ಶ್ರೀರಾಮಾಯಣ ಹಕ್ಕಿನೋಟ
"ರಾಮಮಂತ್ರವ ಜಪಿಸೋ"
ಪುರಂದರದಾಸರ ಕೀರ್ತನೆ
ರಾಮಮಂತ್ರವ ಜಪಿಸೋ ಹೇ ಮನುಜ
ರಾಮಮಂತ್ರವ ಜಪಿಸೋ|
ಆ ಮಂತ್ರ ಈ ಮಂತ್ರ ಜಪಿಸಿ ಕೆಡಲು ಬೇಡ
ಸೋಮಶೇಖರ ತನ್ನ ಭಾಮೆಗೊಲಿದ ಮಂತ್ರ||
ಕುಲಹೀನನಾದರೂ ಕೂಗಿ ಜಪಿಸುವ ಮಂತ್ರ
ಜಲಜಭವ ನಿತ್ಯ ಜಪಿಸುವ ಮಂತ್ರ
ಕಲುಷ ಪರ್ವತಕಿದು ಕುಲಿಶವಾಗಿಹ ಮಂತ್ರ
ಸುಲಭದಿ ಮುಕುತಿಯ ಕೊಡುವ ಮಹಾಮಂತ್ರ||
ಮರುತಾತ್ಮಜ ನಿತ್ಯ ಸ್ಮರಣೆ ಮಾಡುವ ಮಂತ್ರ
ಸರ್ವ ಋಷಿಗಳಲಿ ಸೇರಿದ ಮಂತ್ರ
ದುರಿತ ಕಾನನಕಿದು ದಾವಾನಲ ಮಂತ್ರ
ಪೊರೆದು ವಿಭೀಷಣಗೆ ಪಟ್ಟಗಟ್ಟಿದ ಮಂತ್ರ||
ಜ್ಞಾನನಿಧಿ ನಮ್ಮ ಆನಂದತೀರ್ಥರು
ಸಾಮರಾಗದಿ ನಿತ್ಯ ಸೇವಿಪ ಮಂತ್ರ
ಭಾನುಕುಲಾಂಬುಧಿ ಸೋಮನೆನಿಪ ನಮ್ಮ
ದೀನರಕ್ಷಕ ಪುರಂದರ ವಿಠಲನ ಮಂತ್ರ||
-ವಿಶ್ವ
ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಧನ್ಯವಾದ
ReplyDelete