ಇತ್ತೀಚೆಗೆ ಎರಡು ಮೂರು ದಿನಗಳಿಂದ ಮತ್ತೆ ಗುಸು ಗುಸು, ಸುಂಟರಗಾಳಿ ಎದ್ದಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಾರೆ. ಅರ್ಥಾತ್ ಕೆಳಗಿಳಿಸುತ್ತಾರಾ? ನಾನು ಸ್ವಲ್ಪ ಸಮಯದ ಹಿಂದೆ ಈ ಕುರಿತಾಗಿ ಒಂದು ಲೇಖನವನ್ನು ಬರೆದಿದ್ದೆ. "ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸವುದು ಸಾದ್ಯವಿಲ್ಲದ ಮಾತು".
ಆದರೆ ಮೊನ್ನೆ ತಾನೇ ಯಡಿಯೂರಪ್ಪನವರು ಮತ್ತು ಅವರ ಮಗ ವಿಜೇಂದ್ರ ದೆಹಲಿಗೆ ತೆರಳಿ ಬಿಜೆಪಿಯ ರಾಷ್ಟ್ರೀಯ ಮುಖಂಡರನ್ನು ಕಂಡು ಶಾಲು ಹೊದಿಸಿ ಬಂದ ಮೇಲೆ ಮತ್ತೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸುದ್ದಿ ಸುಂಟರಗಾಳಿಯಂತೆ ಸುತ್ತಲು ಶುರುಮಾಡಿದೆ. ಹಾಗಾದರೆ ಇದು ಹೇಗೆ ಸಾಧ್ಯ? ಯಡಿಯೂರಪ್ಪ ಇಲ್ಲದ ಬಿಜೆಪಿಯ ಪರಿಸ್ಥಿತಿ ಏನಾಗಬಹುದು? ಯಡಿಯೂರಪ್ಪನವರ ಬಯಕೆಗೆ ವಿರುದ್ಧವಾಗಿ ನಿಂತು ಇನ್ನೊಬ್ಬ ನಾಯಕನನ್ನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸುವಷ್ಟು ಪಕ್ಷ ಬಿಜೆಪಿ ಕನಾ೯ಟಕದಲ್ಲಿ ಗಟ್ಟಿಯಾಗಿದೆಯಾ? ಎಂಬಿತ್ಯಾದಿ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಸಹಜವಾಗಿ ಚರ್ಚೆಗೆ ಗ್ರಾಸವಾಗಿದೆ.
ಒಂದಂತೂ ಸತ್ಯ ಯಡಿಯೂರಪ್ಪನವರ ಇಚ್ಛೆಗೆ ವಿರುದ್ಧವಾಗಿ ಕುರ್ಚಿಯಿಂದ ಕೆಳಗಿಳಿಸಿ ಇನ್ನೊಬ್ಬ ನಾಯಕನನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕುಾರಿಸುವಷ್ಟು ರಾಜ್ಯದಲ್ಲಿ ಬಿಜೆಪಿ ಬೆಳೆದಿಲ್ಲ ಅನ್ನುವುದು ಬಿಜೆಪಿ ಹೆೈಕಮಾಂಡಿಗೂ ಗೊತ್ತಿದೆ. ಹೀಗೆ ಮಾಡುವುದೆಂದರೆ ರಾಜ್ಯದಲ್ಲಿ ಬಿಜೆಪಿ ಆತ್ಮಹತ್ಯೆ ಮಾಡಿಕೊಂಡ ಹಾಗೇ. ಇದೇ ಸಂದರ್ಭಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದೆ. ಕಾಂಗ್ರೆಸ್ ಪಕ್ಷ ಅನ್ನುವುದು ಇತ್ತೀಚಿನ ಅವರ ನಾಯಕರ ಮಾತಿನಲ್ಲೇ ವ್ಯಕ್ತವಾಗುತ್ತಿದೆ. ಯಡಿಯೂರಪ್ಪ ಕೆಳಗಿಳಿಯ ಬಹುದೆಂಬ ಗಾಳಿ ಸುದ್ದಿ ಹರಡುವಾಗಲೇ ಯಡಿಯೂರಪ್ಪ ನವರ ಮೇಲಿನ ನಿಷ್ಠೆ; ಅನುಕಂಪ ಉಕ್ಕಿ ಹರಿಯಲು ಶುರುವಾಗಿದೆ. ಇದರ ಅಥ೯ ಯಡಿಯೂರಪ್ಪನವರ ಮೇಲಿನ ಪ್ರೀತಿ ಅನುಕಂಪ ಅಲ್ಲ. ಯಡಿಯೂರಪ್ಪನವರ ಹಿಂದಿರುವ ಓಟ್ ಬ್ಯಾಂಕ್ "ಎನ್‌ಕ್ಯಾಶ್" ಹೇಗೆ ಮಾಡಬಹುದು ಅನ್ನುವುದರ ದೂರಾಲೇೂಚನೆ ಅನ್ನುವುದರಲ್ಲಿ ಎರಡು ಮಾತಿಲ್ಲ.
ಹಾಗಾದರೆ ಇಂತಹ "ಮಾಸ್ ಲೀಡರ್ "ನನ್ನು ಅಷ್ಟು ಸುಲಭದಲ್ಲಿ ಕಳೆದುಕೊಳ್ಳಲು ಬಿಜೆಪಿ ಸಿದ್ದವಿದೆಯೇ ಅನ್ನುವುದು ಕುತೂಹಲದ ಪ್ರಶ್ನೆ? ಹಾಗಾದರೆ ಬಿಜೆಪಿಯ ಮುಂದಿರುವ ಸಾಧ್ಯತೆಗಳೇನು?
1. ಯಡಿಯೂರಪ್ಪನವರನ್ನು ಇನ್ನೂ ಉಳಿದಿರುವ ಎರಡು ವಷ೯ದ ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಸಿ; ಅನಂತರದಲ್ಲಿ ಇನ್ನೊಬ್ಬ ನಾಯಕನನ್ನು ಮುಖ್ಯಮಂತ್ರಿಗಾಗಿ ಹುಡುಕಾಟ. ಇದು ಇಂದಿನ ಬಿಜೆಪಿಯ ಅತಂತ್ರ ಸರಕಾರದಲ್ಲಿ ಅನಿವಾರ್ಯ ಕೂಡಾ.
2. ಇನ್ನೊಂದು ಸಾಧ್ಯತೆ ಅಂದರೆ ಬಿಜೆಪಿ ಹೆೈಕಮಾಂಡ್ ಯಡಿಯೂರಪ್ಪನವರಿಗೆ ಇನ್ನೊಂದು ಆಫರ್ ಕೊಟ್ಟಿರುವ ಸಾಧ್ಯತೆ ಅಂದರೆ ಈಗಲೇ ನೀವು ಕುರ್ಚಿಯಿಂದ ಇಳಿದು ನಾವು ಸೂಚಿಸಿದ ನಾಯಕನಿಗೆ ನಿಮ್ಮ ಕೆೈಯಿಂದಲೇ ಮುಖ್ಯಮಂತ್ರಿ ಕುಚಿ೯ ಧಾರೆ ಎರೆದುಕೊಟ್ಟರೆ ನೀವು ಬಯಸಿದ ರಾಜ್ಯದಲ್ಲಿಯೇ ರಾಜ್ಯಪಾಲ ಹುದ್ದೆ ನೀಡಿ ಗೌರವಿಸುವುದು ಇದರ ಜೊತೆಗೆ ನಿಮ್ಮ ಚಾಣಾಕ್ಷ ಪುತ್ರನಿಗೆ ರಾಜ್ಯದಲ್ಲಿ ಉನ್ನತ ಮಂತ್ರಿ ಪದವಿ ನೀಡಿ ಸಂಮಾನಿಸುವುದು. ಇದು ಆಗುವುದಿದ್ದರೆ ಈಗಲೇ ಆಗಬೇಕು. ಮತ್ತೆ 2023ರ ನಂತರ ಗ್ಯಾರಂಟಿ ಇಲ್ಲ. ಹಾಗೆನ್ನುವಾಗ ಯಡಿಯೂರಪ್ಪನವರು ಈ ಬಯಕೆಗೆ ತಲೆ ತೂಗಿರುವ ಸಾಧ್ಯತೆಯುಾ ತಳಿ ಹಾಕಲಾರದು. ಒಟ್ಟಿನಲ್ಲಿ ಯಡಿಯೂರಪ್ಪನವರನ್ನು ಹೊರಗಿಟ್ಟು ಲಿಂಗಾಯತರನ್ನು ಎದುರು ಹಾಕಿಕೊಳ್ಳಲು ಬಿಜೆಪಿಗೆ ಕರ್ನಾಟಕದ ಮಟ್ಟಿಗೆ ಕನಸಿನಲ್ಲೂ ಸಾಧ್ಯವಿಲ್ಲ ಅನ್ನುವುದು ಬಹು ಹಿಂದೆಯೇ ಜಾಹೀರುಗೊಂಡಿದೆ.
ಯಡಿಯೂರಪ್ಪನವರು ರಾಜ್ಯಪಾಲ ಹುದ್ದೆ ಸ್ವೀಕರಿಸಿದರು ಅಂದರೆ ಮತ್ತೆ ಅವರ ಟ್ರಂಪ್ ಕಾರ್ಡ್ ನೇರವಾಗಿ ಮುಂದಿನ ಚುನಾವಣೆಯಲ್ಲಿ ಬಳಸಲು ಸಾಧ್ಯವಾಗುವುದಿಲ್ಲ ಅನ್ನುವ ಸತ್ಯ ಬಿಜೆಪಿಗೆ ತಿಳಿದಿದೆ. ಹಾಗಾಗಿ ಸದ್ಯದ ಮಟ್ಟಿಗೆ ಇನ್ನೊಬ್ಬ ಲಿಂಗಾಯತ ಮುಖಂಡನನ್ನೇ ಮುಖ್ಯಮಂತ್ರಿ ಸ್ಥಾನಕ್ಕೆ ಸೂಚಿಸಬೇಕಾದ ಅನಿವಾರ್ಯತೆ ಬಿಜೆಪಿಗೆ ಬಂದೇ ಬರುತ್ತದೆ. ಬಾರದಿದ್ದರೂ ಬರುವ ವಾತಾವರಣ ಕಾಂಗ್ರೆಸ್ ಬಿಜೆಪಿ ಮಟ್ಟಿಗೆ ಸೃಷ್ಟಿ ಮಾಡಿಯೇ ಮಾಡುತ್ತದೆ. ಅಂತೂ ಜುಲೈ 22 ಮತ್ತು 26ರ ಎರಡು ಬಹು ಮುಖ್ಯವಾದ ಸಚಿವ ಸಂಪುಟದ ಸಭೆ ಮತ್ತು ಶಾಸಕಾಂಗ ಸಭೆ ರಾಜಕೀಯ ವಲಯದಲ್ಲಿ ಜನರನ್ನು ತುದಿಗಾಲಿನಲ್ಲಿ ನಿಲ್ಲಿಸಿರುವುದಂತೂ ನಿಜ. ಸದ್ಯಕ್ಕೆ ರಾಜ್ಯದಲ್ಲಿ ನಡೆಯುತ್ತಿರುವ ಬಿರುಸಿನ ಚರ್ಚೆ ಅನ್ನುವುದರಲ್ಲಿ ಎರಡು ಮಾತಿಲ್ಲ.
-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
Key Words: BJP, Karnataka BJP, Karnataka politics, BJP Politics, BS Yediyurappa, ಬಿಜೆಪಿ, ಕರ್ನಾಟಕ ಬಿಜೆಪಿ, ಬಿ.ಎಸ್ ಯಡಿಯೂರಪ್ಪ,
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ