ಮಂಗಳೂರು: ಮರವೂರು ಸೇತುವೆ ಕುಸಿತದ ಹಿನ್ನೆಲೆಯಲ್ಲಿ ಪರ್ಯಾಯ ರಸ್ತೆಯಾಗಿ MSEZ ವಿಶೇಷ ರಸ್ತೆಯನ್ನು ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸುವಂತೆ ಜಿಲ್ಲಾಧಿಕಾರಿಗಳೊಂದಿಗೆ ಮಾಜಿ ಸಚಿವ ಶಾಸಕ ಯು.ಟಿ.ಖಾದರ್ ಚರ್ಚೆ ನಡೆಸಿದರು.
ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಕಟೀಲು ದೇವಸ್ಥಾನ, ಕಿನ್ನಿಗೋಳಿ ಮುಂತಾದ ಕಡೆಗಳಿಗೆ ಸಂಪರ್ಕ ಕಲ್ಪಿಸುವ ಮರವೂರು ಸೇತುವೆ ಕುಸಿತಗೊಂಡಿದ್ದು ಬದಲಿ ಸಂಚಾರಕ್ಕಾಗಿ ನೀಡಿದ ಕಾವೂರು-ಕೂಳೂರು- ಕೆಬಿಎಸ್-ಜೋಕಟ್ಟೆ-ಪೊರ್ಕೋಡಿ -ಬಜ್ಪೆ ಅಥವಾ ಪಚ್ಚನಾಡಿ-ಗುರುಪುರ-ಕೈಕಂಬ-ಬಜ್ಪೆ ರಸ್ತೆಯು ತೀರಾ ಕಿರಿದಾಗಿದೆ. ಅಲ್ಲದೆ ಜೋಕಟ್ಟೆಯಲ್ಲಿ ರೈಲ್ವೇ ಗೇಟ್ ಕೂಡಾ ದಾಟಬೇಕಾಗಿರುವುದರಿಂದ ವಿಪರೀತ ಬ್ಲಾಕ್ ನಿಂದಾಗಿ ಜನರು ಕಷ್ಟ ಅನುಭವಿಸುತ್ತಿದ್ದಾರೆ. ಪರ್ಯಾಯ ರಸ್ತೆಯಾಗಿ (MSEZ) ಕೂಳೂರು-ಕಳವಾರು-ಬಜಪೆ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು ಎಂದು ಮಾಜಿ ಸಚಿವ ಶಾಸಕ ಯು.ಟಿ.ಖಾದರ್ ಹಾಗೂ ಮಾಜಿ ಸಚಿವ ಅಭಯಚಂದ್ರ ಜೈನ್ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಆಗ್ರಹಿಸಿದರು.
ಅದೇ ರೀತಿ ಆದಷ್ಟು ಬೇಗನೇ ಮರವೂರು ಸೇತುವೆಯ ದುರಸ್ತಿ ಕಾಮಗಾರಿಯನ್ನು ಕೈಗೆತ್ತಿಕೊಂಡು ಮತ್ತೆ ಮರವೂರು ಸೇತುವೆ ಸಾರ್ವಜನಿಕರ ಉಪಯೋಗಕ್ಕೆ ಮುಕ್ತವಾಗುವಂತೆ ಕ್ರಮ ಕೈಗೊಳ್ಳಬೇಕಾಗಿ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


