ಮೈಸೂರು: ಹಿರಿಯ ಪತ್ರಕರ್ತ ಹಾಗೂ ಪ್ರಜಾನುಡಿ ಪತ್ರಿಕೆ ಸಹಾಯಕ ಸಂಪಾದಕ ವೀರಭದ್ರಪ್ಪ ವಿ ಬಿಸ್ಲಳ್ಳಿ ಅವರ ಮೂರು ಕೃತಿಗಳ ಬಿಡುಗಡೆ ಸಮಾರಂಭ ಜುಲೈ 24ರಂದು ನಡೆಯಲಿದೆ.
ವಿಸ್ಮಯ ಬುಕ್ ಹೌಸ್ ಹೊರ ತಂದಿರುವ ಲೋಕಾಂತದ ಮೊರೆತ, ನೆಲದ ನೆನಹು, ಇಂದ್ರಜಾಲ ಎನ್ನುವ ಮೂರು ವಿಭಿನ್ನ ಹಿನ್ನೆಲೆ, ವಸ್ತುವಿನ ಪುಸ್ತಕಗಳು ಬಿಡುಗಡೆಗೊಳ್ಳುತ್ತಿವೆ.
ಅಲ್ಲಮ ರೀಸರ್ಚ್ ಅಂಡ್ ಕಲ್ಚರಲ್ ೌಂಡೇಷನ್ ಶನಿವಾರ ಸಂಜೆ 4.30ಕ್ಕೆ ಮೈಸೂರಿನ ಎಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಆಯೀಜಿಸಿರುವ ಸಮಾರಂಭದಲ್ಲಿ ಶಾಸಕ ಜಿ.ಟಿ.ದೇವೇಗೌಡ ಕೃತಿ ಬಿಡುಗಡೆಗೊಳಿಸುವರು. ಮಾಜಿ ಶಾಸಕ ವಾಸು ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಮಹಿಮಾ ಪಟೇಲ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ರಾಜ್ಯಶಾಸ ಪ್ರಾಧ್ಯಾಪಕ ಪ್ರೊ.ಮುಜಾಫರ್ ಅಸ್ಸಾದಿ ಕೃತಿಗಳ ಕುರಿತು ಮಾತನಾಡುವರು. ರೈತ ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ, ಹಿರಿಯ ಪತ್ರಕರ್ತರಾದ ಪಿ. ಓಂಕಾರ್, ಚಿನ್ನಸ್ವಾಮಿ ವಡ್ಡಗೆರೆ, ಪ್ರಕಾಶಕ ಪ್ರಕಾಶ ಚಿಕ್ಕಪಾಳ್ಯ ಪಾಲ್ಗೊಳ್ಳುವರು ಎಂದು ವೀರಭದ್ರಪ್ಪ ಬಿಸ್ಲಳ್ಳಿ ತಿಳಿಸಿದ್ದಾರೆ.
ಎರಡು ದಶಕಕ್ಕೂ ಮಿಗಿಲಾಗಿ ಪತ್ರಿಕೋದ್ಯಮದ ಅನುಭವ ಹೊಂದಿರುವ ವೀರಭದ್ರಪ್ಪ ಬಿಸ್ಲಳ್ಳಿ ಅವರು ಲಾಕ್‌ಡೌನ್ ಅವ ಬಳಸಿಕೊಂಡು ಮೂರು ಕೃತಿಗಳನ್ನು ಸಿದ್ದಪಡಿಸಿದ್ದಾರೆ. ಹಿಂದೆ ಬೊಲಿವಿಯಾ ಪ್ರವಾಸ ಕೈಗೊಂಡಿದ್ದ ಕೃತಿಯನ್ನು ಹೊರ ತಂದಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ