ಶಿರಸಿ ತಾಲೂಕಿನ "ಶ್ರೀರಾಮ್ ಹೋಮ್ ಪ್ರಾಡಕ್ಟ್ಸ್’ ಸಣ್ಣ ರೀತಿಯಲ್ಲಿ ಬಾಕಾಹು (ಬಾಳೆಕಾಯಿ ಹುಡಿ/ ಹಿಟ್ಟು) ತಯಾರಿಸಿ ಮಾರುಕಟ್ಟೆ ಮಾಡತೊಡಗಿದೆ. ಹೊಸೂರಿನ ಆಚೀಚೆ ಮನೆಗಳ ಗಂಗಾ ಹೆಗಡೆ, ಶೈಲಾ ಹರಿಹರ ಹೆಗಡೆ ಮತ್ತು ಮೇಧಾ ನಾರಾಯಣ ಹೆಗಡೆ ಈ ಗೃಹ ಉದ್ದಿಮೆಯಲ್ಲಿ ಪಾಲ್ಗೊಳ್ಳುವ ತ್ರಿಮೂರ್ತಿಗಳು.
ಇಷ್ಟರಲ್ಲೇ ಇವರು ಹಲವು ಆಹಾರ ಉತ್ಪನ್ನಗಳನ್ನು ಮಾಡಿ ಆನ್ ಲೈನ್ ಮಾರಾಟ ಮಾಡುತ್ತಿದ್ದಾರೆ. ಊರಲ್ಲಿ 'ಬಾಕಾಹು’ ಅಲೆ ಇದ್ದಾಗ ತಾವೂ ಮಾಡೋಣ ಅನಿಸಿತು. ಇರುವ ಕನಿಷ್ಠ ಸೌಕರ್ಯ ಬಳಸಿ ಮಾಡುತ್ತಿದ್ದಾರೆ.
ಇಷ್ಟರಲ್ಲೇ ಇವರು ಹಲವು ಆಹಾರ ಉತ್ಪನ್ನಗಳನ್ನು ಮಾಡಿ ಆನ್ ಲೈನ್ ಮಾರಾಟ ಮಾಡುತ್ತಿದ್ದಾರೆ. ಊರಲ್ಲಿ 'ಬಾಕಾಹು' ಅಲೆ ಇದ್ದಾಗ ತಾವೂ ಮಾಡೋಣ ಅನಿಸಿತು. ಇರುವ ಕನಿಷ್ಠ ಸೌಕರ್ಯ ಬಳಸಿ ಮಾಡುತ್ತಿದ್ದಾರೆ.
ಗಂಗಾ ಹೆಗಡೆ ಹೇಗೆ ಹೇಳುತ್ತಾರೆ: "ಮೈದಾಹಿಟ್ಟಿನ ಬದಲು ಇದರನ್ನು ಉಪಯೋಗಿಸಬಹುದು. ಗೋಧಿ ಹಿಟ್ಟು ಶರೀರಕ್ಕೆ ಆಗದವರಿದ್ದರೆ ಅವರೂ ಬಾಕಾಹು ಉಪಯೊಗಿಸಬಹುದು. ಈ ಹುಡಿ ಬಹೂಪಯೋಗಿ. ಮನೆಯಲ್ಲಿದ್ದರೆ ನಿತ್ಯವೂ ಬಳಸಬಹುದು. ನಾವು ಇದರಿಂದ ಈಗಾಗಲೇ ಮಸಾಲೆ ದೋಸೆ, ಕಾಂದಾ ಬಜೆ, ಪಕೋಡ, ನಿಪ್ಪಟ್ಟು, ಚಕ್ಕುಲಿ, ಹಲಸಿನ ಹಣ್ಣಿನ ಪಲ್ಪ್ ಸೇರಿಸಿ ಮಾಡಿದ ಮಾಲ್ಟ್ ಇತ್ಯಾದಿ ಮಾಡಿದ್ದೇವೆ. ಇನ್ನೂ ಅನೇಕ ತಯಾರಿ ಸಾಧ್ಯ."
ಇವರ ಬಾಕಾಹುವಿನ ಬೆಲೆ ಕಿಲೋ ಒಂದಕ್ಕೆ ರೂ 200 + ಶಿಪ್ಪಿಂಗ್
ಆದೇಶ ಕೊಟ್ಟು ಒಂದು ವಾರದಲ್ಲಿ ರವಾನೆ. ಸಂಪರ್ಕ ನಂಬರು: 94494 65191
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
Key Words: Banana Flour, Dry Banana Flour, Banana Powder, ಬಾಕಾಹು, ಬಾಳೆಕಾಯಿ ಹುಡಿ, ಶಿರಸಿ, ಬಾಕಾಹು ಆಂದೋಲನ,
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ