ಶಿವಮೊಗ್ಗ: ಗೋಹತ್ಯೆ ಬಗ್ಗೆ ಮೊದಲು ನೀವು ತಿಳಿದುಕೊಳ್ಳಿ ಇಲ್ಲದಿದ್ದರೆ ಸಮರ್ಪಕವಾಗಿ ಗೋಹತ್ಯೆ ನಿಷೇಧದ ಅನುಷ್ಠಾನ ಆಗುವುದಿಲ್ಲ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರು ಅಧಿಕಾರಿಗಳ ವಿರುದ್ಧ ಶಿವಮೊಗ್ಗದಲ್ಲಿ ಗರಂ ಆದರು.
ಇಲಾಖಾ ಪ್ರಗತಿ ಪರಿಶೀಲನೆಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಅಕ್ರಮ ಕಸಾಯಿಖಾನೆ ನಡೆಯುತ್ತಿರುವುದರ ಕುರಿತು ದೂರು ಬಂದರು ಕ್ರಮ ಕೈಗೊಳ್ಳುತ್ತಿಲ್ಲವೇಕೆ. ಇಲಾಖೆಯ ಅಧಿಕಾರಿಗಳು ಸಕ್ರಿಯವಾಗಿ ಕೆಲಸ ಮಾಡದಿರುವುದಕ್ಕೆ ಸಚಿವರು ಕೆಲಸ ಮಾಡಲು ಆಗದಿದ್ದರೆ ಮನೆಗೆ ಹೋಗಿ ಎಂದು ಕಿಡಿ ಕಾರಿದರು.
ರೈತರು ಕರೆ ಮಾಡಿ ಗೋವುಗಳ ಅಕ್ರಮ ಸಾಗಣೆ ಬಗ್ಗೆ ಹೇಳುತ್ತಿದ್ದಾರೆ ನೀವು ಅಧಿಕಾರಿಗಳು ನಿದ್ದೆ ಮಾಡುತ್ತಿದ್ದೀರಿ. ನಿಮ್ಮೆಲ್ಲರನ್ನು ಕಟ್ಟಿಕೊಂಡು ಇಲಾಖೆ ಹೇಗೆ ಅಭಿವೃದ್ಧಿ ಮಾಡುವುದು ಎಂದು ಸಚಿವರು ಅಧಿಕಾರಿಗಳಿಗೆ ಪ್ರಶ್ನಿಸಿದರು.
ಗಾಂಧಿ ಜಯಂತಿಗೂ ಮೊದಲು ಶಿವಮೊಗ್ಗದಲ್ಲಿ ಗೋಶಾಲೆಗೆ ಸ್ಥಳ ಗುರುತಿಸುವ ಕಾರ್ಯ ಮುಗಿದು ಯೋಜನೆ ಅನುಷ್ಠಾನ ಆಗಲೇಬೇಕು ಎಂದು ಹೇಳಿದರು.
ಪ್ರಾಣಿ ಕಲ್ಯಾಣ ಮಂಡಳಿಯ (ಎಸ್‌ಪಿಸಿಎ) ಸಭೆಗಳನ್ನು ಪ್ರತಿ 3 ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ನಡೆಸಲೇಬೇಕು ಎಂದು ಶಿವಮೊಗ್ಗದ ಜಿಲ್ಲಾಧಿಕಾರಿ ಶಿವಕುಮಾರ್ ಅವರಿಗೆ ಸಚಿವರು ಸೂಚನೆ ನೀಡಿದರು.
ಇಲಾಖೆಯ ಎಲ್ಲ ಅಭಿವೃದ್ಧಿ ಕಾರ್ಯಗಳು ಮತ್ತು ಯೋಜನೆಗಳ ಪ್ರಚಾರವನ್ನು ಹೆಚ್ಚು ಮಾಡಿ ಎಲ್ಲ ರೈತರಿಗೆ ಪಶುಸಂಗೋಪನೆ ಇಲಾಖೆಯ ಯೋಜನೆಗಳು ತಲುಪುವಂತೆ ನೋಡಿಕೊಳ್ಳಿ ಎಂದು ಹೇಳಿದರು.
Key Words: Cattle Protection act, Prabhu Chauhan, Kanataka, Shivamogga, ಶಿವಮೊಗ್ಗ, ಗೋಹತ್ಯೆ ನಿಷೇಧ ಕಾಯ್ದೆ, ಸಚಿವ ಪ್ರಭು ಚೌಹಾಣ್
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ