ಜೂನ್ 21ಕ್ಕೆ 'ನನ್ನ ಕವಿತೆ ನನ್ನ ಹಾಡು' ಕವಿಗೋಷ್ಠಿ ಪ್ರಸಾರ

Upayuktha
0

 



ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಆಯೋಜಿಸಿರುವ ಬಹುನಿರೀಕ್ಷಿತ ಆನ್ಲೈನ್ ವೀಡಿಯೋ ಚುಟುಕು ಗಾಯನ ಕವಿಗೋಷ್ಠಿ 'ನನ್ನ ಕವಿತೆ ನನ್ನ ಹಾಡು' 21ನೇ ತಾರೀಕು ಸೋಮವಾರ ಸಂಜೆ 6 ಗಂಟೆಗೆ ನಮ್ಮ ಕುಡ್ಲ ವಾಹಿನಿಯಲ್ಲಿ ಪ್ರಸಾರವಾಗಲಿದೆ.


ಗೋಷ್ಠಿಯ ಅಧ್ಯಕ್ಷತೆಯನ್ನು ಅರೆಹೊಳೆ ಪ್ರತಿಷ್ಠಾನದ ಅಧ್ಯಕ್ಷ, ನಂದಗೋಕುಲ ನೃತ್ಯ ತಂಡದ ಮುಖ್ಯಸ್ಥ ಅರೆಹೊಳೆ ಸದಾಶಿವ ರಾವ್ ವಹಿಸಲಿದ್ದಾರೆ. ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಪ್ರಾಸಾವಿಕ ಭಾಷಣ ಮಾಡುವರು.


ಕವಿಗಳಾದ ಮರೋಳಿ ಸಬಿತಾ ಕಾಮತ್ ಮಂಗಳೂರು, ವಾಣಿ ಲೋಕಯ್ಯ ಮಂಗಳೂರು, ಎನ್ ಸುಬ್ರಾಯ ಭಟ್, ಮಂಗಳೂರು, ಬಿ.ವೆಂಕಟೇಶ್, ಬೆಂಗಳೂರು, ಭಾರತಿ ರಘು ಮೂಡಬಿದ್ರಿ, ವಾಣಿ ರಾವ್ ಕಿನ್ನಿಗೋಳಿ, ರೇಖಾ ಸುದೇಶ್ ರಾವ್, ಮಂಗಳಾದೇವಿ, ಶಾರದಾ ಎ. ಅಂಚನ್ ಮುಂಬೈ, ಮಹಾಂತೇಶ್ ಕೋಳಿವಾಡ್ ಹುಬ್ಬಳ್ಳಿ, ರಶ್ಮಿ ಸನಿಲ್ ಮಂಗಳೂರು, ಗುಣಾಜೆ ರಾಮಚಂದ್ರ ಭಟ್, ರಕ್ಷಿತ್ ಕೃಷ್ಣ ಸನಿಲ್, ಮಂಗಳೂರು, ರೇಮಂಡ್ ಡಿಕುನ್ಹಾ ತಾಕೊಡೆ, ಮಂಗಳೂರು, ಪ್ರೇಮಲತಾ ಸಿ ಎಸ್ ಚಿಪ್ಪಾರು ಕಾಸರಗೋಡು, ಶೇಖರ್ ಶೆಟ್ಟಿ ಬಾಯಾರು, ಡಾ.ಸುರೇಶ್ ನೆಗಳಗುಳಿ, ಮಂಗಳೂರು, ಶರತ್ ಕುಮಾರ್ ಭಟ್, ಮಂಗಳೂರು, ಶ್ಯಾಮಲಾ ಪ್ರಸನ್ನ ಕುಮಾರ್ ಕುಂಬ್ಳೆ, ಮಾನಸ ವಿಜಯ್ ಕೈಂತಜೆ, ಮಾಣಿ,ಸತ್ಯವತಿ ಭಟ್ ಕೊಳಚಪ್ಪು, ವಿದ್ವಾನ್ ಮಂಜುನಾಥ್ ಎನ್ ಪುತ್ತೂರು, ಕಲ್ಬುರ್ಗಿ, ವಿಜಯಲಕ್ಷ್ಮೀ ಕಾಸರಗೋಡು, ವ.ಉಮೇಶ್ ಕಾರಂತ್, ಮಂಗಳೂರು, ಕುಮುದಾ ಡಿ ಶೆಟ್ಟಿ ಮುಂಬೈ, ವಿಜಯಲಕ್ಷ್ಮೀ ಕಟೀಲು, ವಿಜೇಶ್ ದೇವಾಡಿಗ ಮಂಗಳಾದೇವಿ, ಆಕೃತಿ ಐ ಎಸ್ ಭಟ್, ಅರುಂಧತಿ ರಾವ್, ಸಿಂಧು ಮಂಜುನಾಥ್ ಬೆಂಗಳೂರು ಹೀಗೆ ಒಟ್ಟು 29 ಮಂದಿ ತಮ್ಮ ಸ್ವರಚಿತ ಚುಟುಕುಗಳನ್ನು ಗಾಯನ ಮಾಡಲಿದ್ದಾರೆ ಎಂದು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಪ್ರಕಟಣೆ ತಿಳಿಸಿದೆ.

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top