|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಯಡಿಯೂರಪ್ಪನವರ ರಾಜ್ಯ ಪ್ರವಾಸ ಕಥೆ, ಬಿಜೆಪಿ ಹೆೈಕಮಾಂಡಿಗೆ ಪ್ರಯಾಸದ ವ್ಯಥೆ?

ಯಡಿಯೂರಪ್ಪನವರ ರಾಜ್ಯ ಪ್ರವಾಸ ಕಥೆ, ಬಿಜೆಪಿ ಹೆೈಕಮಾಂಡಿಗೆ ಪ್ರಯಾಸದ ವ್ಯಥೆ?




ಯಡಿಯೂರಪ್ಪನವರು ಇನ್ನು ಕೆಲವೇ ದಿನಗಳಲ್ಲಿ ರಾಜ್ಯ ಪ್ರವಾಸ ಮಾಡಿ ಪಕ್ಷ ಬಲಪಡಿಸುವ ಸಂಕಲ್ಪದಲ್ಲಿ ಕೇೂಟಿ ಬೆಲೆಯ ಕಾರನ್ನು ಖರೀದಿಸಿದ್ದರು. ಇನ್ನೇನು ಯಡಿಯೂರಪ್ಪ ಪ್ರವಾಸ ಹೊರಟೇ ಬಿಟ್ಟರು ಅನ್ನುವ ಹೊತ್ತಿಗೆ ಬಿಜೆಪಿ ಹೆೈಕಮಾಂಡಿಗೆ ತಲೆ ಬಿಸಿ ಶುರುವಾಗಿದೆ ಅಂತೆ.


ತಮ್ಮ ಪಕ್ಷದ ಒಬ್ಬ ಹಿರಿಯ ನಾಯಕರು ತಾವಾಗಿಯೇ ತಮ್ಮ ಸ್ವಂತ ಖಚಿ೯ನಲ್ಲಿ ಪಕ್ಷ ವನ್ನು ಬಲಪಡಿಸುತ್ತೇನೆ ಎಂದು ಹೊರಡುವಾಗ ಅದ್ಯಾಕೆ ಪಕ್ಷಕ್ಕೆ ಮುಜುಗುರ ಕಿರಿಕಿರಿ ಅನ್ನುವುದು ಅಷ್ಟೇ ಆಶ್ಚರ್ಯದ ಸಂಗತಿ. ಅದಕ್ಕೂ ಕಾರಣವಿದೆ. ಈ ಎಲ್ಲಾ ಕಾರಣಗಳನ್ನು ಒಂದೊಂದಾಗಿ ಬಿಡಿಸಿ ನೇೂಡೇೂಣ.


1. ಎಲ್ಲರಿಗೂ ತಿಳಿದಿರುವಂತೆ ಯಡಿಯೂರಪ್ಪ ರಾಜ್ಯದ ಒಬ್ಬ ಜನನಾಯಕ ಅಥಾ೯ತ್ ಮಾಸ್‌ ಲೀಡರ್. ಇವರು ಮನೆ ಬಿಟ್ಟು ಹೊರಗೆ ಬಂದರೆಂದರೆ ಇಡಿ ಪಕ್ಷವೇ ಅವರ ಹಿಂದೆ ಸಾಗುವುದಂತೂ ಗ್ಯಾರಂಟಿ. ಇದು ಬಿಜೆಪಿ ವರಿಷ್ಠರಿಗೆ ನುಂಗಲಾರದ ತುತ್ತಾಗಿ ಪರಿಣಮಿಸುವಂತಿದೆ.


2. ಆಗಲೇ ಯಡಿಯೂರಪ್ಪನವರ ಪ್ರಭಾವಳಿ ಪಕ್ಷದಲ್ಲಿ ಕಡಿಮೆ ಮಾಡಬೇಕು ಅನ್ನುವ ಹಿನ್ನೆಲೆಯಲ್ಲಿ ಸೂಕ್ಷ್ಮವಾಗಿ ಒಂದೊಂದೆ ಹೆಜ್ಜೆ ಇಡುತ್ತಾ ಬಂದಿರುವ ಪಕ್ಷದ ವರಿಷ್ಠರು ರಾಜ್ಯದಲ್ಲಿ ಪಕ್ಷದ ಅಧ್ಯಕ್ಷಗಿರಿಯಿಂದ ಹಿಡಿದು ಮುಖ್ಯಮಂತ್ರಿ ಮಂತ್ರಿ; ಮಂತ್ರಿಗಿರಿ ಹಂಚುವ ತನಕ ಕೆೈಯಾಡಿಸುತ್ತಾ ಬಂದಿರುವುದು ಹೆಚ್ಚೇನು ಗುಟ್ಟಾಗಿ ಉಳಿದಿಲ್ಲ. ಇದು ಸ್ವತಃ ಯಡಿಯೂರಪ್ಪನವರ ಗಮನಕ್ಕೂ ಬಂದಿದೆ. ಆದರೂ ಮಾತನಾಡಿದರೆ ಹೇೂಯಿತು.. ಅನ್ನುವ ಒಂದೇ ಕಾರಣಕ್ಕೆ ತಾಳ್ಮೆಯಿಂದ ಬುದ್ದಿವಂತಿಕೆಯ ಹೆಜ್ಜೆ ಇಡುತ್ತಾ ಬಂದಿದ್ದಾರೆ ನಮ್ಮ ಯಡಿಯೂರಪ್ಪನವರು. ತಕ್ಷಣ ಯಡಿಯೂರಪ್ಪನವರ ಮುಂದಿರುವ ಒಂದೇ ಹೆಬ್ಬಯಕೆ ಅಂದರೆ ಪುತ್ರ ವಿಜೇಂದ್ರರಿಗೆ ಪಕ್ಷದಲ್ಲಿ ಮತ್ತು ಸರಕಾರದ ಆಯಾ ಕಟ್ಟಿನ ಸ್ಥಾನದಲ್ಲಿ ಕುಳಿರಿಸುವುದು ಜೊತೆಗೆ ಪಕ್ಷದೊಳಗೆ ತನ್ನ ಅನಿವಾರ್ಯತೆ ಬಿಂಬಿಸಿ ಕಿಂಗ್ ಮೇಕರ್ ಆಗಿಯೇ ಮುಂದುವರಿಯಬೇಕೆಂಬ ಇಚ್ಛೆ.


3. ಆದರೆ ಬಿಜೆಪಿ ಹೆೈಕಮಾಂಡಿಗೆ ಯಡಿಯೂರಪ್ಪನವರಿಗೆ ಪಯಾ೯ಯವಾಗಿ ಇನ್ನೊಬ್ಬ ಸ್ವಚ್ಛ ಪ್ರಾಮಾಣಿಕ ಜಾತಿ ಮೀರಿದ ನಾಯಕನಿಗಾಗಿ ಹುಡುಕಾಟ ಬಯಕೆ. ಆದರೆ ಯಡಿಯೂರಪ್ಪನವರ ವಚ೯ಸ್ಸು ರಾಜ್ಯದಲ್ಲಿ ಇರುವ ತನಕ ಇದು ಸಾಧ್ಯವಿಲ್ಲ ಅನ್ನುವುದು  ಮೇಲೆ ಕೂತವರಿಗೂ ಗೊತ್ತಿದೆ. ಹಾಗಾಗಿ ಯಡಿಯೂರಪ್ಪನವರ ಹಿರಿತನದ ಪರಿಶ್ರಮದ ರಾಜ್ಯ ಪ್ರವಾಸ ಪಕ್ಷದ ವರಿಷ್ಠಗರಿಗೆ ಪ್ರಯಾಸದ ಪ್ರವಾಸವಾಗಿದೆ ಅನ್ನುವುದಂತೂ ಅಷ್ಟೇ ಸತ್ಯ.


4. ನೀವು ಪ್ರವಾಸಕ್ಕೆ ತೆರಳುವುದು ಬೇಡ ಅನ್ನುವ ಮಾತನ್ನು ನೇರವಾಗಿ ಯಡಿಯೂರಪ್ಪನವರಿಗೆ ಹೇಳು ಸ್ಥಿತಿಯಲ್ಲಿ ಹೆೈಕಮಾಂಡಿಲ್ಲ. ಅದಕ್ಕಾಗಿ ಯಡಿಯೂರಪ್ಪ ನವರ ಬಲಗೆೈ ಬಂಟ ಮುಖ್ಯಮಂತ್ರಿ ಬೊಮ್ಮಾಯಿಯವರಿಂದ ಹೇಳಿಸಿದರೆ ಹೇಗೆ ಅನ್ನುವ ಆಲೇೂಚನೆಯಲ್ಲಿ ವರಿಷ್ಠರಿದ್ದಾರೆ. ಆದರೆ ಮುಖ್ಯಮಂತ್ರಿಗಳಿಗೆ ಈ ಸಂದೇಶ ರವಾನಿಸುವುದು ಹೇಗಪ್ಪ ಅನ್ನುವ ಚಿಂತೆಯಲ್ಲಿ ಅವರಿದ್ದಾರೆ.


5. ಹಾಗಾಗಿಯೇ ಇರ ಬೇಕು ಕೊರೊನ ಪಿಡುಗಿನ ನಡುವೆಯೇ ತರಾತುರಿಯಲ್ಲಿ ಕೇಂದ್ರ ಸಚಿವರ ಜನಾಶೀವಾ೯ದ ಯಾತ್ರೆ ನಡೆಸಿರುವ ತಂತ್ರಗಾರಿಕೆಯೂ ಇದ್ದಿರಬಹುದಾ? ಅನ್ನುವ ಸಂಶಯ ಹುಟ್ಟಿಕೊಳ್ಳಲೂ ಶುರುವಾಗಿದೆ.


ಅಂತೂ ಯಡಿಯೂರಪ್ಪನವರ ಪ್ರವಾಸದ ಮುಂದಿನ ಹೆಜ್ಜೆ ಹೇಗಿರಬಹುದು ಅನ್ನುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು ನಿಜ. ಅಂತೂ ಕೊನೆಗೂ ಯಾರು ತಡೆಯುತ್ತಾರೆ ನೇೂಡುವ ಅಂದುಕೊಂಡು ಸ್ವಂತ ಖಚು೯ ಸ್ವಂತ ಇಚ್ಛೆಯಿಂದ ತಮ್ಮ ಕೇೂಟಿ ರಥವೇರಿ ಯಡಿಯೂರಪ್ಪನವರು ಪ್ರವಾಸಕ್ಕೆ ಹೊರಟರೂ ಆಶ್ಚರ್ಯವಿಲ್ಲ.


-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم