ಮದುವೆಯಲ್ಲೂ ಬಾಳೆಕಾಯೂಟ!- ಒಂಭತ್ತು ದಶಕದ ಹಿಂದಿನ ನೆನಪು

Upayuktha
0


ನಿಮ್ಮೂರಲ್ಲೂ ಈ ಥರದ ಕತೆ ಸಿಕ್ಕರೆ ನಮ್ಮ ಜತೆ ಹಂಚಿಕೊಳ್ಳಿ.


ಆ ಕಾಲದಲ್ಲಿ ಅಕ್ಕಿ ಸಿಗಲು ಭಾರೀ ಕಷ್ಟ ಇತ್ತು. ಕಾಸರಗೋಡು ಜಿಲ್ಲೆಯ ಮಲ್ಲ ದೇವಸ್ಥಾನ- ಮುಳ್ಳೇರಿಯಾದ ಸನಿಹದಲ್ಲೆಲ್ಲೋ ಒಂದು ಮದುವೆ ಸಮಾರಂಭ. ರಾತ್ರಿ. ಬಾಳೆಕಾಯಿಯನ್ನು ಬೇಯಿಸಿ, ಸುಲಿದು ಪುಡಿ ಮಾಡಿ ಪಲ್ಯದಂತೆ ಮಾಡಿದ್ದರು. ಅದಕ್ಕು ಜತೆಗೆ ಮಾವಿನಕಾಯಿ ಚಟ್ನಿ. ಇದುವೇ ಅನ್ನ!


ವಾರದ ಹಿಂದೆ 'ಬಾಕಾಹು' ಕ್ರಾಂತಿಯ ಹಿನ್ನೆಲೆಯಲ್ಲಿ ಈ ಫ್ಲಾಷ್ ಬ್ಯಾಕ್ ನೆನಪಿಸಿಕೊಂಡವರು ಮೂಡಾಯಿಬೆಟ್ಟು ಮನೆಯ ಪ್ರಸನ್ನ ಅವರ ಅಮ್ಮ ವತ್ಸಲಾ. ಕಳೆದ ಶತಮಾನದ ಅಂದಾಜು 30ನೇ ದಶಕದ ಈ ಘಟನೆಯನ್ನು ವತ್ಸಲಾರಿಗೆ ಹೇಳಿದ್ದು ಅವರಜ್ಜ ಅಂತೆ. ಈ ಅಪೂರ್ವ ಮಾಹಿತಿ ತಿಳಿಸಿದ್ದಕ್ಕೆ ಪ್ರಸನ್ನ ಅವರಿಗೆ ಆಭಾರಿ. 

ಪುತ್ತೂರಿನ ವಸಂತಿ ಕೆ. ಸಾಮೆತ್ತಡ್ಕ ಫೇಸ್‌ಬುಕ್ಕಿನಲ್ಲಿ ನೆನಪು ಮಾಡಿಕೊಂಡಿರುವುದು ಹೀಗೆ: "ಅಪ್ಪ ಯಾವಾಗಲೂ ಹೇಳುತ್ತಾರೆ, 'ಬ್ರಿಟಿಷರ ಕಾಲದಲ್ಲಿ ಮನೆಗೆ ಲೆಕ್ಕ ಮಾಡಿ ಅಕ್ಕಿ ಕೊಡುತ್ತಿದ್ದರು. ಆಗ ಒಂದು ಹೊತ್ತಿಗೆ ಹೊಟ್ಟೆ ತುಂಬಿಸಲು ಬಾಳೆಕಾಯಿ ಗುದ್ದಿ ಬೇಯಿಸಿ ಒಗ್ಗರಣೆ ಹಾಕಿಯೋ ರೊಟ್ಟಿ ಮಾಡಿಯೋ ತಿನ್ನುತ್ತಿದ್ದರಂತೆ’ ಅಂತ.


ಮಿತ್ರರೇ, ನಿಮ್ಮ ಮನೆಯ, ಪ್ರೀತಿಯಿಂದ ನಿಮ್ಮೂರ ಹಿರಿ ತಲೆಗಳನ್ನು ಕೆದಕಿ ನೋಡಿ. ಈ ಥರದ ಬಾಳೆಕಾಯೂಟದ ಕತೆ ಸಿಕ್ಕರೆ ನಮ್ಮ ಜತೆ ಹಂಚಿಕೊಳ್ಳಿ.


-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು

Key Words: Banana Flour, Banana Powder, Banana Dishes, ಬಾಕಾಹು, ಬಾಳೆಕಾಯಿ, ಬಾಕಾಹು ಅಭಿಯಾನ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top