ಬೀದರ್‌: ಶ್ರೀ ಮಾತೇಶ್ವರಿ ಗೋಶಾಲೆ ಉದ್ಘಾಟನೆ

Upayuktha
0


 

ಬೀದರ್: ಬೀದರ್‌ - ನೌಬಾದ್‌ನ ಭಾಲ್ಕಿ ರಸ್ತೆಯಲ್ಲಿರುವ ಜ್ಞಾನ ಶಿವಯೋಗಾಶ್ರಮದಲ್ಲಿ ಶ್ರೀ ಮಾತೇಶ್ವರಿ ಗೋಶಾಲೆಯ ಉದ್ಘಾಟನೆ ಗುರುವಾರ ನೆರವೇರಿತು.


ಬೀದರ್‌ನ ಶ್ರೀ ವೈಷ್ಣೋದೇವಿ ಕಲ್ಚರಲ್‌ ಮತ್ತು ಚಾರಿಟೇಬಲ್‌ ಟ್ರಸ್ಟ್ ಈ ಗೋಶಾಲೆಯ ಹೊಣೆ ಹೊತ್ತುಕೊಂಡಿದೆ.


ಬೀದರ್‌ನ ಪಶು ಸಂಗೋಪನೆ ಮತ್ತು ಜಾನುವಾರು ವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಡಾ. ರವೀಂದ್ರ ಕುಮಾರ್ ಭೂರೆ, ಪೂಜ್ಯ ಡಾ ರಾಜಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಬೆಮಲ್‌ಖೇಡ, ಬೀದರ್‌ನ ಕರ್ನಾಟಕ ಪ್ರಾಣಿ ವಿಜ್ಞಾನ ಮತ್ತು ಮೀನುಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಡಾ ಎಚ್‌.ಡಿ ನಾರಾಯಣ ಸ್ವಾಮಿ, ಬೀದರ್ ಜಿಲ್ಲಾ ಗೋಸೇವಾ ಸಂಯೋಜಕ ಬಿ.ಸಿ. ರೆಡ್ಡಿ ಮತ್ತು ಕಲಬುರ್ಗಿಯ ಶ್ರೀ ಮಾಧವ ಗೋಶಾಲೆಯ ಮುಖ್ಯಸ್ಥರಾಗಿರುವ ಮಹೇಶ ಬೀದರಕರ ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top