ ಇವರ ತಲೆಗೆ ಹೊಕ್ಕಿದೆ.


-ಶ್ರೀಪಡ್ರೆ, ಅಡಿಕೆಪತ್ರಿಕೆ ಸಂಪಾದಕರು


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post