ಬಾಳೆಕಾಯಿ ಹುಡಿ ಅಭಿಯಾನದಲ್ಲಿ ಇಂದಿನ ಹೊಸ ಪಾಕ ಶ್ಯಾಮಲಾ ಮಹೇಶ್ ಮುಕ್ರಮನೆ ಅವರದ್ದು.
ವಿಧಾನ:
ಒಂದು ಕಪ್ ಬಾಕಾಹುವಿಗೆ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಗಂಟಿಲ್ಲದಂತೆ ಕಲಸಿಕೊಳ್ಳಿ. ಅದನ್ನು ಒಲೆಯ ಮೇಲಿಟ್ಟು ಕುದಿಸಿ. ಗಟ್ಟಿಯಾದ ನಂತರ ಉಂಡೆ ಮಾಡಿ ಪೂರಿಯಂತೆ ತಟ್ಟಿ.
ಸಣ್ಣ ಉರಿಯಲ್ಲಿ ಎಣ್ಣೆಯಲ್ಲಿ ಬೇಯಿಸಿ. ಮತ್ತೊಂದು ಕಡೆ ಬೆಲ್ಲದ ಎಳೆಯ ಪಾಕ ಮಾಡಿ ಅದಕ್ಕೆ ಎಳ್ಳನ್ನು ಹುರಿದು ಹಾಕಿ. ಬೆಲ್ಲದ ಪಾಕ ಬಿಸಿ ಇರುವಾಗಲೇ ಕರಿದಿಟ್ಟದ್ದನ್ನು ಅದಕ್ಕೆ ಹಾಕಿ ಐದು ನಿಮಿಷ ಬಿಟ್ಟರೆ ರುಚಿಯಾದ ಸಂದ್ಯಾನೆ ರೆಡಿ.
(ಪ್ರೇರಣೆ: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)
Key Words: Banana Powder, Banana Flour, Recipe, ಬಾಳೆಕಾಯಿ ಹುಡಿ, ಬಾಕಾಹು,
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ