`ಆಳ್ವಾಸ್ ನಿರಾಮಯ' ಮಲ್ಟಿಸ್ಪೆಷಾಲಿಟಿ ಆಯುಷ್ ಆಸ್ಪತ್ರೆ ಉದ್ಘಾಟನೆ

Upayuktha
0

ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಭಾಗವಾಗಿ `ಆಳ್ವಾಸ್ ನಿರಾಮಯ' ಮಲ್ಟಿಸ್ಪೆಷಾಲಿಟಿ ಆಯುಷ್ ಆಸ್ಪತ್ರೆಯ ಹೊರರೋಗಿ ಹಾಗೂ ಒಳರೋಗಿ ವಿಭಾಗವನ್ನು ವಿದ್ಯಾಗಿರಿಯಲ್ಲಿ ಇಂದು ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಉದ್ಘಾಟಿಸಿದರು.


ಆಳ್ವಾಸ್ ನಿರಾಮಯ ಮಲ್ಟಿಸ್ಪೆಷಾಲಿಟಿ ಆಯುಷ್ ಆಸ್ಪತ್ರೆಯು ಸುಸಜ್ಜಿತವಾದ ಹೊರರೋಗಿ ಹಾಗೂ ಒಳರೋಗಿ ವಿಭಾಗವನ್ನು ಹೊಂದಿದ್ದು, ಒಳರೋಗಿಗಳಿಗೆ ಸಕಲ ಸೌಲಭ್ಯಗಳಿರುವ ಸ್ಪೆಷಲ್, ಡಿಲಕ್ಸ್ ಹಾಗೂ ಸೂಟ್ ರೂಮ್ ಲಭ್ಯವಿರುತ್ತದೆ. ರೋಗಿಗಳಿಗೆ ಆಯುರ್ವೇದ, ನ್ಯಾಚುರೋಪತಿ ಹಾಗೂ ಫಿಸಿಯೋತೆರಪಿ ಸೇವೆಗಳು ಆರಂಭಗೊಂಡಿದೆ.  


ಕಾರ್ಯಕ್ರಮದಲ್ಲಿ ಸಂಸ್ಥೆಯ ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ. ವಿನಯ್ ಆಳ್ವ, ಡಾ. ಹನಾ ಶೆಟ್ಟಿ, ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಜಿತ್ ಎಂ, `ಆಳ್ವಾಸ್ ನಿರಾಮಯ' ಮಲ್ಟಿಸ್ಪೆಷಾಲಿಟಿ ಆಯುಷ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾಗಿರುವ ಡಾ. ಸುರೇಖಾ ಪೈ, ವೈದ್ಯಾಧಿಕಾರಿ ಡಾ. ಪ್ರಜ್ಞಾ ಉಪಸ್ಥಿತರಿದ್ದರು.


ಆಳ್ವಾಸ್ ಹೆಲ್ತ್ ಸೆಂಟರ್‍ನ ಜನರಲ್ ಸರ್ಜನ್ ಡಾ ಡಾ ಹರೀಶ ನಾಯಕ್, ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ ಕುರಿಯನ್, ನ್ಯಾಚುರೋಪತಿ ಕಾಲೇಜಿನ ಪ್ರಾಂಶುಪಾಲೆ ಡಾ. ವನಿತಾ ಶೆಟ್ಟಿ, ಹೋಮಿಯೋಪತಿ ಕಾಲೇಜಿನ ಪ್ರಾಂಶುಪಾಲ ಡಾ. ಪಿಂಟೋ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಯತಿಕುಮಾರ್ ಗೌಡ, ಫಿಸಿಯೋತೆರಪಿ ಕಾಲೇಜಿನ ಪ್ರಾಂಶುಪಾಲೆ ಕ್ಷಮ ಸುಶೀಲ್ ಶೆಟ್ಟಿ, ಮೆಡಿಕಲ್ ಲ್ಯಾಬೋರೇಟರಿ ಕಾಲೇಜಿನ ಪ್ರಾಂಶುಪಾಲ ಶಂಕರ್ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top