ಗೋಮಾತೆಯೇ ಆತ್ಮನಿರ್ಭರತೆಗೆ ಆಧಾರ...
ಕಲಬುರಗಿ: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗನ ವತಿಯಿಂದ ಕಲಬುರಗಿಯ ಶ್ರೀ ಮಾಧವ ಗೋಶಾಲೆಯಲ್ಲಿ ಗೋವಿನ ಸಗಣಿಯಿಂದ ತಯಾರಿಸಲಾದ ಓಂಕಾರದ 30 ಪ್ರತಿಕೃತಿಗಳನ್ನು ವಿಶ್ವವಿದ್ಯಾಲಯದ ಕಾರ್ಯಕ್ರಮಗಳಲ್ಲಿ ನೆನಪಿನ ಕಾಣಿಕೆಯಾಗಿ ನೀಡಲು ತರಿಸಿಕೊಂಡಿದ್ದಾರೆ.
ನಮ್ಮ ದೇಶದಲ್ಲಿ ಲಭ್ಯವಿರುವ ಬಹುಪಾಲು ಉಡುಗೊರೆಗಳು ಪ್ಲಾಸ್ಟಿಕ್‌ನಿಂದ ತಯಾರಿಸಲಾದ ಚೀನಾದ ವಿದೇಶಿ ಉತ್ಪನ್ನಗಳಾಗಿವೆ. ಗೋ ಕೇಂದ್ರಿತ ಸ್ವದೇಶಿ ಚಿಂತನೆಗೆ ಶ್ರೀ ಮಾಧವ ಗೋಶಾಲೆ ಪಣ ತೊಟ್ಟಿದ್ದು ಗೋವಿನ ಸಗಣಿಯಿಂದ ಹತ್ತಾರು ಉತ್ಪನ್ನಗಳನ್ನು ತಯಾರಿಸುತ್ತಿದ್ದು ಗೋಶಾಲೆ ಅನೇಕರಿಗೆ ಉದ್ಯೋಗ ನೀಡುತ್ತಿದೆ.
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ ರೀತಿಯಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳು ಸುತ್ತ ಮುತ್ತಲಿನ ಗೋಶಾಲೆಗಳಿಗೆ ನೆರವಾದಲ್ಲಿ ನಿರುಪಯುಕ್ತವೆಂದು ಕಸಾಯಿಗಳ ಪಾಲಾಗುತ್ತಿರುವ ಗೋವುಗಳನ್ನು ರಕ್ಷಿಸಬಹುದು. ಗೋರಕ್ಷಣೆ ಸಂವಿಧಾನದ ಆಶಯವಾಗಿದೆ. ಬನ್ನಿ ನಾವೆಲ್ಲರೂ ಗೋಶಾಲೆಗಳ ಪಂಚಗವ್ಯ, ಸ್ವದೇಶಿ ಉತ್ಪನ್ನಗಳನ್ನು ಬಳಸಿ ಗೋಮಾತೆಯ ರಕ್ಷಣೆ, ಸೇವೆ ಮಾಡೋಣ.
Summary: Karnataka State Rural Development and Panchayat Raj University, Gadag brought Gobar based 30 Omkar mementos from Sri Madhav Gaushala to support Gau centric Swadeshi economy.
Key Words: Gaumaya Gift Articles, Cow dung gift articles, Gaushala, ಗೋಮಯ ಕಲಾಕೃತಿಗಳು, ಗೋಮಯ ಗಣಪ, ಶ್ರೀ ಮಾಧವ ಗೋಶಾಲೆ ಕಲಬುರಗಿ,
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ