ಪ್ರಾತಿನಿಧಿಕ ಚಿತ್ರ
ಬನ್ನಿರಿ ಗೆಳೆಯರೆ ಒಳಗಡೆ ನೋಡಿರಿ
ನಲ್ಮೆಯ ನಮ್ಮಯ ಹೊಸಮನೆಯು/
ವಿಡಿಯೋ ತೋರಿಸಿ ಪರಿಚಯ ಮಾಡುವೆ
ಬೇಸರ ಪಡದಿರಿ ಮನದೊಳಗೆ//
ಇದುವೇ ನೋಡಿರಿ ಕಾರಿನ ಪಾರ್ಕಿಗೆ
ಈಕಡೆ ಇರುವುದು ಮುಂಜಗಲಿ/
ಹಲಸಿನ ಬಾಗಿಲು ಕಿಟಕಿಗೆ ಕಬ್ಬಿಣ
ಪುಸ್ತಕ ರ್ಯಾಕಿಗೆ ಅಕೇಶಿಯ//
ಸೋಫಾ ಸೆಟ್ಟಿದು ದಿವಾನ ಚೇರದು
ಅತಿಥೀ ಕೋಣೆಯು ಈಜಾಗ/
ಮಂಗನ ಕಾಟದ ಸವಾಸ ಬೇಡಾ
ಸಿಮೇಂಟು ಟಾರ್ಸಿ ಮೇಲ್ಬಾಗ//
ಅಡಿಗೆಯ ಮನೆಯಿದು ಮಕ್ಕಳ ರೂಮದು
ದೇವರಿಗಾಗಿಯೆ ಆಕೋಣೆ/
ದಕ್ಷಿಣ ದಿಕ್ಕಿಗೆ ಮಾಸ್ಟರ್ ಕೋಣೆಯು
ಈ ಕಡೆ ನೋಡಿರಿ ಪ್ಯಾಸೇಜು//
ಕಾಪರ್ ಹಂಡೆಯು ಮೇಲ್ಗಡೆ ಗೀಜರು
ಕಲ್ಲಿನ ಬಾವಿಯು ಹೊರಗಡೆಗೆ/
ಎಲ್ಲಿಯೆ ನಿಂತರು ಸಿಗ್ನಲು ದೊರೆವುದು
ಜೀಯೋ ವಾಸ್ತು ಒಳಗಡೆಗೆ//
ಬೆವರಿನ ಹನಿಯಲಿ ಕಟ್ಟಿದ ಮನೆಯಿದು
ನಮಗೇ ಇದುವೇ ಮಂದಿರವು/
ಮುಂದಿನ ತಿಂಗಳು ಕೊರೋನ ಮುಗಿವುದು
ಬರಬೇಕು ನೀವು ಮಂದಿರಕೆ//
ಸದ್ಯಕೆ ನೀಡಿರಿ ಮನದಲಿ ಹರಸುತ
ನಮ್ಮಯ ಗೃಹಕೆ ಶುಭಾಶಯ/
ಬಿಡದೇ ತುಂಬಲಿ ಸಂತಸ ಮನೆಯಲಿ
ಹರಡಲಿ ನಿಮ್ಮಯ ಸದಾಶಯ//
******
ಸ್ನೇಹಿತರೊಬ್ಬರ ಗೃಹಪ್ರವೇಶದ ಆಹ್ವಾನಕ್ಕೆ ಕವನದ ರೂಪ ನೀಡಿದವರು-
-ಅರವಿಂದ ಸಿಗದಾಳ್, ಮೇಲುಕೊಪ್ಪ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ