ಮಳೆಗಾಲದಲ್ಲಿ ಸೊಳ್ಳೆ ಪರದೆ ಬಳಸಿ: ಡಾ. ಚೂಂತಾರು

Upayuktha
0

 ಕೋವಿಡ್ ಮಾರ್ಷಲ್‌ಗಳಿಗೆ ಸೊಳ್ಳೆ ಪರದೆ ವಿತರಣೆ


ಮಂಗಳೂರು: ಕೋವಿಡ್ ಮಾರ್ಷಲ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವ ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ ಇಂದು (ಜೂ.10) ಆರೋಗ್ಯ ಇಲಾಖೆ ವತಿಯಿಂದ ಸೊಳ್ಳೆಪರದೆಗಳನ್ನು ವಿತರಿಸಲಾಯಿತು. ನಗರದ ಮೇರಿಹಿಲ್‌ನಲ್ಲಿರುವ ಜಿಲ್ಲಾ ಗೃಹರಕ್ಷಕ ದಳದ ಪ್ರಧಾನ ಕಚೇರಿಯಲ್ಲಿ ಜಿಲ್ಲಾ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಅವರು ಈ ಸೊಳ್ಳೆಪರದೆಗಳನ್ನು ವಿತರಿಸಿದರು. ಆರೋಗ್ಯ ಇಲಾಖೆ ಸುಮಾರು 250 ಸೊಳ್ಳೆ ಬಲೆಗಳನ್ನು ಗೃಹರಕ್ಷಕರ ಇಲಾಖೆಗೆ ನೀಡಿದೆ.


ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಳೆಗಾಲದ ಸಮಯದಲ್ಲಿ ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳ ಸಂಖ್ಯೆ ವೃದ್ದಿಸುತ್ತದೆ. ಸೊಳ್ಳೆಗಳ ಸಂಖ್ಯೆ ಜಾಸ್ತಿಯಾದಂತೆ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕನ್‍ಗುನ್ಯಾ ಹೆಚ್ಚಾಗಿ ಕಂಡುಬರುತ್ತದೆ. ನೀರು ನಿಲ್ಲುವುದನ್ನು ತಡೆಗಟ್ಟುವುದರ ಜೊತೆಗೆ ಸೊಳ್ಳೆ ಪರದೆ ಬಳಸುವುದರಿಂದಲೂ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಬಹುದಾಗಿದೆ ಎಂದರು.


ಈಗಾಗಲೇ ಕೋವಿಡ್-19 ಜ್ವರದಿಂದ ಹೈರಾಣಾಗಿರುವ ಈ ಕಾಲಘಟ್ಟದಲ್ಲಿ ಡೆಂಗ್ಯೂ, ಮಲೇರಿಯಾ ಮತ್ತು ಚಿಕನ್‍ಗುನ್ಯಾ ರೋಗ ವಕ್ಕರಿಸಿದ್ದಲ್ಲಿ ಮತ್ತಷ್ಟು ಗಂಭೀರ ಸಮಸ್ಯೆಗಳು ಕಂಡುಬರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ರೋಗ ಬರದಂತೆ ತಡೆಗಟ್ಟುವುದು ಸೂಕ್ತ ನಿರ್ಧಾರವಾಗಿರುತ್ತದೆ.



ಈ ಕಾರಣದಿಂದಲೇ ಆರೋಗ್ಯ ಇಲಾಖೆಯಿಂದ ಕೊಡಲಾದ ಸೊಳ್ಳೆ ಬಲೆಗಳನ್ನು ದ.ಕ ಜಿಲ್ಲಾ ಗೃಹರಕ್ಷಕರಿಗೆ ಉಚಿತವಾಗಿ ಹಂಚಲಾಗಿದೆ ಎಂದು ದ.ಕ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ನುಡಿದರು.


ಈ ಸಮಯದಲ್ಲಿ ಕಛೇರಿ ಅಧೀಕ್ಷಕರು ಶ್ರೀ ರತ್ನಾಕರ್, ಗೃಹರಕ್ಷಕರಾದ ಸುನಿಲ್, ಸುನಿಲ್ ಪೂಜಾರಿ, ರಮೇಶ್ ಭಂಡಾರಿ, ಕನಕಪ್ಪ, ಪ್ರಸಾದ್ ಸುವರ್ಣ, ದುಷ್ಯಾಂತ್, ದಿವಾಕರ್ ಉಪಸ್ಥಿತರಿದ್ದರು. 

(ಉಪಯುಕ್ತ ನ್ಯೂಸ್)


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top