ಬೆಂಗಳೂರು: ಒಂದನೇ ತರಗತಿಯಿಂದ ಪಿಯುಸಿ ವರೆಗೆ ಓದುವ, 6 ರಿಂದ 18 ವಯಸ್ಸಿನ ಬಡ ಹಾಗೂ ಅನಾಥ ಗಂಡು ಮಕ್ಕಳಿಗೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದಲ್ಲಿ ಉಚಿತ ಊಟ-ವಸತಿ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಆಶ್ರಮದ ಗೌರವ ಕಾರ್ಯದರ್ಶಿ ಸಿ.ಎಚ್. ಕೃಷ್ಣಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಶ್ರಮದಲ್ಲಿ ಮಕ್ಕಳಿಗೆ ಅಗತ್ಯವಿರುವ ಪಾಠಗಳನ್ನು ಹೇಳಿಕೊಡಲಾಗುವುದಲ್ಲದೇ, ಭಾರತೀಯ ಸಂಸ್ಕೃತಿಯನ್ನು ಕಲಿಸಿಕೊಡಲಾಗುವುದು. ವಿದ್ಯಾರ್ಥಿಗಳು ಆಶ್ರಮದ ಸುತ್ತ ಮುತ್ತಲಿನ ಶಾಲಾ ಕಾಲೇಜುಗಳಿಗೆ ಸೇರಬಹುದಾಗಿದೆ. ಆಸಕ್ತರು ಅರ್ಜಿ ಸಲ್ಲಿಸಿ. ವಿವರಗಳಿಗೆ ಸಂಪರ್ಕಿಸಿ: 9731004160, 6364117435.
Key Words: Siddharoodha Ashrama, Kengeri, Bengaluru, ಸಿದ್ಧಾರೂಢ ಆಶ್ರಮ, ಕೆಂಗೇರಿ, ಬೆಂಗಳೂರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ