ಖ್ಯಾತ ವಿಜ್ಞಾನ ಲೇಖಕ, ಡಿಅರ್‌ಡಿಓ ವಿಜ್ಞಾನಿ ಹಾಲ್ದೊಡ್ಡೇರಿ ಸುಧೀಂದ್ರ ನಿಧನ

Upayuktha
0

ಬೆಂಗಳೂರು: ಡಿಆರ್‌ಡಿಓ ಸಂಸ್ಥೆಯ ಹಿರಿಯ, ಖ್ಯಾತ ವಿಜ್ಞಾನ ಲೇಖಕ ಸುಧೀಂದ್ರ ಹಾಲ್ದೊಡ್ಡೇರಿ ಅವರು ಇಂದು ನಿಧನರಾದರು. ಅವರಿಗೆ 61 ವರ್ಷ ವಯಸ್ಸಾಗಿತ್ತು.


ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಒಂದು ವಾರದ ಹಿಂದೆ ಅವರಿಗೆ ಹೃದಯಾಘಾತವಾಗಿತ್ತು ಎಂದು ತಿಳಿದುಬಂದಿದೆ. ಆಗಲೇ ಮಿದುಳಿಗೆ ರಕ್ತ ಪೂರೈಕೆ ಸ್ಥಗಿತವಾಗಿ ಮಿದುಳು ನಿಷ್ಕ್ರಿಯವಾಗಿತ್ತು ಎಂದು ವೈದ್ಯಕೀಯ ಮೂಲಗಳು ಹೇಳಿವೆ.


ಅವರನ್ನು ಬದುಕಿಸಲು ವೈದ್ಯರು ನಡೆಸಿದ ಎಲ್ಲ ಪ್ರಯತ್ನಗಳೂ ವಿಫಲವಾಗಿದ್ದು, ಇಂದು ಮಧ್ಯಾಹ್ನ ಅವರು ನಿಧನರಾದರು ಎಂದು ವೈದ್ಯರು ಘೋಷಿಸಿದರು. ಅವರು ಪತ್ನಿ ಸೌಮ್ಯಾ ಸುಮಾ ಹಾಗೂ ಪುತ್ರಿ ಮೇಘಾ ರನ್ನು ಅಗಲಿದ್ದಾರೆ.



ದೀರ್ಘ ಕಾಲ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (ಡಿಆರ್‌ಡಿಓ) ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದ ಅವರು, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಜತೆಗೆ ಮುಂಚೂಣಿಯಲ್ಲಿ ಗುರುತಿಸಲ್ಪಟ್ಟಿದ್ದರು.


ಕನ್ನಡದ ಹೆಸರಾಂತ ಪತ್ರಿಕೆಗಳಲ್ಲಿ ಅವರ ವಿಜ್ಞಾನ ಬರಹಗಳ ಅಂಕಣಗಳು ಪ್ರಕಟವಾಗುತ್ತಿದ್ದವು.


ಅಂತರಿಕ್ಷ ವಿಜ್ಞಾನ, ಕ್ಷಿಪಣಿಗಳು, ರಾಕೆಟ್ ವಿಜ್ಞಾನ, ಜಲ ಮತ್ತು ನೆಲದ ಕೌತುಕಗಳು- ಹೀಗೆ ಹಲವು ವಿಷಯಗಳ ಬಗ್ಗೆ ತಮ್ಮದೇ ಆಕರ್ಷಕ ಶೈಲಿಯಲ್ಲಿ ಅವರು ಅಂಕಣಗಳನ್ನು ಬರೆಯುತ್ತಿದ್ದರು.


ವಿಜ್ಞಾನದ ಪ್ರಸರಣಕ್ಕೆ ತಮ್ಮ ಜ್ಞಾನ ಮತ್ತು ಜೀವನವನ್ನು ಮುಡಿಪಾಗಿಟ್ಟಿದ್ದ ಸುಧೀಂದ್ರ ಹಾಲ್ದೊಡ್ಡೇರಿ ಅವರ ದೇಹವನ್ನು ಬೆಂಗಳೂರಿನ ಮೆಡಿಕಲ್ ಕಾಲೇಜಿಗೆ ನೀಡಲು ಕುಟುಂಬದವರು ನಿರ್ಧರಿಸಿದ್ದಾರೆ.


ಉಪಯುಕ್ತ ನ್ಯೂಸ್‌ ನುಡಿನಮನ:

ಹಿರಿಯ ವಿಜ್ಞಾನಿ, ಹೆಸರಾಂತ ವಿಜ್ಞಾನ ಬರಹಗಾರ ಸುಧೀಂದ್ರ ಹಾಲ್ದೊಡ್ಡೇರಿ ಅವರನ್ನು ಕೆಲವು ತಿಂಗಳ ಹಿಂದೆ ಉಪಯುಕ್ತ ನ್ಯೂಸ್ ವತಿಯಿಂದ ಸಂಪರ್ಕಿಸಿ ಲೇಖನಗಳನ್ನು ಬರೆದು ಕಳುಹಿಸುವಿರಾ ಎಮದು ಕೋರಲಾಗಿತ್ತು. ಅದಕ್ಕೆ ಅವರು ತಕ್ಷಣವೇ ಸ್ಪಂದಿಸಿ, ಖಂಡಿತವಾಗಿಯೂ ಕಳುಹಿಸಿಕೊಡ್ತೇನೆ ಎಂದು ಹೇಳಿದ್ದರು. ಜತೆಗೆ ತಮ್ಮ ತಂದೆಯವರ ಸ್ನೇಹಿತರಾಗಿದ್ದ ಹಿರಿಯ ಪತ್ರಕರ್ತರೊಬ್ಬರ ಬಗ್ಗೆ ಸದ್ಯದ ಮಾಹಿತಿಯನ್ನೂ ವಿಚಾರಿಸಿದ್ದರು.

ಸುಧೀಂದ್ರ ಸರ್, ಹೋಗಿ ಬನ್ನಿ ಸರ್. ಭಾರವಾದ ಎದೆಯೊಂದಿಗೆ ನಿಮ್ಮನ್ನು ಬೀಳ್ಕೊಡುತ್ತಿದ್ದೇವೆ.



Key Words:  Sudhindra Haldodderi, DRDO, Kannada Science Writer, ಸುಧೀಂದ್ರ ಹಾಲ್ದೊಡ್ಡೇರಿ, ಡಿಆರ್‌ಡಿಓ,


ನುಡಿನಮನ: ಡಾ. ಸುಧೀಂದ್ರ ಹಾಲ್ದೊಡ್ಡೇರಿ: ವಿನೀತ ಸ್ವಭಾವದ ನವನೀತ

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top