ಬೆಳಗಾವಿ ಜಿಲ್ಲೆಗೂ ಹಬ್ಬಿದ ’ಬಾಕಾಹು’ ತರಂಗ

Upayuktha
0

 


ರೈತರ ಬೆಳೆಗೆ ಉತ್ತಮ ಬೆಲೆ ದೊರಕಿಸಿಕೊಡುವ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಪೂರಕವಾದ ಆವಿಷ್ಕಾರಿ ಚಿಂತನೆ, ಪ್ರಯೋಗ ಮತ್ತು ಅನುಸರಣೆಗಳಿಗೆ ಪ್ರೇರಣೆಯಾಗಿರುವ ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಅವರು ಈ ಬಾರಿ ಕೈಗೆತ್ತಿಕೊಂಡಿರುವ ಅಭಿಯಾನ ಬಾಕಾಹು- ಅರ್ಥಾತ್- ಬಾಳೆಕಾಯಿ ಹುಡಿ ಅಭಿಯಾನ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಕಾಸರಗೋಡು, ತುಮಕೂರು, ಶಿವಮೊಗ್ಗ... ಹೀಗೆ ಒಂದೊಂದೇ ಜಿಲ್ಲೆಗಳನ್ನು ವ್ಯಾಪಿಸಿ ಮುನ್ನಡೆಯುತ್ತಿರುವ ಅಭಿಯಾನವೀಗ ಬೆಳಗಾವಿ ಜಿಲ್ಲೆಗೂ ತಲುಪಿದೆ.


ರೈತನಿರ್ಮಿತ ಬಾಳೆಕಾಯಿ ಹುಡಿ (ಬಾಕಾಹು) ಆಂದೋಳನ ಮಲೆನಾಡಿನಿಂದಾಚೆ ಬಯಲುಸೀಮೆಯವರನ್ನೂ ಸೆಳೆದಿದೆ.


ರಾಮದುರ್ಗ ಜಿಲ್ಲೆಯ ಸಾವಯವ ಕೃಷಿಕ ಅಜ್ಜಪ್ಪ ಕುಲಗೋಡ ಬಾಳೆಕಾಯಿ ಬೆಲೆ ಕುಸಿತದಿಂದ ಮೇಲೇಳಲು ತಾವೇ ಪ್ರಯೋಗ ನಡೆಸಿ ಅದರ ಹುಡಿ / ಹಿಟ್ಟು ತಯಾರಿಸಿ ಗ್ರಾಹಕರಿಗೆ ನೇರ ಮಾರಾಟ ಮಾಡುತ್ತಿದ್ದಾರೆ.


ಆದರೆ ಅವರಿಗೆ ಚಪಾತಿ ತಯಾರಿಗಷ್ಟೇ ಇದನ್ನು ಸೇರಿಸಬಹುದು ಎಂಬ ಕಲ್ಪನೆಯಿತ್ತು. ಈಗ ಸಾಮಾಜಿಕ ಮಾಧ್ಯಮಗಳಿಂದ ಬಾಕಾಹುವಿನ ಬಹೂಪಯೋಗಿ ಗುಣ ಅವರಿಗೆ ಗೊತ್ತಾಗಿದೆ.


ಇಂದು ಅಜ್ಜಪ್ಪನವರ ಮನೆಯಲ್ಲಿ ಬಾಳೆಕಾಯಿ ಹುಡಿಯ ಬಿಸ್ಕೆಟ್, ವಡೆ ಮತ್ತು ಚಕ್ಕುಲಿ ಸಮಾರಾಧನೆ.

(ಕೃತಜ್ಞತೆಗಳು: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)


Key Words: Banana Flour, Banana Powder, Banana Flour recipes, Bakahu Campaign, ಬಾಕಾಹು ಅಭಿಯಾನ, ಬಾಳೆಕಾಯಿ ಹುಡಿ, ಬಾಳೆಕಾಯಿ ಹುಡಿಯ ಖಾದ್ಯ ವೈವಿಧ್ಯ


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top