ಬಾಳೆಕಾಯಿ ಬೆಲೆ ಕುಸಿತದಿಂದ ಕಂಗೆಟ್ಟ ಕೋಟ್ಟಯಂ ಜಿಲ್ಲೆಯ ಪೆರಿಂಗುಲಂನ ಕೃಷಿಕರು ’ಬನಾನಾ ಬಡ್ಸ್’ ವೇದಿಕೆ ರೂಪಿಸಿಕೊಂಡಿದ್ದಾರೆ. ಇದು ಹನ್ನೆರಡು ಸದಸ್ಯ ಕುಟುಂಬಗಳನ್ನು ಹೊಂದಿದೆ. ಇವರೆಲ್ಲಾ ಒಗ್ಗೂಡಿ ನೇಂದ್ರ ಬಾಳೆಕಾಯಿ ಹುಡಿ (ಬಾಕಾಹು) ಮಾಡಲು ಹೊರಟಿದ್ದಾರೆ.
ನೆರೆಯವರ ಡ್ರೈಯರಿನಲ್ಲಿ ಒಣಗಿಸಿ, ಅಲ್ಲೇ ಹುಡಿ ಮಾಡಿಸಿದಾಗ ಪ್ರತಿ ಮನೆಗೆ ಒಂದು ಕಿಲೋಕ್ಕಿಂತ ಸ್ವಲ್ಪ ಹೆಚ್ಚು ಬಾಕಾಹು ಸಿಕ್ಕಿದೆ. ಇಂದು ನಾಳೆ ಎರಡೂ ದಿನ ಈ ಮನೆಗಳಲ್ಲಿ ಬಾಕಾಹು ಪಾಕಪ್ರಯೋಗಗಳ ಕಲರವ.
ನಾಳೆ ಮಧ್ಯಾಹ್ನ ನಂತರ ಎರಡು ಗಂಟೆಗೆ ಸಭೆ. ಅದರಲ್ಲಿ ಎಲ್ಲ ಮನೆಗಳ ಹೊಸಪಾಕಗಳ ಪ್ರದರ್ಶನ. ರುಚಿ ನೋಡಿ ವಿಮರ್ಶೆ. ಮುಂದೆ ನೇಂದ್ರ ಬಾಕಾಹು ತಯಾರಿಯ ವಿಚಾರವನ್ನು ಹೇಗೆ ಮುಂದೆ ಒಯ್ಯುವುದು ಎಂಬ ಬಗ್ಗೆ ಸಮಾಲೋಚನೆ.
ನೋಡಿ ವಿಪರ್ಯಾಸ.
ತಾಜಾ ನೇಂದ್ರ ಬಾಳೆಕಾಯಿ- ಹಣ್ಣುಗಳಿಂದ ಅದೆಷ್ಟೇ ಪಾಕ ಮಾಡಿದರೂ 'ಫ್ಲೋರ್ ರೂಟಿನ’ (ಹುಡಿಯ ಮುಖಾಂತರದ) ಈ ಥರದ ಅಡುಗೆ ಇವರೆಲ್ಲರಿಗೂ ತೀರಾ ಹೊಸತು! ಅದಕ್ಕೇ ಇಷ್ಟೊಂದು ಸಂಭ್ರಮ.
ಕಾಯೋಣ ನಾವೂ ಸೋಮವಾರ- ನೇಂದ್ರನ ನಾಡಿನ ನೇಂದ್ರ ಬಾಕಾಹುವಿನ 'ಬ್ರೇಕಿಂಗ್ ನ್ಯೂಸ್’ಗಾಗಿ.
- ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು.
-Key Words: Banana Flour, Banana Powder, Nendra Banana, Kerala, Bakahu, ಬಾಕಾಹು, ಬಾಳೆಕಾಯಿ ಹುಡಿ, ನೇಂದ್ರ ಬಾಳೆ, ಬಾಕಾಹು ಆಂದೋಲನ,
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ