ಕೇರಳದಲ್ಲಿಂದು ಅನನ್ಯ ಮೈಸೂರ್ ಪಾಕ್: 'ದೇವರ ನಾಡಿ’ನಲ್ಲಿ ಹರಿನಿರ್ಮಿತ 'ಬಾಕಾಹು' ಚಮಕ್

Upayuktha
0



ಕರಾವಳಿ ಜಿಲ್ಲೆಗಳಲ್ಲಿ 'ಬಾಕಾಹು' ಅಭಿಯಾನ ಸಾಕಷ್ಟು ಸದ್ದು ಮಾಡಲಾರಂಭಿಸಿದೆ. ಹಿರಿಯ ಅಭಿವೃದ್ಧಿ ಪತ್ರಕರ್ತ ಶ್ರೀಪಡ್ರೆ ಅವರು ಹಚ್ಚಿದ ಸಣ್ಣದೊಂದು ದೀಪವೀಗ ಪ್ರಕಾಶಮಾನವಾಗಿ ಬೆಳಗಲಾರಂಭಿಸಿದ್ದು, ಉತ್ತರಕನ್ನಡ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಅಲ್ಲಲ್ಲಿ, ಮನೆಮನೆಗಳಲ್ಲಿ ಬಾಳೆಕಾಯಿ ಹುಡಿ ತಯಾರಿಸುವ ಮತ್ತು ಅದರಿಂದ ಬಗೆಬಗೆಯ ತಿನಿಸುಗಳನ್ನು ತಯಾರಿಸುವ ಪ್ರಯೋಗ ವ್ಯಾಪಕವಾಗಿ ನಡೆಯುತ್ತಿದೆ.

ಬಾಳೆಕಾಯಿ ಹುಡಿಗೆ ದೊಡ್ಡದೊಂದು ಮಾರುಕಟ್ಟೆ ಸೃಷ್ಟಿಸುವ ಅಭಿಯಾನ ಇದಾಗಿದ್ದು, ಬಾಳೆ ಕೃಷಿಕರು ಮತ್ತು ಗೃಹೋದ್ಯಮಿಗಳಿಗೆ ಅತ್ಯುತ್ತಮ ಆದಾಯ ತಂದುಕೊಡಬಲ್ಲ ಆಂದೋಲನವಾಗಿ ಬೆಳೆಯುತ್ತಿದೆ.

ಈ ಸರಣಿಯ ಮುಂದಿನ ಕೊಂಡಿ ಇಲ್ಲಿದೆ ನೋಡಿ. ಕಾಸರಗೋಡಿನ ಕೃಷಿಕರೊಬ್ಬರ ಅನುಭವ. ಮುಂದೆ ಓದಿ:  


*******

ಕಾಸರಗೋಡು ಜಿಲ್ಲೆಯ ಕೃಷಿಕ ಸಜಂಗದ್ದೆ ಶ್ರೀಹರಿ ಭಟ್- ಆಪ್ತರಿಗೆ ಹರಿಯಣ್ಣ. ಅವರ ಬಳಿ ಡ್ರೈಯರ್ ಇಲ್ಲ.


ಆದರೆ ಮಳೆಗಾಲದಲ್ಲಿ ಸಿಕ್ಕ ಬಿಸಿಲನ್ನೇ ಬಳಸಿ ಬಾಕಾಹು ಮಾಡಿಕೊಂಡರು. ಈಗ ತಗೊಳ್ಳಿ, 'ಬಾಕಾಹು ಮೈಸೂರ್ ಪಾಕ್.’


ಹರಿಯಣ್ಣನ `ಎಫ್ ಐ ಆರ್’, ಅವರದೇ ಮಾತುಗಳಲ್ಲಿ:

• ಸಾಂಪ್ರದಾಯಿಕ 'ಮೈಸೂರು ಪಾಕ್' ಗೇನೂ ಕಡಿಮೆ ಇಲ್ಲ. ನಾವು ಬಳಸಿದ್ದು ಅದೇ ಅಳತೆ, ಅದೇ ವಿಧಾನ.

• ತುಂಡುಗಳಾಗಿ ಕತ್ತರಿಸಬರುತ್ತದೆ.

• ಚಾಕಲೇಟ್ ಬಣ್ಣ.

• ತಿನ್ನಲು ಗರಿಗರಿ ಜಾಸ್ತಿ.

• ಜಗಿದು ನುಂಗುವ ಹೊತ್ತಿಗೆ ಸಣ್ಣ ಬಾಕಾ ಅರೋಮ ಇದೆ (ಬಿಸಿಲ ಪರಿಣಾಮ ಇರಲಿಕ್ಕೂ ಸಾಕು).

• ಅಂತೂ ಡಿಸ್ಟಿಂಕ್ಷನ್


ಮಳೆಯ ನಡುವೆ ಕುರುಕಲು ಬಾಕಾಹು ಪಕೋಡವನ್ನೂ ಮಾಡಿದ್ದಾರೆ. ಬಾಕಾಹು, ಸುವರ್ಣ ಗಡ್ಡೆ ಚಿಗುರು ಸೊಪ್ಪು, ಛಾಯ ಮಾನ್ಝ, ಕರಿಬೇವು, ಗಾಂಧಾರಿ ಮೆಣಸು, ಶುಂಠಿ, ಉಪ್ಪು ಸೇರಿಸಿ ತೆಂಗಿನೆಣ್ಣೆಯಲ್ಲಿ ಫ್ರೈ. ಪಕೋಡವೂ ಪಾಸ್.

(ಮಾಹಿತಿ ಕೃಪೆ: ಶ್ರೀಪಡ್ರೆ)

Key Words: Banana Powder, Banana Powder Recipe, ಬಾಳೆಕಾಯಿ ಹುಡಿ, ಬಾಕಾಹು ಕ್ರಾಂತಿ, ಬಾಕಾಹು ಅಭಿಯಾನ

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top