ಸವಿರುಚಿ: ಇದೀಗ ಬಾಕಾ ಇಡ್ಲಿಯೂ ರೆಡಿ, ಇನ್ನೇನು ಬೇಕು?

Upayuktha
1 minute read
0

ಬಾಳೆಕಾಯಿ ಹುಡಿಯಿಂದ ಮಾತ್ರವಲ್ಲ, ಬಾಳೆಕಾಯಿ ರವೆಯಿಂದಲೂ ನಾನಾ ಬಗೆಯ ತಿಂಡಿ-ತಿನಿಸು ತಯಾರಿಸಲು ಸಾಧ್ಯ ಅನ್ನುವುದನ್ನು ಉತ್ತರ ಕನ್ನಡದ ಈ ಉತ್ಸಾಹಿ ಅತ್ತೆ-ಸೊಸೆ ಮಾಡಿ ತೋರಿಸಿದ್ದಾರೆ.


ಅತ್ತೆ ಸುವರ್ಣ ಹೆಗಡೆ ಶಿರಗೋಡ್‌ ಮತ್ತು ಸೊಸೆ ಆಶ್ರಿತಾ ಹೆಗಡೆ ತುಂಬೆಮನೆ ಅವರೇ ಈ ಪ್ರಯೋಗ ಮಾಡಿ ಯಶಸ್ವಿಯಾದ ಗೃಹಿಣಿಯರು.


ಇಡ್ಲಿ ತಯಾರಿಯಲ್ಲಿ ಉದ್ದಿನ ಬೇಳೆಗೆ ಖೊಕ್ ಕೊಟ್ಟು ಈ ಇಬ್ಬರು ಉಕದ ಗೃಹಿಣಿಯರು ಬಾಳೆಕಾಯಿ ರವೆ ಸೇರಿಸಿ ಗೆದ್ದಿದ್ದಾರೆ. ಬಾಳೆಕಾಯಿ ರವೆ ವರ್ಷದ ಹನ್ನೆರಡು ತಿಂಗಳೂ ಮನೆಯಲ್ಲೇ ಮಾಡಿಕೊಳ್ಳಬಹುದು.


ಬಾಳೆಕಾಯಿ ಕಡಿ ಇಡ್ಲಿ

ಬೇಕಾಗುವ ಸಾಮಗ್ರಿ

ಬಾಳೆಕಾಯಿ ಕಡಿ -1/2 ಕಪ್

ಉದ್ದಿನ ಬೇಳೆ-1/2 ಕಪ್

ಕೊತ್ತಂಬರಿ ಸೊಪ್ಪು- ಸ್ವಲ್ಪ

ಹಸಿ ಮೆಣಸು-1

ಶುಂಠಿ- ಸ್ವಲ್ಪ ತುರಿದ ಚೂರು


ಎಣ್ಣೆ- 1 ಚಮಚ (ಕೊಬ್ಬರಿ ಎಣ್ಣೆ) ಮಾಡುವ ವಿಧಾನ:

ಮೊದಲು ಉದ್ದಿನಬೇಳೆ ನೆನೆಸಿಡಿ 2 ತಾಸು ನಂತರ ಬಾಳೆಕಾಯಿ ಕಡಿ 15- 20 ನಿಮಿಷ ಕಲಸಿಡಬೇಕು. ಕಲಸಿದ ನಂತರ ಅದಕ್ಕೆ ಕೊತ್ತಂಬರಿ ಸೊಪ್ಪು, ಹಸಿ ಮೆಣಸು, ಶುಂಠಿ ಮತ್ತು ಎಣ್ಣೆ ಹಾಕಿ ಕಲಸಿಕೊಳ್ಳಿ. ಆಮೇಲೆ ಇಡ್ಲಿ ಪಾತ್ರೆಗೆ ಸ್ವಲ್ಪ ಎಣ್ಣೆ ಸವರಿ ಹದ ಮಾಡಿದ ಇಡ್ಲಿ ಹಿಟ್ಟು ಅದಕ್ಕೆ ಹಾಕಿ 15 ನಿಮಿಷ ಬೇಯಿಸಬೇಕು. ಇದನ್ನು ಚಟ್ನಿಯೊಂದಿಗೆ ಸವಿಯಲು ಸಿದ್ಧ. (ಅಲಂಕಾರಕ್ಕೆ ಕ್ಯಾರೆಟ್ ಕೂಡ  ಹಾಕಬಹುದು)

ಪಾಕ: ಸುವರ್ಣ ಹೆಗಡೆ ಶಿರಗೋಡ್

ಆಶ್ರಿತಾ ಹೆಗಡೆ ತುಂಬೆಮನೆ

(ಪ್ರಯೋಗಕ್ಕೆ ಪ್ರೇರಣೆಯಾದವರು: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)



These Sirsi housewives have successfully replaced Black gram dal with Banana rava in Idli.


Key Words: ಬಾಕಾಹು, ಬಾಳೆಕಾಯಿ ಹುಡಿ, ಬಾಳೆಕಾಯಿ ರವೆ, ಬಾಕಾ ರವೆ ಇಡ್ಲಿ, Banana Rava Idli, Banana Rava, Recipe


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
To Top