ಪೆನ್ಸಿಲ್ ಆರ್ಟ್: ಭರವಸೆ ಮೂಡಿಸಿದ ಯುವ ಕಲಾವಿದೆ ವಿದ್ಯಾಶ್ರೀ

Upayuktha
0

ವಿದ್ಯೆ ಬಾಳಿಗೆ ಶ್ರೀ. ಎಂದೂ ಬರಿದಾಗದ ಸಂಪತ್ತು. ಕಲೆ ಸಂಸ್ಕಾರ ಸಂಸ್ಕೃತಿ ನೀಡುವ ವಿದ್ಯಾಶ್ರೀ ಹೆಸರಿನ ಕಲಾವಿದೆ ತನ್ನ ಸೃಜನಶೀಲ ಗೆರೆಗಳಲ್ಲಿ ಅತ್ಯುತ್ತಮ ಚಿತ್ರ ಮೂಡಿಸಿ ಗಮನ ಸೆಳೆದವರು.


ಮೂಲತ: ಬಂಟ್ವಾಳ ತಾಲೂಕಿನ ಬೆಂಜನ ಪದವಿನವರಾದ ಕು.ವಿದ್ಯಾಶ್ರೀ  ನಾರ್ಣಪ್ಪ,  ಶ್ರೀಮತಿ ಭವ್ಯ ಅವರ ಪ್ರತಿಭಾ ಕುಸುಮ. ತನ್ನ ಪ್ರಾಥಮಿಕ ಶಿಕ್ಷಣವನ್ನು ದ.ಕ.ಹಿ.ಪ್ರಾ ಶಾಲೆ ಬೆಂಜನಪದವಿನಲ್ಲಿ ಪೂರೈಸಿ ಪ್ರೌಢ ಪದವಿಪೂರ್ವ ವಿದ್ಯಾಭ್ಯಾಸವನ್ನು ಮುಗಿಸಿ ಪ್ರಕೃತ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ‌.ಕಾಂ ಪದವಿಯಲ್ಲಿದ್ದಾರೆ‌.


ಬಾಲ್ಯದಿಂದಲೇ ಚಿತ್ರಕಲೆ  ನೃತ್ಯ-ಇತ್ಯಾದಿ ಹವ್ಯಾಸ ರೂಢಿಸಿಕೊಂಡಿರುವ ವಿದ್ಯಾಶ್ರೀಯವರು ಪದವಿ ಶಿಕ್ಷಣದ ಕಡೆ ಹೆಚ್ಚು ಗಮನ ನೀಡುವುದರೊಂದಿಗೆ ಬಿಡುವಿನ ವೇಳೆಯಲ್ಲಿ ತನ್ನ ಭಾವನೆಗಳಿಗೆ ಸುಂದರ ಕಲ್ಪನೆ ನೀಡುತ್ತಿರುವರು.


ಕು.ವಿದ್ಯಾಶ್ರೀಯವರ ಚಿತ್ರ ರಚನೆಗಳು ಕಲಾವಿದರ ಮನ ಸೂರೆಗೊಳ್ಳದೆ ಬಿಡದು. ಖ್ಯಾತ ಯುವ ಗಾಯಕಿ ಕಲಾ ಪ್ರೋತ್ಸಾಹಕಿ ಗಾನಕೋಗಿಲೆ ಶೀಲಾ ಪಡೀಲ್ ಮಂಗಳೂರು ಇವರ, ಅಕ್ಕನ ಮಗಳಾಗಿರುವ ಕು. ವಿದ್ಯಾಶ್ರೀಯವರ ಶಿಕ್ಷಣ  ಕಲೆಗೆ ತುಂಬು ಪ್ರೋತ್ಸಾಹ ನೀಡುತ್ತಿರುವರು. ಯುವ ಪ್ರತಿಭೆ ಚಿತ್ರ ಕಲಾವಿದೆ ಕು. ವಿದ್ಯಾಶ್ರೀ ಬೆಂಜನಪದವು ಇವರ ಪ್ರತಿಭಾದೀಪ ಬೆಳಗಲೆಂದು ಹಾರೈಸೋಣ.


-ನಾರಾಯಣ ರೈ ಕುಕ್ಕುವಳ್ಳಿ‌.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top