ಜಿಲ್ಲೆಯ ಮೂರು ಅಣೆಕಟ್ಟೆಗೆ ಅಪಾರ ಪ್ರಮಾಣದ ನೀರು ಒಳಹರಿವು
ಶಿವಮೊಗ್ಗ: ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ವರ್ಷ ಮುಂಗಾರಿನ ಅಬ್ಬರ ಹೆಚ್ಚಾಗಿದ್ದು, ಮಲೆನಾಡಿನ ಜೀವನಾಡಿ ತುಂಗಾ ನದಿ ತುಂಬಿ, ಮಂಟಪ ಮುಳುಗಲು ಇನ್ನು ಕೇವಲ 2 ಅಡಿ ಮಾತ್ರ ಬಾಕಿ ಇದೆ.
ಗಾಜನೂರು ತುಂಗಾ ಜಲಾನಯನ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಅಣೆಕಟ್ಟೆಗೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಸದ್ಯ ಜಲಾಶಯಕ್ಕೆ 34700 ಕ್ಯೂಸೆಕ್ಸ್ ನೀರು ಹರಿದುಬರುತ್ತಿದ್ದು, 34700 ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಪರಿಣಾಮವಾಗಿ ತುಂಗಾ ನದಿ ಮೈದುಂಬಿ ಹರಿಯುತ್ತಿದ್ದು, ಪುರಾತನ ಪ್ರಸಿದ್ದ ಕೋರ್ಪಳಯ್ಯನ ಛತ್ರದ ಬಳಿಯಿರುವ ಮಂಟಪ ಮುಳುಗಲು ಇನ್ನು 2 ಅಡಿ ಮಾತ್ರ ಬಾಕಿಯಿದೆ.
ಯಾವ ಜಲಾಶಯದಲ್ಲಿ ಎಷ್ಟು ನೀರು?
ಲಿಂಗನಮಕ್ಕಿ: ಗರಿಷ್ಠ ಮಟ್ಟ- 1819 ಅಡಿ, ಇಂದಿನ ಮಟ್ಟ 1781.45 ಅಡಿ (ಕಳೆದ ವರ್ಷ ಇದೇ ದಿನ 1760.20 ಅಡಿಗಳಿತ್ತು)
ಭದ್ರಾ: ಗರಿಷ್ಠ ಮಟ್ಟ-186 ಅಡಿ, ಇಂದಿನ ಮಟ್ಟ 146.60(ಕಳೆದ ವರ್ಷ ಇದೇ ದಿನ 135 ಅಡಿಗಳಿತ್ತು)
ತುಂಗಾ: ಗರಿಷ್ಠ ಮಟ್ಟ-588.24, ಇಂದಿನ ಮಟ್ಟ 588.24 (ಕಳೆದ ವರ್ಷ ಇದೇ ದಿನ 587.69 ಅಡಿಗಳಿತ್ತು)
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


