ವಿಹಿಂಪ-ಬಜರಂಗದಳದಿಂದ 300ಕ್ಕೂ ಹೆಚ್ಚು ಸಂತ್ರಸ್ತರಿಗೆ 33 ದಿನಗಳಿಂದ ಮಧ್ಯಾಹ್ನದ ಊಟ

Upayuktha
0

 ಕಾರ್ಯಕರ್ತರ ಸೇವೆಗೆ ಶಾಸಕ ಡಾ.ಭರತ್ ಶೆಟ್ಟಿ ಅಭಿನಂದನೆ


ಮಂಗಳೂರು: ವಿಶ್ವ ಹಿಂದೂ ಪರಿಷತ್- ಬಜರಂಗದಳ ಧರ್ಮಶಾಸ್ತಾ ಶಾಖೆ ಜ್ಯೋತಿನಗರ ಹಾಗೂ ಕಾವೂರು ಪ್ರಖಂಡದ ಅಧ್ಯಕ್ಷರಾದ ಶಿವರಾಜ್ ಕಾವೂರ್ ಇವರ ನೇತೃತ್ವದಲ್ಲಿ ಜ್ಯೋತಿನಗರ, ಬಸವನಗರ ಹಾಗೂ ತಾರೀಪಾಡಿ ಗುಡ್ಡೆಯ ಯುವಕರು ರಸ್ತೆ ಬದಿಯ ಸುಮಾರು 300ಕ್ಕೂ ಹೆಚ್ಚು ಸಂತ್ರಸ್ತರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಸತತ 33 ದಿನಗಳಿಂದ ಮಾಡುತ್ತ ಬಂದಿರುತ್ತಾರೆ.


ಪ್ರತಿ ದಿನ ಊಟ ತಯಾರು ಮಾಡಿ ಕಾವೂರು, ಕುಳೂರು, ಮತ್ತು ಲೇಡಿಗೋಶನ್ ಹಾಸ್ಪಿಟಲ್ ಬಳಿ ಊಟವನ್ನು ವಿತರಿಸಲಾಗುತ್ತಿದೆ. ಭಾನುವಾರ ಅಲ್ಲಿ ಭೇಟಿ ಕೊಟ್ಟ ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈಭರತ್ ಶೆಟ್ಟಿಯವರು ವಿಹಿಂಪ-ಬಜರಂಗದಳದ ಕಾರ್ಯಕರ್ತರ ಸೇವೆಯನ್ನು ಶ್ಲಾಘಿಸಿದರು.


ಇವರಿಗೆ ಪ್ರತಿ ಭಾನುವಾರದ ಊಟದ ವ್ಯವಸ್ಥೆಗೆ ಸಹಕರಿಸಿದ TCCOH (R)ದಕ್ಷಿಣ ಕನ್ನಡ ಡಿವಿಜನ್ ಸರ್ವ ಸದಸ್ಯರು ಮತ್ತು  ಆ ಸಂಘದ ಗೌರವಾನ್ವಿತ ಸದಸ್ಯರಾದ  ಮನೋಜ್  ಅಳಪೆ ಪಡೀಲ್ (ಮಂಗಳಾದೇವಿ ಟ್ರಾವೆಲ್ಸ್), ಸುರೇಶ ದೇವಾಡಿಗ (ಮಹೇಶ್ವರಿ ಟ್ರಾವೆಲ್ಸ್) ಹಾಗೂ ಅಡುಗೆ ತಯಾರು ಮಾಡಿದ ಅಡುಗೆ ಭಟ್ಟರಾದ ಲಕ್ಷ್ಮಣ್ ಕೃಷ್ಣ ನಗರ ಹಾಗೂ ಸಹಕರಿಸಿದ ಎಲ್ಲಾ ಯುವಕರ ಸೇವೆಯನ್ನು ಶಾಸಕರು ಮೆಚ್ಚಿ ಶ್ಲಾಘನೀಯ ಕಾರ್ಯಕ್ಕೆ ಅಭಿನಂದಿಸಿದರು.

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top