ಕೋಲಾರ: 'ಶ್ರೀನಿವಾಸ ಉತ್ಸವ ಬಳಗ'ದಿಂದ ಸಾರ್ಥಕ ಸೇವೆ ನೆರವಿನ ಹಸ್ತ

Upayuktha
0

ಬೆಂಗಳೂರು: ಕೋವಿಡ್‍ನ ಈ ವಿಷಮ ಪರಿಸ್ಥಿತಿ ನಗರದಿಂದ ಗ್ರಾಮಾಂತರ ಪ್ರದೇಶಗಳಿಗೆ ಹರಡಿದೆ. ಮಹಾಮಾರಿ ಕರೊನದಿಂದಾಗಿ ಜನರು ಪರದಾಡುತ್ತಿದ್ದಾರೆ. ಈ ಸಮಯದಲ್ಲಿ ಕೆಲವು ಸಂಘಟನೆಗಳು, ಸಂಸ್ಥೆಗಳು ಮತ್ತು ಅನೇಕ ಸಮಾಜ ಸೇವಕರು ಸಹಾಯ ಮಾಡುತ್ತಿದ್ದಾರೆ. ಅವಶ್ಯವುಳ್ಳ ನಿರ್ಗತಿಕರಿಗೆ, ಬಡಕುಟುಂಬಗಳಿಗೆ ಅಗತ್ಯ ಸೇವೆ ಕಲ್ಪಿಸುತ್ತಿವೆ.


ಬೆಂಗಳೂರಿನ ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಸಂಘಟನೆ ಶ್ರೀನಿವಾಸ ಉತ್ಸವ ಬಳಗದ ಸದಸ್ಯರ ಸಹಕಾರದಿಂದ ಲಾಕ್‍ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ಕೋಲಾರ ಜಿಲ್ಲೆಯ ವಿಪ್ರ ಬಾಂಧವರಿಗೆ ಸಣ್ಣ ಸಣ್ಣ ಹಳ್ಳಿಗೆ ಹೋಗಿ ಅಲ್ಲಿರುವ ದೇವಸ್ಥಾನದ ಅರ್ಚಕರು ಮತ್ತು ಕುಟುಂಬಗಳಿಗೆ ಆಹಾರ ಪದಾರ್ಥಗಳನ್ನು ಒಳಗೊಂಡಿರುವ ಚೀಲಗಳನ್ನು ನೀಡುವುದರ ಮೂಲಕ ಸ್ಫಂದಿಸಿದೆ ಹಾಗೂ ದಕ್ಷಿಣೆ ನೀಡಿ ಗೌರವ ಸಮರ್ಪಣೆ ಮಾಡಲಾಯಿತು.


ಕೋಲಾರ ದೊಡ್ಡ ಪ್ರಾಣದೇವರಗುಡಿಯಲ್ಲಿ ವೇದಮ್ಮ ಹಯವದನ ಗ್ರೂಪ್ ಸದಸ್ಯರಿಗೆ  ದಿನಸಿ ಚೀಲವನ್ನು ವಿತರಣೆ ಮಾಡಲಾಯಿತು. ಶ್ರೀನಿವಾಸ ಉತ್ಸವ ಬಳಗದ ಈ ನಿಸ್ವಾರ್ಥ ಸೇವಾ ಕೈಂಕರ್ಯವನ್ನು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥರು ಪ್ರಶಂಸನೀಯ ಕಾರ್ಯವೆಂದು ಆಶೀರ್ವದಿಸಿದ್ದಾರೆ.


ಕರೋನ ರೋಗ ದೇಶದಲ್ಲಿ ತೀವ್ರ ಹಾನಿಯನ್ನು ಉಂಟುಮಾಡಿದ್ದು, ನಗರದಲ್ಲಿದ್ದ ರೋಗ ಈಗ ಗ್ರಾಮ ಪ್ರದೇಶಗಳಿಗೆ ಹರಡುತ್ತಿದೆ. ಬಹಳ ಜನ ಕಷ್ಟಪಡುತ್ತಿದ್ದಾರೆ. ಲಾಕ್ಡೌನ್ನಂತಹ ಸಂದರ್ಭದಲ್ಲಿ ಪ್ರತಿ ನಿತ್ಯದ ಕಾರ್ಯವನ್ನು ಮಾಡಲಾಗದಿರುವುದರಿಂದ ನಮ್ಮ ಶ್ರೀನಿವಾಸ ಉತ್ಸವ ಬಳಗ ಸಮಾಜಕ್ಕೆ ಅಲ್ಪ ಸೇವೆಯನ್ನು ಮಾಡುತ್ತಿದೆ. ಅನೇಕ ದಾನಿಗಳು ನಮಗೆ ನೆರವಾಗಿದ್ದಾರೆ. ಈ ಮಹತ್ತರ ಕಾರ್ಯಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ಉತ್ಸವ  ಬಳಗದ ಸಂಸ್ಥಾಪಕ ಅಧ್ಯಕ್ಷ ಡಾ.ಟಿ.ವಾದಿರಾಜ ತಿಳಿಸಿದ್ದಾರೆ.

ವಿವರಗಳಿಗೆ: 98861 08550


إرسال تعليق

0 تعليقات
إرسال تعليق (0)
To Top