ಕೆಸರು ಮೆತ್ತಿದ ಕಾಲಿನೊಂದಿಗೆ ಆ ಪೊದೆಗಳ ನಡುವೆ ಹೆಜ್ಜೆ ಮುಂದಿರಿಸುವುದೆ ನನಗೆ ಆಗ ಸಾಹಸವಾಗಿತ್ತು. ಹೇಗೋ ಎದ್ದು-ಬಿದ್ದು ಕೊನೆಗೂ ಹಳ್ಳದ ಬಳಿ ತಲುಪಿದೆವು.
ನನ್ನ ಬಾಲ್ಯದ ಮಳೆಗಾಲದ ನೆನಪುಗಳಂತೂ ಒಂದೆರಡಲ್ಲ, ಅದರಲ್ಲೂ ಮಳೆಗಾಲದಲ್ಲಿ ಒಂದು ದಿನ ಅಜ್ಜನೊಂದಿಗೆ ಕಳೆವುದಂತೂ ತೀರಾ ಇಷ್ಟವಾದ ವಿಚಾರವಾಗಿತ್ತು. ಬಿಡದೆ ಸುರಿವ ಮಳೆಯಲ್ಲಿ, ಆ ಹೆಂಚಿನ ಮನೆಯೊಳಗೆ ಕುಳಿತರೆ ಒಳ್ಳೆ ಫ್ರೀಜರ್‌ನೊಳಗೆ ಕುಳಿತ ಅನುಭವ ಅದು. ಅಂತೂ ಆ ಮಳೆಯಲಿ ಒಂದು ಲೋಟ ಚಹಾ ಮತ್ತು ಹಲಸಿನ ಹಪ್ಪಳದ ರುಚಿಯಂತೂ ಈಗಲೂ ಬಾಯಲ್ಲಿ ನೀರೂರುವಂತಿದೆ.
ಎಂದಿನಂತೆ ಚಹಾ ಕುಡಿದು ಹಿತ್ತಲ ನಳ್ಳಿಯಿಂದ ನೀರು ತರಲು ಹೋದರೆ ಅಲ್ಲಿ ನೀರು ಬರುತ್ತಿಲ್ಲ. ಅಯ್ಯೋ ಈ ಮಳೆಗಾಲದಲ್ಲಿ ನೀರು ಬರುವುದಿಲ್ಲವೆ ಎಂದಾಗ ಅಜ್ಜ ಇದು ಆತನದೇ ಕೆಲಸ ಎಂದು ಕತ್ತಿ ಹಿಡಿದು ಮುನ್ನಡೆದರು.
ನಾವು ಹುಟ್ಟಿದ್ದು, ಬೆಳೆದಿದ್ದು, ಬಾಲ್ಯ ಕಳೆದದ್ದು ಬೆಟ್ಟ- ಗುಡ್ಡಗಳ ಹಚ್ಚ ಹಸಿರಿನ ಸೊಬಗಲ್ಲೆ. ಅಜ್ಜನ ಮನೆಗೆ ನೀರಿನ ಮೂಲ ಸ್ಥಾನವಿದ್ದುದು ಒಂದು ಸುರಂಗ ಮಾತ್ರ. ಅಂತೂ ನೀರಿನ ಫೈಪಲ್ಲಿ ನೀರು ಬರ್ತಾ ಇಲ್ಲ ಏನಾಗಿದೆ ಎಂದು ನೋಡಲು ಅಜ್ಜ ಹೊರಟ್ಟದ್ದೇ ತಡ ನಾನು ಹಠ ಹಿಡಿದು ಅವರೊಂದಿಗೆ ಹೊರಟೆ. ಮೊದಲೇ ಮಳೆಗಾಲ, ಹಿತ್ತಲ ಬೆಟ್ಟ ಹತ್ತಿ ಸುರಂಗದ ಬಳಿ ತಲುಪುವಷ್ಟರಲೇ ಕೆಸರಲ್ಲಿ ಮಿಂದೆದ್ದ ಹಂದಿಯಂತಾಗಿದ್ದೆ. ಹಾಗೆಯೇ ಮುಂದೆ ನಡೆದು ಅಜ್ಜ ಪೈಪು ಎತ್ತಿ ನೋಡಿದರು, ಕ್ಷಣದಲ್ಲೆ ನೀರು ಬಾರದೇ ಇರುಲು ಕಾರಣವದ ಆತನನ್ನು ಭೇದಿಸಿಯೇ ಬಿಟ್ಟರು. ಆ ಪೈಪೊಳಗೆ ಒಂದು ನೀರುಕಪ್ಪೆ ಸಿಲುಕಿಕೊಂಡಿತ್ತು ಅದನ್ನು ಬಿಡಿಸಿ ಪೈಪನ್ನು ಬಲೆಯಿಂದ ಮುಚ್ಚಿದಾಗ ಯಥಾ ಸ್ಥಿತಿ ನೀರು ಬರಲಾರಂಭಿಸಿತು. ಈ ವಿಚಾರವಂತೂ ಅಜ್ಜನಿಗೆ ರೂಢಿಯಾಗಿತ್ತು. ಪ್ರತಿ ಮಳೆಗಾಲದಲ್ಲೂ ಪೈಪಿನೊಳಗೆ ಏನಾದರೊಂದು ಹಾವೋ, ಕಪ್ಪೆನೋ ಸಿಲುಕಿಬಿಡುವುದು. ನಂತರ ಮನೆಗೆ ಮರಳಿದೆವು.
ಇದಂತು ಈಗ ನನಗೆ ನೆನಪಷ್ಟೆ, ಆದರೆ ಇಂದು ಹಳ್ಳಿಗಳಲ್ಲಿನ ಇಂತಹ ಸುರಂಗಗಳು ಮರೆಯಾಗುತ್ತಿವೆ. ಎಲ್ಲ ವಿಚಾರಗಳು ಕಡ್ಡಿ ಮುರಿದಷ್ಟು ಸುಲಭವಾಗಬೇಕೆಂಬ ನಿಟ್ಟಿನಲ್ಲಿ ಹಳ್ಳಿಗಳಲ್ಲೂ ಬೊರ್ವೆಲ್ ಗಳು ಹೆಚ್ಚುತ್ತಿದೆ. ಹಿಂದಿನ ಕಾಲದ ಇಂತಹ ಸುರಂಗಗಳು, ಬಾವಿ, ಹಳ್ಳ- ಕೊಳ್ಳಗಳು ಕಣ್ಮರೆಯಾಗುತ್ತಿದೆ.
- ಚೈತನ್ಯ ಮಾಣಿಲ
ಡಾ| ದಯಾನಂದ ಪೈ, ಸತೀಶ ಪೈ ಸ. ಪ್ರ. ದ. ಕಾಲೇಜು ರಥಬೀದಿ, ಮಂಗಳೂರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ