ಬೆಂಗಳೂರು: ಗೃಹರಕ್ಷಕದಳ ಮತ್ತು ಪೌರರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಹಾಗೂ ರಾಜ್ಯ ವಿಪತ್ತು ಸ್ವಂದನಾ ಪಡೆಯ 2015 ರಿಂದ 2020 ರವರೆಗಿನ ಒಟ್ಟು 243 ಅಧಿಕಾರಿ/ ಸಿಬ್ಬಂದಿಗಳಿಗೆ ಮಂಗಳವಾರ (ಜು.13) ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಗೃಹರಕ್ಷಕ ಹಾಗೂ ಪೌರರಕ್ಷಣಾ ಇಲಾಖೆಯ 2015-2020 ರ ಅವಧಿಯಲ್ಲಿ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆಯಾಗಿರುವ ಒಟ್ಟು 6 ಅಧಿಕಾರಿ ಹಾಗೂ ಸಿಬ್ಬಂದಿಗೆ ಬಿ.ಎಸ್. ಯಡಿಯೂರಪ್ಪ ಪ್ರದಾನ ಮಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು (2019), ಬೆಳ್ಳಾರೆ ಘಟಕದ ಗೃಹರಕ್ಷಕ ಹೂವಪ್ಪ ಗೌಡ (2018), ಬೆಳ್ತಂಗಡಿ ಘಟಕದ ಸೆಕ್ಷನ್ ಲೀಡರ್ ಆದ ಅಪ್ಪು (2019) ಉಳ್ಳಾಲ ಘಟಕದ ಪ್ರಭಾರ ಘಟಕಾಧಿಕಾರಿ ಭಾಸ್ಕರ್ (2020) ಹಾಗೂ ಉಡುಪಿ ಜಿಲ್ಲೆಯ ಸಮಾದೇಷ್ಟರಾದ ಡಾ|| ಪ್ರಶಾಂತ್ ಶೆಟ್ಟಿ (2015), ಲಕ್ಷ್ಮೀನಾರಾಯಣ ರಾವ್, ಘಟಕಾಧಿಕಾರಿ, ಕಾಪು ಘಟಕ (2018) ಚಿನ್ನದ ಪದಕ ಸ್ವೀಕರಿಸಿದರು.
ಸಮಾರಂಭದಲ್ಲಿ ಗೃಹಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ್ ಬೊಮ್ಮಾಯಿ, ಗೃಹ ಇಲಾಖಾ ಕಾರ್ಯದರ್ಶಿ ಡಾ|| ರಜನೀಶ್ ಗೋಯಲ್, ಗೃಹ ಕಾರ್ಯದರ್ಶಿ ಮಾಲಿನಿ ಕೃಷ್ಣಮೂರ್ತಿ ಐಪಿಎಸ್., ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಐಪಿಎಸ್., ಡಾ|| ಅಮರ್ ಕುಮಾರ್ ಪಾಂಡೆ, ಐಪಿಎಸ್., ಪೊಲೀಸ್ ಮಹಾನಿರ್ದೇಶಕರು ಮಹಾ ಸಮಾದೇಷ್ಟರು, ಗೃಹರಕ್ಷಕ ದಳ ಮತ್ತು ಪೌರರಕ್ಷಣೆ ಮಹಾನಿರ್ದೇಶಕರು ಹಾಗೂ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳು ಹಾಗೂ ಮಹಾನಿರ್ದೇಶಕರು ಎನ್‍ಡಿಆರ್‌ಎಫ್, ಕರ್ನಾಟಕ ರಾಜ್ಯ ಹಾಗೂ ಇವರು ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ