ಮುಂಗಾರನ್ನು ಸ್ವಾಗತಿಸುವ ಗೋಪ್ರೇಮಿ ರೈತರ ಹಬ್ಬ- ಕಾರಹುಣ್ಣಿಮೆ

Upayuktha
0

ಇಂದು ಕಾರಹುಣ್ಣಿಮೆ



ಕಾರಹುಣ್ಣಿಮೆ ಉತ್ತರದ ರೈತರ ಪಾಲಿಗೆ ಸಂಭ್ರಮದ ಹಬ್ಬ. ಉತ್ತರ ಕನಾ೯ಟಕದಲ್ಲಿ ರೈತರು ಕಾರಹುಣ್ಣಿಮೆ ಹಬ್ಬವನ್ನು ವರ್ಷದ ಮೊದಲ ಹಬ್ಬವಾಗಿ ಸಡಗರ ಸಂಭ್ರಮದಿಂದ ಆಚರಿಸುವರು. ಉತ್ತರ ಕರ್ನಾಟಕದ ಆಚರಣೆಗಳು ವಿಭಿನ್ನ, ವಿಶಿಷ್ಟ.

ರೈತರು ಕಾರಹುಣ್ಣಿಮೆ ಆಚರಿಸುವ ಪದ್ಧತಿ ತಲೆತಲಾಂತರದಿಂದ ನಡೆದು ಬಂದಿದೆ. ಕಾರಹುಣ್ಣಿಮೆ ದಿನದಂದು ಪ್ರಮುಖವಾಗಿ ಎತ್ತು, ಹೋರಿಗಳೇ ಆಕರ್ಷಣೆಯಾಗಿರುತ್ತವೆ.  

ಕಾರಹುಣ್ಣಿಮೆಯಂದು ಎತ್ತು, ಹೋರಿಗಳ ಮೈತೊಳೆದು ರೈತರು ವಿವಿಧ ಬಗೆ ಶೃಂಗಾರದ ವಸ್ತುಗಳನ್ನು ಹಾಕುತ್ತಾರೆ. ಜೊತೆಗೆ ಮೈಮೇಲೆ ವಿಶೇಷವಾದ ಚಿತ್ತಾರ ಬಿಡಿಸಿ ಮೆರವಣಿಗೆ ಮಾಡುತ್ತಾರೆ.

ಮಣ್ಣೆತ್ತಿನ ಅಮಾವಾಸ್ಯೆಯಿಂದ ಕಾರಹುಣ್ಣಿಮೆ ತನಕ ಎತ್ತು, ಹೋರಿಗಳಿಗೆ ಕೃಷಿ ಚಟುವಟಿಕೆಯಿಂದ ವಿರಾಮ ನೀಡಲಾಗುತ್ತದೆ. ಸಿಂಗರಿಸಲಾದ ಎತ್ತುಗಳಿಗೆ ಹೋಳಿಗೆ, ಕಡುಬು ಖಾದ್ಯಗಳನ್ನು ಮಾಡಿ ಉಣಬಡಿಸುವ ಮೂಲಕ ಅನ್ನದಾತರು ತಮ್ಮ ಎತ್ತುಗಳ ಮೇಲಿನ‌ ಅಭಿಮಾನ ಮೆರೆಯುತ್ತಾರೆ. ಹೀಗೆ ಪೂಜಿಸಿದ ಎತ್ತುಗಳ ನಡುವೆ ಸಾಯಂಕಾಲ ಸ್ಪರ್ಧೆ ಏರ್ಪಡಿಸಿ ಸಂಭ್ರಮಿಸಿ ಮಾರನೇ ದಿನದಿಂದ ಮುಂಗಾರಿನ ಕೃಷಿ ಚಟುವಟಿಕೆಗಳನ್ನು ಆರಂಭಿಸಲಾಗುತ್ತದೆ.


ಹಬ್ಬದ ಸಂಭ್ರದಲ್ಲಿರುವ ರೈತರಿಗೂ ಗೋಪ್ರೇಮಿಗಳಿಗೂ ಕಾರ ಹುಣ್ಣಿಮೆಯ ಶುಭಾಶಯಗಳು. 


ಅನ್ನವೀಯುವ ನೆಲಕ್ಕೆ ಅನ್ನವೀಯುವ ಗೋಮಾತೆಯ ಸಂರಕ್ಷಣೆಗೆ ಸದಾ ಬದ್ಧರಾಗೋಣ. 

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top