ಜಿಜ್ಞಾಸೆ: ಮಂತ್ರಿಮಂಡಲ ರಚನೆ, ಪುನಾರಚನೆ, ವಿಸ್ತರಣೆ- ಯಾವುದು ಸರಿ?

Upayuktha
0


 

"ಮಂತ್ರಿ ಮಂಡಲಕ್ಕೆ" ಸಂಬಂಧಿಸಿ ಇತ್ತೀಚಿಗೆ ಸುದ್ದಿವಾಹಿನಿಗಳು ಬಳಸುತ್ತಿರುವ ಮೂರು ಪದ ಪ್ರಯೇೂಗಗಳು  ಭಾರತೀಯ ಸಂವಿಧಾನದ ಪುಟಗಳನ್ನು ಮತ್ತೆ ತಿರುಗಿಸುವಂತೆ ಮಾಡಿದೆ. ಇತ್ತೀಚಿಗೆ ಕನ್ನಡ ಸುದ್ದಿವಾಹಿನಿಗಳಲ್ಲಿ ಬಸವರಾಜ ಬೊಮ್ಮಾಯಿಯವರು ನೂತನ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ಅನಂತರದಲ್ಲಿ ಮಂತ್ರಿ ಮಂಡಲಕ್ಕೆ ಸಂಬಂಧಿಸಿ ಬಳಸುತ್ತಿದ್ದ ಪದ ಪ್ರಯೇೂಗ ಹೇಗಿದೆ ಅಂದರೆ;

1. ನೂತನ ಮುಖ್ಯಮಂತ್ರಿಗಳು ಮಂತ್ರಿಮಂಡಲ ರಚನೆ ಮಾಡಬೇಕು.

2. ನೂತನ ಮುಖ್ಯಮಂತ್ರಿಗಳು ಮಂತ್ರಿಮಂಡಲ ವಿಸ್ತರಣೆ ಮಾಡಬೇಕು.

3. ನೂತನ ಮುಖ್ಯಮಂತ್ರಿಗಳು ಮಂತ್ರಿಮಂಡಲ ಪುನರ್ ರಚನೆ ಮಾಡಬೇಕು.


ಭಾರತೀಯ ಸಂವಿಧಾನ ಓದಿದ ಒಬ್ಬ ಸಾಮಾನ್ಯ ವಿದ್ಯಾರ್ಥಿಯಾಗಿ ನನ್ನ ಪ್ರಶ್ನೆ ಅಂದರೆ ಈ ಮೂರು ಪದ ಪ್ರಯೇೂಗಗಳಲ್ಲಿ ಯಾವುದು ತಾಂತ್ರಿಕವಾಗಿ ಸರಿ ಅನ್ನುವುದು.


ಕೆಲವು ವಾಹಿನಿ ವರದಿಗಾರರು ಸುದ್ದಿ ವಾಚಕರನ್ನು ಮಾತನಾಡಿಸಿದಾಗ ಅವರು ನೀಡಿದ ಉತ್ತರ. ಮಂತ್ರಿ ಮಂಡಲ ವಿಸ್ತರಣೆಯೂ ಸರಿ. ಇನ್ನೂ ಕೆಲವರು ಮಂತ್ರಿಮಂಡಲ ಪುನರ್ ರಚನೆ ಸರಿ. ಆದರೆ ನನ್ನ ಪ್ರಕಾರ ಮೊದಲ ಪದ ಪ್ರಯೇೂಗ ಸರಿ. ಅನಂತರದ ಎರಡು ತಪ್ಪು.


ಪ್ರಸ್ತುತ ಸಂದರ್ಭದಲ್ಲಿ ಮೊದಲಿನ "ಮಂತ್ರಿ ಮಂಡಲ ರಚನೆಯೇ ಸರಿಯಾದ ಪ್ರಯೇೂಗ. ಇದೇ ಪದಗಳನ್ನು ಇಂಗ್ಲಿಷ್‌ನಲ್ಲಿ ಬಳಸಿದಾಗ-

1. cabinet formation

2. cabinet expansion

3. cabinet resheffling.


ಇಲ್ಲಿ ಮಂತ್ರಿಮಂಡಲ ವಿಸ್ತರಣೆಯೆ ಸರಿ ಅನ್ನುವವರ ವಾದವೆಂದರೆ- ಈಗಾಗಲೇ ಮುಖ್ಯಮಂತ್ರಿಗಳು ನೇಮಕವಾದ ಕಾರಣ ಮಂತ್ರಿಮಂಡಲ ರಚನೆಯಾದ ಹಾಗೆಯೇ. ಇನ್ನು ಏನಿದ್ದರೂ ಮಂತ್ರಿಮಂಡಲ ವಿಸ್ತರಣೆ ಮಾಡುವುದು. ಈ ವಾದ ನನಗೆ ಸ್ವಲ್ಪ ಚಿಂತನೆಗೂ ದಾರಿ ಮಾಡಿಕೊಟ್ಟಿತು.


ಸಂವಿಧಾನದ ಪುಟ ತಿರುಗಿಸಿ ನೇೂಡಿದಾಗ ಅದು ಹೇಳುವುದೆಂದರೆ, ಅನುಚ್ಛೇದ 75(1)ರಂತೆ ರಾಷ್ಟ್ರಪತಿಗಳು ಪ್ರಧಾನಮಂತ್ರಿ ನೇಮಿಸಿ ಅನಂತರ ಅವರಿಗೆ ಸರಕಾರ /ಸಚಿವ ಸಂಪುಟ ರಚನೆ ಮಾಡಲು ಅನುಮತಿ ನೀಡುವುದು. ಪ್ರಧಾನಮಂತ್ರಿಗಳು ಕೊಟ್ಟ ಸಚಿವರ ಪಟ್ಟಿಗೆ ರಾಷ್ಟ್ರಪತಿಗಳ ಮುದ್ರೆ ಅಂಕಿತ ಬಿದ್ದ ಮೇಲೆ ಆ ನೇಮಕಾತಿಗೆ ಒಪ್ಪಿಗೆ ಸಿಕ್ಕಿದೆ ಅನ್ನುವುದರ ಅರ್ಥ.


ಇತ್ತೀಚಿನ ಕರ್ನಾಟಕದ ನೂತನ ಮುಖ್ಯಮಂತ್ರಿಗಳ ನೇಮಕಾತಿ ಸಂದರ್ಭದಲ್ಲಿ ರಾಜ್ಯಪಾಲರು ಕೇವಲ ಮುಖ್ಯಮಂತ್ರಿಗಳನ್ನು ನೇಮಿಸಿದ ಕಾರಣ ಈ ಪದ ಪ್ರಯೇೂಗ ಜಿಜ್ಞಾಸೆ ಸೃಷ್ಟಿ ಮಾಡಿದೆ. ಮುಖ್ಯಮಂತ್ರಿಗಳ ಜೊತೆಗೆ ಒಂದಿಷ್ಟು ಸಚಿವರು ಅಧಿಕಾರ ಸ್ವೀಕರಿಸಿದ್ದರೆ ಎರಡನೆಯ ಪದ ಪ್ರಯೇೂಗ- ಮಂತ್ರಿ ಮಂಡಲ ವಿಸ್ತರಣೆ" ಅನ್ನುವುದು ಸರಿ. ಆದರೆ ಕೊನೆಯ ಪ್ರಯೇೂಗ- ಮಂತ್ರಿಮಂಡಲದ ಪುನರ್ ರಚನೆ ಅನ್ನುವುದು ಈ ಸಂದರ್ಭದಲ್ಲಿ ಸರಿಯಾದ ಪದ ಬಳಕೆ ಅಲ್ಲ ಅನ್ನುವುದು ಎಲ್ಲರೂ ಒಪ್ಪಿಕೊಳ್ಳಲೇಬೇಕು.


ಸಂವಿಧಾನ ಓದಿದ ತಾವುಗಳು ಕೂಡಾ ಈ ಚರ್ಚೆಯಲ್ಲಿ ಭಾಗವಹಿಸಿ ಅನ್ನುವುದು ನನ್ನ ಕೇೂರಿಕೆ.


-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top