ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದ್ದು, ಇಂದು ಸಂಜೆ 6 ಗಂಟಗೆ ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ 43 ಮಂದಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಮಂತ್ರಿಗಳಾದವರು ಯಾರ್ಯಾರು?
ಸರ್ಬಾನಂದ ಸೊನೊವಾಲ್: ಅಸ್ಸಾಂನ ಮಾಜಿ ಮುಖ್ಯಮಂತ್ರಿ. ಇದೀಗ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆ.
ಡಾ. ವೀರೇಂದ್ರ ಕುಮಾರ್:
ಜ್ಯೋತಿರಾದಿತ್ಯ ಸಿಂಧಿಯಾ: ಬಿಜೆಪಿ ಸಂಸದ, ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕಾರ. ಕಾಂಗ್ರೆಸ್‌ನ ಮಾಜಿ ನಾಯಕರಾಗಿರುವ ಇವರು ಮಧ್ಯಪ್ರದೇಶದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ನೆರವಾಗಿದ್ದರು.
ರಾಮಚಂದ್ರ ಪ್ರಸಾದ್ ಸಿಂಗ್: ಜೆಡಿ(ಯು) ಸಂಸದ. ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕಾರ. ಇವರು ಬಿಹಾರದಿಂದ ಆಯ್ಕೆಯಾದ ರಾಜ್ಯಸಭಾ ಸದಸ್ಯರು. ನಿವೃತ್ತ ಐಎಎಸ್ ಅಧಿಕಾರಿಯಾಗಿ (1984ನೇ ಬ್ಯಾಚ್). ವಿವಿಧ ಹುದ್ದೆಗಳಲ್ಲಿ 25 ವರ್ಷ ಸೇವೆ ಸಲ್ಲಿಸಿದ್ದರು.
ಅಶ್ವಿನಿ ವೈಷ್ಣವ್: ಮಾಜಿ ಐಎಎಸ್ ಅಧಿಕಾರಿ. (1984ರ ಬ್ಯಾಚ್). 15 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಣೆ. ಮೂಲ ಸೌಕರ್ಯ ಅಭಿವೃದ್ಧಿಯಲ್ಲಿ ಪಿಪಿಪಿ ಮಾದರಿಯನ್ನು ಜಾರಿಗೆ ತರಲು ಬಹಳಷ್ಟು ಕೆಲಸ ಮಾಡಿದವರು.
ಪಶುಪತಿ ಕುಮಾರ್ ಪಾರಸ್: ಎಲ್‌ಜೆಪಿ ನಾಯಕ
ಕಿರಣ್ ರೆಜಿಜು:ಯುವಜ ವ್ಯವಹಾರ ಮತ್ತು ಕ್ರೀಡಾ ಖಾತೆಯ ಸಹಾಯಕ ಸಚಿವರಾಗಿದ್ದ ಇವರು ಇದೀಗ ಸ್ವತಂತ್ರ ನಿರ್ವಹಣೆಯ ಸಂಪುಟ ದರ್ಜೆ ಸಚಿವರಾಗಿ ಬಡ್ತಿ.
ಆರ್.ಕೆ ಸಿಂಗ್: ವಿದ್ಯುತ್ ಖಾತೆಯ (ಸ್ವತಂತ್ರ ನಿರ್ವಹಣೆ) ಸಚಿವರಾಗಿದ್ದ ಇವರಿಗೆ ನವೀನ ಮತ್ತು ಪುನರ್ನವೀಕರಿಸಬಹುದಾದ ಇಂಧನ ಖಾತೆಯ ಸ್ವತಂತ್ರ ನಿರ್ವಹಣೆ ಸಚಿವರಾಗಿ ಬಡ್ತಿ.
ಹರ್‌ದೀಪ್ ಸಿಂಗ್ ಪುರಿ: ಕ್ಯಾಬಿನೆಟ್ ಸಚಿವರಾಗಿ ಪ್ರಮಾಣವಚನ ಸ್ವೀಕಾರ. ವಿಮಾನಯಾನ ಖಾತೆಯ ಸಹಾಐಕ ಸಚಿವರಾಗಿದ್ದ ಇವರಿಗೂ ನೂತನ ಸಫುಟದಲ್ಲಿ ವಸತಿ ಮತ್ತು ನಗರಾಡಳಿತ ವ್ಯವಹಾರಗಳ ರಾಜ್ಯ ಸಚಿವರಾಗಿ ಬಡ್ತಿ.
ಮನ್ಸುಖ್ ಮಾಂಡವೀಯ: ಬಂದರು, ಹಡಗು ಮತ್ತು ಜಲಸಾರಿಗೆ ಖಾತೆಯ ರಾಜ್ಯ ಸಚಿವರಾಗಿದ್ದ ಇವರಿಗೆ ನೂತನ ಸಂಪುಟದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವರಾಗಿ ಸ್ವತಂತ್ರ ನಿರ್ವಹಣೆಯ ಅಧಿಕಾರ.
ಭೂಪೀಂದರ್ ಯಾದವ್: ರಾಜಸ್ಥಾನದಿಂದ ಎರಡನೇ ಬಾರಿಗೆ ಆಯ್ಕೆಯಾದ ರಾಜ್ಯಸಭಾ ಸದಸ್ಯರು.
ಪರ್ಶೋತ್ತಮ್ ರುಪಾಲಾ: ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ. MoS ದರ್ಜೆಯಿಂದ ಬಡ್ತಿ ಇದೀಗ ಕೃಷಿ ಖಾತೆಯ ಉಸ್ತುವಾರಿ (MoS)
ಜಿ. ಕಿಶನ್ ರೆಡ್ಡಿ: ತೆಲಂಗಾಣದ ನಾಯಕ. ಪ್ರಸ್ತುತ ಗೃಹ ಖಾತೆಯ ಸಹಾಯಕ ಸಚಿವರಾಗಿರುವ ಇವರಿಗೆ ನೂತನ ಸಂಪುಟದಲ್ಲಿ ಕ್ಯಾಭಿನೆಟ್ ದರ್ಜೆಗೆ ಬಡ್ತಿ.
ಅನುರಾಗ್ ಠಾಕೂರ್: ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆಯ ಸಹಾಯಕ ಸಚಿವರಾಗಿದ್ದ ಇವರಿಗೆ ಇದೀಗ ಕ್ಯಾಬಿನೆಟ್ ದರ್ಜೆಗೆ ಬಡ್ತಿ.
ಪಂಕಜ್ ಚೌಧರಿ: ಉತ್ತರ ಪ್ರದೇಶದ ಮಹಾರಾಜಗಂಜ್‌ನ ಬಿಜೆಪಿ ಸಂಸದ. 6ನೇ ಬಾರಿಗೆ ಸಂಸದರಾಗಿ ಆಯ್ಕೆಯಾದವರು. ಮುಂದಿನ ವರ್ಷ ಉ.ಪ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
ಅನುಪ್ರಿಯಾ ಪಟೇಲ್: ಅಪ್ನಾದಲ್ ಸಂಸದೆ. ಉತ್ತರ ಪ್ರದೇಶದ ಮಿರ್ಜಾಪುರದಿಂದ ಆಯ್ಕೆಯಾದ ಸಂಸದೆ. ಆರೋಗ್ಯ ಖಾತೆಯ ಸಹಾಯಕ ಸಚಿವೆಯಾಗಿ ಅನುಭವ ಹೊಂದಿದವರು.
ಸತ್ಯಪಾಲ್ ಸಿಂಗ್ ಬಾಘೇಲ್: ಆಗ್ರಾದ ಸಂಸದ. 5ನೇ ಬಾರಿಗೆ ಆಯ್ಕೆಯಾದವರು. ಉ.ಪ್ರ ಸರಕಾರದಲ್ಲಿ ಪಶುಪಾಲನೆ, ಮೀನುಗಾರಿಕೆ ಮತ್ತು ಸಣ್ಣ ನೀರಾವರಿ ಖಾತೆಯ ಸಚಿವರಾಗಿ ಕರ್ತವ್ಯ ನಿರ್ವಹಣೆಯ ಅನುಭವ.
ರಾಜೀವ್ ಚಂದ್ರಶೇಖರ್: ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದವರು. ಮೂರನೇ ಬಾರಿಗೆ ಸಂಸದರಾದವರು. ಯಶಸ್ವಿ ಉದ್ಯಮಿಯಾಗಿ ಹೆಸರು ಮಾಡಿದವರು.
ಶೋಭಾ ಕರಂದ್ಲಾಜೆ: ಕರ್ನಾಟಕದ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ 2ನೇ ಬಾರಿಗೆ ಸಂಸದೆಯಾಗಿ ಆಯ್ಕೆಯಾದವರು. ಕರ್ನಾಟಕದ ಸರಕಾರದಲ್ಲಿ ಸಂಪುಟ ಸಚಿವರಾಗಿ ವಿವಿಧ ಖಾತೆಗಳನ್ನು ನಿರ್ವಹಿಸಿದ ಅನುಭವ.
ನಾರಾಯಣ ರಾಣೆ: ಶಿವಸೇನೆಯ ಶಾಖಾ ಪ್ರಮುಖ್ ಹುದ್ದೆಯಿಂದ ಕೇಂದ್ರ ಸಚಿವರಾಗುವ ವರೆಗೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಣೆ.
ಭಾನುಪ್ರತಾಪ್ ಸಿಂಗ್ ವರ್ಮಾ: ಉತ್ತರ ಪ್ರದೇಶದ ಜಲೌನ್ ನಿಂದ ಆಯ್ಕೆಯಾದ ಸಂಸದ. 3 ದಶಕಗಳಿಗೂ ಅಧಿಕ ರಾಜಕೀಯ ಅನುಭವ. ಹಿಂದೆ ಯಾವತ್ತೂ ಸಚಿವರಾಗಿರಲಿಲ್ಲ.
ದರ್ಶನಾ ವಿಕ್ರಮ್ ಜರ್ದೋಶ್: ಗುಜರಾತ್‌ನ ಸೂರತ್‌ನಿಂದ ಆಯ್ಕೆಯಾದ ಸಂಸದೆ. 3ನೇ ಬಾರಿಗೆ ಸಂಸದೆಯಾಗಿ ಕಾರ್ಯ ನಿರ್ವಹಣೆ. ಸಾಂಸ್ಕೃತಿಕ ಸಂಘಟನೆ 'ಸಂಸ್ಕೃತಿ'ಯ ನಿರ್ದೇಶಕರು.
ಮೀನಾಕ್ಷಿ ಲೇಖಿ: ದಿಲ್ಲಿಯ ಸಂಸದೆ. ಸುಪ್ರೀಂ ಕೋರ್ಟಿನ ವಕೀಲರು. ಹೊಸದಿಲ್ಲಿ ಮುನಿಸಿಪಲ್ ಕಾರ್ಪೊರೇಶನ್‌ನ ಸದಸ್ಯೆಯಾಗಿದ್ದವರು.
ಅನ್ನಪೂರ್ಣಾ ದೇವಿ: ಜಾರ್ಖಂಡ್ ಕೊಡೆರ್ಮಾದಿಂದ ಸಂಸದೆ. ಇದು ಅವರ ಮೊದಲ ಅವಧಿ. ಜಾರ್ಖಂಡ್ ಸರಕಾರದಲ್ಲಿ ನೀರಾವರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ನೋಂದಣಿ ಖಾತೆಗಳ ಸಚಿವೆಯಾಗಿ ಅನುಭವ.
ಎ. ನಾರಾಯಣ ಸ್ವಾಮಿ: ಕರ್ನಾಟಕದ ಚಿತ್ರದುರ್ಗದಿಂದ ಲೋಕಸಭಾ ಸಂಸದ. ಮೊದಲ ಅವಧಿ.
ಕೌಶಲ್ ಕಿಶೋರ್: ಉತ್ತರ ಪ್ರದೇಶದ ಮೋಹನ್‌ಲಾಲ್ ಗಂಜ್‌ನಿಂದ ಸಂಸದ. ಉಪ್ರ ಸರಕಾರದಲ್ಲಿ ಸಹಾಯಕ ಸಚಿವರಾಗಿ ಅನುಭವ.
ಅಜಯ್ ಭಟ್: ಉತ್ತರಾಖಂಡದ ನೈನಿತಾಲ್- ಉಧಂಸಿಂಗ್ ನಗರದ ಸಂಸದ. ಮೊದಲ ಅವಧಿ. ಉತ್ತರಾಖಂಡ ಸರಕಾರದಲ್ಲಿ ವಿವಿಧ ಖಾತೆಗಳ ನಿರ್ವಹಣೆ ಅನುಭವ.
ಬಿ.ಎಲ್ ವರ್ಮಾ: ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಮೊದಲ ಬಾರಿ ಆಯ್ಕೆಯಾದವರು.
ಅಜಯ್ ಕುಮಾರ್: ಉತ್ತರ ಪ್ರದೇಶದ ಖೇರಿ ಲೋಕಸಭಾ ಸಂಸದ. 2ನೇ ಬಾರಿಗೆ ಆಯ್ಕೆಯಾದವರು.
ಚೌಹಾಣ್ ದೇವುಸಿನ್ಹ: ಗುಜರಾತ್‌ನ ಖೇಡಾದ ಲೋಕಸಭಾ ಸಂಸದ. 2ನೇ ಅವಧಿಗೆ ಆಯ್ಕೆಯಾದವರು. ಪೂರ್ಣಪ್ರಮಾಣದ ರಾಜಕೀಯಕ್ಕೆ ಬರುವ ಮುನ್ನ ಆಕಾಶವಾಣಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡಿದವರು.
ಭಗವಂತ್ ಖೂಬಾ: ಕರ್ನಾಟಕದ ಬೀದರ್‌ನಿಂದ 2ನೇ ಬಾರಿಗೆ ಆಯ್ಕೆಯಾದ ಲೋಕಸಭಾ ಸಂಸದ.
ಕಪಿಲ್ ಮೊರೇಶ್ವರ್: ಮಹಾರಾಷ್ಟ್ರ ಭಿವಂಡಿ ಲೋಕಸಭಾ ಸಂಸದ. 2ನೇ ಅವಧಿಗೆ ಆಯ್ಕೆಯಾದವರು. ತಳಹಂತದ ರಾಜಕಾರಣಿ. 3 ದಶಕಗಳಿಗೂ ಅಧಿಕ ಕಾಲ ವಿವಿಧ ಹುದ್ದೆಗಳಲ್ಲಿ ಅನುಭವ.
ಕುಮಾರಿ ಪ್ರತಿಮಾ ಭೌಮಿಕ್: ಪಶ್ಚಿಮ ತ್ರಿಪುರಾದಿಂದ ಮೊದಲ ಬಾರಿಗೆ ಆಯ್ಕೆಯಾದ ಲೋಕಸಭಾ ಸಂಸದೆ.
ಸುಭಾಸ್ ಸರ್ಕಾರ್: ಬಂಗಾಳದ ಬಂಕುರಾದಿಂದ ಆಯ್ಕೆಯಾದ ಸಂಸದ. ಬಂಗಾಳದಲ್ಲಿ ಬಿಜೆಪಿ ಬಹುದೊಡ್ಡ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಅವರಿಗೆ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನದ ಉಡುಗೊರೆ.
ಭಾಗವತ್ ಕಿಶನ್‌ರಾವ್ ಕರಾಡ್: ಮಹಾರಾಷ್ಟ್ರದಿಂದ ಆಯ್ಕೆಯಾದ ರಾಜ್ಯಸಭೆ ಸಂಸದ. (ಮೊದಲ ಬಾರಿಗೆ). ಔರಂಗಾಬಾದ್‌ನಲ್ಲಿ ಡಾ. ಕರಾಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ನಡೆಸುತ್ತಿದ್ದಾರೆ.
ರಾಜಕುಮಾರ್ ರಂಜನ್ ಸಿಂಗ್: ಮಣಿಪುರದ ಲೋಕಸಭಾ ಸಂಸದ. ಮೊದಲ ಅವಧಿಗೆ. ಭೂಗೋಳಶಾಸ್ತ್ರದ ಪ್ರಾಧ್ಯಾಪಕರಾಗಿ 4 ದಶಕಗಳಿಗೂ ಅಧಿಕ ಅನುಭವ.
ಭಾರತಿ ಪ್ರವೀಣ್ ಪವಾರ್: ಮಹಾರಾಷ್ಟ್ರದ ದಿಂಡೋರಿಯ ಸಂಸದೆ. ಮೊದಲ ಅವಧಿಗೆ ಆಯ್ಕೆ. ಎಂಬಿಬಿಬೆಸ್ ಪದವೀಧರೆ. ನಾಸಿಕ್ ಜಿಲ್ಲಾ ಪರಿಷತ್ ಸದಸ್ಯೆಯಾಗಿ ಅನುಭವ.
ಬಿಶ್ವೆಶ್ವರ್ ತುಡು: ಒಡಿಶಾದ ಮಯೂರ್‌ಭಂಜ್‌ನ ಸಂಸದ. ಮೊದಲ ಅವಧಿಗೆ ಆಯ್ಕೆ. ರಾಜಕೀಯಕ್ಕೆ ಬರುವ ಮುನ್ನ ಒಡಿಶಾದ ಜಲಸಂಪನ್ಮೂಲ ಇಲಾಖೆಯ ಎಂಜಿನಿಯರ್ ಆಗಿ ಕಾರ್ಯನಿರ್ವಹಣೆ.
ಶಂತನು ಠಾಕೂರ್: ಬಂಗಾಳದ ಮತುವಾ ಸಮುದಾಯದ ನಾಯಕ. ಬೊಂಗಾಂವ್‌ನ ಸಂಸದ, ಮೊದಲ ಅವಧಿಗೆ.
ಮುಂಜಪಾರಾ ಮಹೇಂದ್ರಭಾಯ್: ಗುಜರಾತ್‌ನ ಸುರೇಂದ್ರನಗರದ ಸಂಸದ. ಗುಜರಾತ್‌ನ ಹೆಸರಾಂತ ಹೃದ್ರೋಗ ತಜ್ಞರಾಗಿ 3 ದಶಕಗಳಿಗೂ ಅಧಿಕ ಕಾಲ ಕಾರ್ಯನಿರ್ವಹಣೆಯ ಅನುಭವ.
ಜಾನ್ ಬರ್ಲಾ: ಪಶ್ಚಿಮ ಬಂಗಾಳದ ಅಲಿಪುರ್‌ದೌಸ್ನ ಸಂಸದ. ಮೊದಲ ಅವಧಿಗೆ ಆಯ್ಕೆ. ಉತ್ತರ ಬಂಗಾಳ ಮತ್ತು ಅಸ್ಸಾಂನ ಚಹಾ ತೋಟದ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಿದವರು.
ಎಲ್. ಮುರುಗನ್: ಮದ್ರಾಸ್ ಹೈಕೋರ್ಟಿನ ವಕೀಲರಾಗಿ 15 ವರ್ಷಗಳ ಕಾಲ ಕೆಲಸ ಮಾಡಿದವರು. 2017ರಿಂದ 2020ರ ವರೆಗೆ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಚೇರ್ಮನ್ ಆಗಿದ್ದವರು.
ನಿಶಿತ್ ಪ್ರಮಾಣಿಕ್: ಪಶ್ಚಿಮ ಬಂಗಾಳದ ಕೂಚ್ ಬಿಹಾರ್‌ನ ಸಂಸದ. ಮೊದಲ ಅವಧಿಗೆ ಆಯ್ಕೆ. ಪ್ರಾಥಮಿಕ ಶಾಲೆಯ ಸಹಾಯಕ ಅಧ್ಯಾಪಕರಾಗಿ ಅನುಭವ.
ಒಟ್ಟು 43 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರ ಪೈಕಿ 7 ಮಂದಿ ಈಗಾಗಲೇ ಸಚಿವರಾಗಿದ್ದವರು ಖಾತೆಗಳ ಬದಲಾವಣೆ ಮತ್ತು ಬಡ್ತಿ ಪಡೆದವರು. 36 ಮಂದಿ ಹೊಸ ಮುಖಗಳು. ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಇನ್ನು ಬಾಕಿಯಿದೆ.
ಇದಕ್ಕೆ ಮುನ್ನ ಡಿವಿ ಸದಾನಂದ ಗೌಡ, ರವಿಶಂಕರ್ ಪ್ರಸಾದ್, ಪ್ರಕಾಶ್ ಜಾವಡೇಕರ್, ರಮೇಶ್ ಪೋಖ್ರಿಯಾಲ್ ನಿಶಾಂಕ್, ಸಂಜಯ್ ಧೋತ್ರೆ, ಡಾ. ಹರ್ಷವರ್ಧನ್, ಸಂತೋಷ್ ಗಂಗ್ವಾರ್, ದೇಬಶ್ರೀ ಚೌಧರಿ, ಬಾಬುಲ್ ಸುಪ್ರಿಯೊ, ಪ್ರತಾಪ್ ಸಾರಂಗಿ ಸೇರಿದಂತೆ 12 ಮಂದಿ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
Key words: Union Cabinet Expansion, PM Modi cabinet Expansion, Central Cabinet expansion, ಕೇಂದ್ರ ಸಂಪುಟ ವಿಸ್ತರಣೆ, ಮೋದಿ ಸಂಪುಟ ವಿಸ್ತರಣೆ,
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ