ಸರಯೂ ಮಕ್ಕಳ ಮೇಳದಿಂದ 'ತುಳು ಸಪ್ತಾಹ-ತುಳುವೆರೆ ಏಳಾಟೊ' ಆ. 9ರಿಂದ 15ರ ವರೆಗೆ

Upayuktha
0


 

ಮಂಗಳೂರು: 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಜಿಲ್ಲಾ ಪ್ರಪ್ರಥಮ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತಂಡವಾದ ಸರಯೂ ಮಕ್ಕಳ ಮೇಳ ತನ್ನ 'ತುಳು ಸಪ್ತಾಹ-ತುಳುವೆರೆ ಏಳಾಟೊ' ವಾರ್ಷಿಕ ಸಪ್ತಾಹವನ್ನು ಉರ್ವಾಸ್ಟೋರಿನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳುಭವನದ ಸಿರಿಚಾವಡಿಯಲ್ಲಿ ಆಗಸ್ಟ್ 9 ರಿಂದ 15ನೇ ದಿನಾಂಕದವರೆಗೆ ನಡೆಸಲಿದೆ.


ದಿನಂಪ್ರತಿ ಮಧ್ಯಾಹ್ನ 2.30ಕ್ಕೆ ಈ ಮಕ್ಕಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಕ್ರಮವಾಗಿ ಭಾಗ್ಯೊದ ಭ್ರಾಮರಿ, ಮೋಕೆದಪ್ಪೆ ಮೂಕಾಂಬಿಕೆ, ಹರಿನ ಲೀಲೆ, ಸಿರಿಯಪ್ಪೆ ಸಿರಿದೇವಿ, ರವಿ ರತ್ನೊ, ಬಿರುತ  ಪರ್ಬ, ಹಾಗೂ ರಾಮನ ಬಂಟೆ ಹನುಮಂತೆ ಎಂಬ ಏಳು ಪ್ರಸಂಗಗಳು ಪ್ರದರ್ಶಿಸಲ್ಪಡುತ್ತವೆ. ಉದ್ಯಮಿ ಶ್ರೀ ಶ್ರೀಪತಿ ಭಟ್, ಚೈತನ್ಯ ಕೃಷ್ಣ ಪದ್ಯಾಣ, ರವಿ ಭಟ್ ನೆಲ್ಯಾಡಿ, ಶ್ರೀಮತಿ ಸುಭದ್ರಾ ದೇವಿ, ಜಿ.ಕೆ.ಭಟ್, ಲೋಕೇಶ್ ಕಟೀಲು, ದೇವಕಾನ ಶ್ರೀಕೃಷ್ಣ ಭಟ್, ಕೃಷ್ಣಾಪುರ ಹರಿಭಟ್ ರವರ ಸನ್ಮಾನವೂ ಶ್ರೀ ಸ್ಕಂದ ಕೊನ್ನಾರ್ ರವರಿಗೆ ಪ್ರತಿಭಾ ಪುರಸ್ಕಾರವೂ ನಡೆಯಲಿದೆ.


ಕಾರ್ಯಕ್ರಮವನ್ನು ಕಟೀಲಿನ ಪ್ರಧಾನ ಅರ್ಚಕರೂ ವೆ.ಮೂ. ಹರಿನಾರಾಯಣ ದಾಸ ಆಸ್ರಣ್ಣರು ಉದ್ಘಾಟಿಸಲಿದ್ದು, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ 'ತುಳು ಬೊಳ್ಳಿ' ದಯಾನಂದ ಜಿ. ಕತ್ತಲ್ ಸಾರ್, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಸಂಸ್ಥೆಯ ಅಧ್ಯಕ್ಷ ಮಧುಸೂದನ ಅಲೆವೂರಾಯ ವರ್ಕಾಡಿ, ತುಳು ಅಕಾಡೆಮಿಯ ರಿಜಿಸ್ಟ್ರಾರ್ ಶ್ರೀಮತಿ ಕವಿತಾ, ಸರಯೂ ನಿರ್ದೇಶಕ ರವಿ ಅಲೆವೂರಾಯ ವರ್ಕಾಡಿ ಉಪಸ್ಥಿತರಿರುವರು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
To Top