ಪಿತೃ, ವಾತ್ಸಲ್ಯದ ಸಂಪತ್ತು; ಅಪ್ಪನೆಂದರೆ ಪದಗಳಿಗೆ ನಿಲುಕದ ಬಂಧ

Upayuktha
0


 


ನಾನು ನೋಡಿದ ಮೊದಲ ವೀರ

ಬಾಳು ಕಲಿಸಿದ ಸಲಹೆಗಾರ

ಬೆರಗು ಮೂಡಿಸೋ ಜಾದೂಗಾರ ಅಪ್ಪ..

ಹಗಲು ಬೆವರಿನ ಕೂಲಿಕಾರ

ರಾತ್ರಿ ಮನೆಯಲಿ ಚೌಕಿದಾರ

ಎಲ್ಲಾ ಕೊಡಿಸುವ ಸಾಹುಕಾರ ಅಪ್ಪ...


ಈ ಪದ್ಯ ಕೇಳುವಾಗಲೆಲ್ಲ ಮೈ ರೋಮಾಂಚನಗೊಳ್ಳುತ್ತದೆ. ಮತ್ತೆ ಮತ್ತೆ ಅದೇ ಸಾಂಗ್ ಕೇಳೋಣ ಅಂದೆನಿಸುವಷ್ಟು ಮನಕ್ಕೆ ಮುಟ್ಟುತ್ತದೆ. ಪ್ರತಿ ಬಾರಿ ಆ ಸಾಂಗ್ ಕೇಳಿದಾಗಲೆಲ್ಲ ಕಣ್ಣಂಚಲ್ಲಿ ಕಂಬನಿ ಜಾರುತ್ತದೆ. ವ್ಹಾ ಅದೆಂತಹ ಅದ್ಭುತ ಸಾಂಗ್..!


ನಿಜ... ಅಪ್ಪನೆಂದರೆ ಪದಗಳಿಗೆ ನಿಲುಕದ ಸಂಬಂಧ. ಅದರಲ್ಲೂ ಅಪ್ಪ ಮಗಳದ್ದಂತೂ ವರ್ಣಿಸಲು ಅಸಾಧ್ಯವಾದ ಅನುಬಂಧ. ಅದೆಷ್ಟೇ ಏಳುಬೀಳುಗಳು ಬರಲಿ ಅವಳಿಗೆ ಅಪ್ಪನೆ ನನ್ನೊಂದಿಗೆ ಇದ್ದಾರೆ ಅನ್ನೋದೇ ಧೈರ್ಯ. ಹೇಳಿಕೊಳ್ಳಲಾಗದ ಅವಳ ಕಷ್ಟವನ್ನು ಅವಳ ಮೌನದಲ್ಲಿಯೇ ಅವನಿಗೆ ಅರ್ಥವಾಗುತ್ತೆ. ಅಪ್ಪನ ಕೈ ಹಿಡಿದು ನಡೆಯಿರಿ ಮುಂದೆ ಯಾರ ಕಾಲನ್ನು ಹಿಡಿಯಬೇಕಾದ ಪರಿಸ್ಥಿತಿ ಬರೋದಿಲ್ಲ. ಯಾಕೆಂದರೆ ಅಪ್ಪ ಎಂದರೆ ನಂಬಿಕೆ, ಧೈರ್ಯ.


ಪ್ರತಿಕ್ಷಣ ಆತನದು ನಮ್ಮ ಖುಷಿಗಾಗಿ ದುಡಿಯುವಂತಹ ಜೀವ. ಆತನ ಕೈಗಳು ಬಿಡುವಿಲ್ಲದೆ ನಮಗಾಗಿ ಶ್ರಮಪ ಡೆಯುತ್ತದೆ. ಇಡೀ ಸಂಸಾರದ ಜವಾಬ್ದಾರಿ ಆತನ ಹೆಗಲ ಮೇಲೆ ಇದ್ದರೂ, ಅವನ ಹೆಗಲ ಮೇಲೆ ನಮ್ಮನ್ನು  ಕುಳಿತಿಸಿಕೊಂಡಗಾಲೆಲ್ಲ ಮೊಗದಲ್ಲಿ ಬೀರೋ ಆ ನಿಸ್ವಾರ್ಥ ನಗುವನ್ನು ಮರೆಯಲು ಸಾಧ್ಯನೇ ಇಲ್ಲಾ. ಆಟದಲ್ಲಿ ನನ್ನ ಗೆಲುವಿಗಾಗಿ ನೀ ಸೋಲುತ್ತಿದರು, ನನ್ನ ಗೆಲುವಿನಲ್ಲಿಯೇ ನೀ ಖುಷಿ ಕಾಣುತ್ತಿದ್ದೆ... ಅಪ್ಪ ನಾ ಏನನ್ನಲಿ ಆ ನಿನ್ನ ನಿಸ್ವಾರ್ಥ ಹೃದಯಕ್ಕೆ?


ಅದೆಷ್ಟೇ ನೋವಿದ್ದರೂ ಯಾವುದನ್ನೂ ತೋರಿಸಿಕೊಳ್ಳದೆ ನಮ್ಮೆದುರು ನಗುನಗುತ್ತಿರುವ ನಗುಮೊಗದ ಜಾದೂಗಾರ ನೀನು. ಬಯಸಿದ್ದನೆಲ್ಲಾ ಕೋಡಿಸುವ ಮುಗ್ಧ ಜೀವ ಅಪ್ಪ ನಿನ್ನದು.


ನಿನ್ನ ಕಣ್ಣುಗಳಲ್ಲಿ ಅದೆಷ್ಟೋ ಆಸೆಗಳಿತ್ತೋ ಏನೋ ಎಲ್ಲವನ್ನು ನಮಗಾಗಿ ಅದುಮಿಟ್ಟುಕೊಂಡು ನಮ್ಮ ಆಸೆಗಳನ್ನು ಪೂರೈಸುತ್ತಲೇ ಬಂದಿರುವೆ...! ನಿನ್ನ ಹೊಗಳಲು ಪದಗಳೇ ಸಿಗುತ್ತಿಲ್ಲ ಅಪ್ಪ.


ತಾಯಿ ನವಮಾಸ ಹೊತ್ತು ಹೆತ್ತು ಸಲಹಿದರೆ ತಂದೆ ತನ್ನ ಇಡೀ ಬದುಕನ್ನು ತನ್ನ ಹೆಂಡತಿ ಮಕ್ಕಳಿಗಾಗಿ ಮೀಸಲಿರುತ್ತಾನೆ. ಅಪ್ಪಾ..! ನೀ ನನ್ನ ಮೊದಲ ಹೀರೋ. ನನ್ನ ಪ್ರತಿಹೆಜ್ಜೆಯಲ್ಲೂ ಕೈ ಹಿಡಿದು ನಡೆಸಿ ಸರಿ ತಪ್ಪುಗಳನ್ನು ತಿದ್ದಿ ಸರಿಯಾದ ದಾರಿಯಲ್ಲಿ ನಡೆಸುತ್ತಿಯ, ಬದುಕಿಗೆ ನೆರಳಾಗಿ, ಬಾಳಿಗೆ ಸ್ಫೂರ್ತಿಯಾಗಿ, ಜೀವನದ ಯಾನವನ್ನು ಮುನ್ನಡೆಸುತ್ತಿರಿ.


ರಾಣಿಯಂತೆ ಸಾಕಿರುವೆ ನಿನ್ನ ಮುದ್ದು ಕಂದಮ್ಮನನ್ನು, ನನ್ನಿಂದದಾಗಿ ನೀ ಖುಷಿಪಟ್ಟಗೆಲ್ಲಾ ಇಡೀ ಪ್ರಪಂಚವನ್ನೇ ಗೆದ್ದಷ್ಟು ಖುಷಿಯಾಗಿ ಪಡುತ್ತೇನೆ. ಅದೆಷ್ಟು ಬಾರಿ ನಿನ್ನ ಹಸಿವು ಕಟ್ಟಿಕೊಂಡು, ನಮ್ಮ ಹಸಿವು ನೀಗಿಸುತ್ತಿದ್ದೆ. ನಿಜವಾಗಿಯೂ ಅಪ್ಪ ಎಂದರೆ ಕರ್ಣನೇ ಅಲ್ವಾ..? ನಾ ಕೇಳೋ ಮೊದಲೇ ನನ್ನ ಬೇಕುಬೇಡಗಳನ್ನು ಪೂರೈಸೋ ನಿನಗೆ ನಾ ಯಾವತ್ತಿಗೂ ಅಭಾರಿ ಅಪ್ಪ...


ಪ್ರತಿ ಬಾರಿ ಯಾರಾದರೂ ನನ್ನನ್ನು ನಿನ್ನ ಹೆಸರಿನಿಂದ ಕರೆದಾಗ ಅದೇನೋ ಖುಷಿ. ಭವಿಷ್ಯ ಕಟ್ಟುವ ಭರವಸೆ ನೀಡಿ ಕೈ ಹಿಡಿದು ಸರಿಯಾಗಿ ದಡಕ್ಕೆ ತಲುಪಿಸುವ ನೀನು ಯಾವ ಅಂಬಿಗನಿಗೇನು ಕಮ್ಮಿಯಿಲ್ಲ!

ಐ ಲವ್ ಯು ಅಪ್ಪ...

ಥ್ಯಾಂಕ್ಸ್ ಫಾರ್ ಎವ್ರಿಥಿಂಗ್.

ನಿನ್ನ ಪುಟ್ಟ ಕಂದಮ್ಮ...


-ನೀತಾ ರವೀಂದ್ರ

ದ್ವಿತೀಯ ಪತ್ರಿಕೋದ್ಯಮ

ವಿವೇಕಾನಂದ ಕಾಲೇಜ್ ಪುತ್ತೂರು

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top