ಗ್ರಾಮೀಣ ವಿದ್ಯಾರ್ಥಿಗಳನ್ನು ನಲುಗಿಸಲಿರುವ ಇಂಜಿನಿಯರಿಂಗ್ ಸಿಇಟಿ ಪರೀಕ್ಷೆ

Upayuktha
0


ಈ ಬಾರಿಯ ಇಂಜಿನಿಯರಿಂಗ್ ಕೇೂರ್ಸ್‌ಗಳ ಸೇರ್ಪಡೆಗೆ ಬೇೂರ್ಡ್‌ ಎಕ್ಸಾಮ್ ಅಂಕವನ್ನು ಪರಿಗಣಿಸದೇ ಬರೇ ಸಿಇಟಿ ಅಂಕಗಳ ಆಹ೯ತೆಯ ಮೇಲೆ ಇಂಜಿನಿಯರಿಂಗ್ ಸೀಟ್ ಹಂಚ ಬೇಕೆನ್ನುವ ನಿರ್ಣಯ ಬಹು ಮುಖ್ಯವಾಗಿ ಗ್ರಾಮೀಣ ಅದರಲ್ಲೂ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಬಹುದೊಡ್ಡ ಅಘಾತಕಾರಿ ಸುದ್ದಿ. ಈ ನಿಣ೯ಯ ಖಂಡಿತವಾಗಿಯೂ ಈ ವಗ೯ದ ವಿದ್ಯಾರ್ಥಿಗಳಿಗೆ ತೀರ ಅನ್ಯಾಯವಾಗುವ ಸಾಧ್ಯತೆ ನಿಚ್ಚಳವಾಗಿದೆ.


ಇದಕ್ಕೆ ಕಾರಣಗಳು ಹಲವು:


1. ಹಿಂದಿನ ಹಲವು ವರ್ಷಗಳ ಸಿಇಟಿ ಫಲಿತಾಂಶದ ಆಧಾರದ ಅನುಭವದ ಮೇಲೆ ಹೇಳುವುದಿದ್ದರೆ, ಬೇೂರ್ಡ್‌ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಗಳಿಸಿದ ಗ್ರಾಮೀಣ ಕಾಲೇಜಿನ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಯಲ್ಲಿ ಹಿಂದೆ ಬಿದ್ದಿರುವ ಸಾಕಷ್ಟು ಉದಾಹರಣೆಗಳಿವೆ. ಇದಕ್ಕೂ ಹಲವುಕಾರಣವೂ ಇದೆ.


2. ಬೇೂರ್ಡ್‌  ಪರೀಕ್ಷಾ ತಯಾರಿ ವಿಧಾನವೇ ಬೇರೆ ಸಿಇಟಿ ಪರೀಕ್ಷಾ ತಯಾರಿ ವಿಧಾನವೇ ಬೇರೆ. ಸಿಇಟಿ ಪರೀಕ್ಷೆಗೆ ತಯಾರು ಮಾಡುವ ಟ್ಯೂಷನ್ ಫ್ಯಾಕ್ಟರಿಗಳು ತೀರ ಗ್ರಾಮೀಣ ಪ್ರದೇಶದಲ್ಲಿ ಇಲ್ಲವೇ ಇಲ್ಲ. ಈ ವ್ಯವಸ್ಥೆ ಇರುವುದು ಕೂಡಾ ನಗರ ಪ್ರದೇಶಗಳಲ್ಲಿ. ಇಲ್ಲಿ ಟ್ಯೂಷನ್ ಪಡೆದುಕೊಳ್ಳುವುದು ಬಡ ವಿದ್ಯಾರ್ಥಿಗಳ ಪಾಲಿಗೆ ಅಸಾಧ್ಯವಾದ ದುಬಾರಿಯ ಮಾತು.


3. ಶಾಲಾ ಕಾಲೇಜುಗಳಲ್ಲಿ ಇಂತಹ ಟ್ಯೂಷನ್ ಕೊಡ ಬಾರದು ಅನ್ನುವ ನಿಯಮವೇ ಸರ್ಕಾರ ವಿಧಿಸಿರುವಾಗ ಇನ್ನೇನು ಬಂತು ಗ್ರಾಮೀಣ ವಿದ್ಯಾರ್ಥಿಗಳಿಗೆ ಸಿಇಟಿಯ ಕನಸು.


4. ನಮ್ಮ ಶಿಕ್ಷಣದ ಮೀಸಲಾತಿ ಪರಿಸ್ಥಿತಿ ಎಲ್ಲಿಗೆ ಬಂದಿದೆ ಅಂದರೆ ನಗರ ಪ್ರದೇಶದ ಶ್ರೀಮಂತರ ಮಕ್ಕಳು ಗ್ರಾಮೀಣ ಪ್ರದೇಶದಲ್ಲಿರುವ ಉನ್ನತ ಗುಣ ಮಟ್ಟದ ಶಾಲಾ ಕಾಲೇಜುಗಳಲ್ಲಿ ಕಲಿತು ಗ್ರಾಮೀಣ ಮೀಸಲಾತಿ ಲಾಭ ಪಡೆದು ಕೊಳ್ಳುವ ಅವಕಾಶ ಮಾಡಿಕೊಟ್ಟ ಶೆೈಕ್ಷಣಿಕ ಮೀಸಲಾತಿ ವ್ಯವಸ್ಥೆ! ಅದೇ ನಗರ ಪ್ರದೇಶಗಳಲ್ಲಿ ಓದುವ ಬಡ ವಿದ್ಯಾರ್ಥಿಗಳಿಗೆ ಈ ಮೀಸಲಾತಿ ಇಲ್ಲ. ಇದು ನಮ್ಮ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಪ್ರವೇಶಾತಿಯ ನಿಯಮ.


5. ಅಂತೂ ಈ ಬಾರಿಯ ಕೊರೊನ ಅನುಕಂಪದ ಪರೀಕ್ಷೆ ಇಲ್ಲದ ತೇರ್ಗಡೆ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಚೆಲ್ಲಾಟವಾಡುವುದಂತೂ ಸತ್ಯ.


-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top